• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವಾರಿಯರ್ಸ್‌ಗೆ ಶೌರ್ಯ ಪ್ರಶಸ್ತಿ, ನಗದು ಬಹುಮಾನ ನೀಡಲು ಆಗ್ರಹ

|

ಬೆಂಗಳೂರು, ಮೇ 30: ''ಕೊರೊನಾ ನಿಯಂತ್ರಣದ ಅಗತ್ಯ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಬಹುಮಾನ ನೀಡಬೇಕು'' ಎಂದು ಕಾಂಗ್ರೆಸ್ ಮುಖಂಡ ಶಾಸಕ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.

   ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ

   ಈ ಕುರಿತು ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ''ವೈದ್ಯರು, ದಾದಿಯರು ಪ್ಯಾರಾಮೆಡಿಕಲ್ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಅಂಚೆ ಇಲಾಖೆ ಸೇರಿದಂತೆ ಹಲವು ಇಲಾಖೆಯವರು ತಮ್ಮ ಆರೋಗ್ಯ ಹಾಗೂ ಪ್ರಾಣವನ್ನು ಲೆಕ್ಕಿಸದೇ ಕೊರೊನಾ ವಾರಿಯರ್ಸ್ ಗಳಾಗಿ, ತಮ್ಮ ಕುಟುಂಬದಿಂದ ದೂರವಿದ್ದು ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ'' ಎಂದಿದ್ದಾರೆ.

   ಪಿಯುಸಿ ಮೌಲ್ಯಮಾಪನಕ್ಕಾಗಿ ಉಪನ್ಯಾಸಕರಿಗೆ ಸರ್ಕಾರದಿಂದ ಧಮ್ಕಿ: ಎಚ್‌ಡಿಕೆ ಆರೋಪ

   ''ಕೊರೊನಾ ವಾರಿಯರ್ಸ್‌ಗೆ ಯಾವುದೇ ರೀತಿಯ ವಿಶೇಷ ಸವಲತ್ತು ನೀಡುತ್ತಿಲ್ಲ. ಇನ್ನಾದರೂ ಅವರಿಗೆ ಶೌರ್ಯ ಪ್ರಶಸ್ತಿ ಹಾಗೂ ವಿಶೇಷ ನಗದು ಪುರಸ್ಕಾರ ನೀಡಿ ವಿಶೇಷ ಗೌರವ ನೀಡಬೇಕು'' ಎಂದು ಎಂದು ತಮ್ಮ ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

   ಇನ್ನು ಕರ್ನಾಟಕದಲ್ಲಿ ಕೊರೊನಾ ವೈರಸ್‌ಗೆ ತುತ್ತಾದವರ ಸಂಖ್ಯೆ ಶನಿವಾರದ ಹೆಲ್ತ ಬುಲಿಟಿನ್ ಪ್ರಕಾರ, 2922 ಕ್ಕೆ ಏರಿಕೆಯಾಗಿದೆ. ಇದುವರೆಗೆ 47 ಜನ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

   English summary
   Government Must Announce Award For Corona Warriors: RV Deshpande Demand To Government, he letter sent to sm bs yediyurappa on saturday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X