Solar Rooftop Scheme: ಸೌರ ಮೇಲ್ಛಾವಣಿ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರದ ಮಾರ್ಗಸೂಚಿ
ಬೆಂಗಳೂರು, ಜೂನ್. 01: ಕರ್ನಾಟಕದಲ್ಲಿ ಸೋಲಾರ್ ಮೇಲ್ಛಾವಣಿ ಅಳವಡಿಕೆಯ ನಿಧಾನಗತಿಯನ್ನು ನೋಡಿ, ಇಂಧನ ಇಲಾಖೆಯು ಇತ್ತೀಚೆಗೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಮ್) ಸೌರ ಮೇಲ್ಛಾವಣಿ ಯೋಜನೆಗಳನ್ನು ತ್ವರಿತಗೊಳಿಸಲು ಮಾರ್ಗಸೂಚಿಗಳನ್ನು ನೀಡಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ ಸೌರ ಮೇಲ್ಛಾವಣಿ ದ್ಯುತಿವಿದ್ಯುಜ್ಜನಕ (SRTPV) ವ್ಯವಸ್ಥೆಗಳನ್ನು ಅಳವಡಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಿಂದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಮೂಲಕ, ಸೌರ ಮೇಲ್ಛಾವಣಿಯ ಅಪ್ಲಿಕೇಶನ್‌ಗಳನ್ನು ಪ್ರಕ್ರಿಯೆಗೊಳಿಸಲು ಸಾಮಾನ್ಯ ವೆಬ್‌ಸೈಟ್ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಹೊರಡಿಸಿದ ನಿಯಮಾವಳಿಯ ಅನುಷ್ಠಾನ ತಕ್ಷಣವೇ ಆಗಬೇಕು.

ಕೆಇಆರ್‌ಸಿ ಮಾರ್ಗಸೂಚಿಗಳ ಪ್ರಕಾರ ಎಸ್‌ಆರ್‌ಟಿಪಿವಿ ಸಿಂಕ್ರೊನೈಸೇಶನ್ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಅಧಿಕಾರಿಗಳಿಗೆ ದಂಡ ವಿಧಿಸಲು ಎಸ್ಕಾಮ್‌ಗಳಿಗೆ ಸರ್ಕಾರ ಆದೇಶಿಸಿದೆ. ಜೊತೆಗೆ, ಆನ್‌ಲೈನ್ ಸೋಲಾರ್ ಬಿಲ್ಲಿಂಗ್ ಸಾಫ್ಟ್‌ವೇರ್ ಮೇ 31 ರೊಳಗೆ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಬೆಸ್ಕಾಂಗೆ ತಿಳಿಸಲಾಗಿದೆ.
"ಬಿಲ್ಲಿಂಗ್ ಸಾಫ್ಟ್‌ವೇರ್‌ಗಾಗಿ ಅಂತಿಮ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಜೂನ್ 1 ರಿಂದ ಆನ್‌ಲೈನ್ ಬಿಲ್‌ಗಳನ್ನು ವಿತರಿಸುವ ನಿರೀಕ್ಷೆಯಲ್ಲಿದ್ದೇವೆ" ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಹಿಂದೂ ಉಲ್ಲೇಖಿಸಿದೆ.
ಗೃಹ ಜ್ಯೋತಿಯೇತರ ಗ್ರಾಹಕರೆ ಗುರಿ
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ನೇತೃತ್ವದ ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಮೇ 24 ರಂದು ಹೊಸ ಆದೇಶ ಹೊರಡಿಸಲಾಗಿದೆ. ಸೌರ ಯೋಜನೆಗಳ ಅನುಷ್ಠಾನಕ್ಕಾಗಿ 1 ಕಿಲೋ ವ್ಯಾಟ್ (kW) ನಿಂದ 3 kW ಸಾಮರ್ಥ್ಯದ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸುವ ದೇಶೀಯ ಗ್ರಾಹಕರ ಮೇಲೆ ಎಸ್ಕಾಮ್‌ಗಳು ಗಮನಹರಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

"ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸದ ಗ್ರಾಹಕರ ಮೇಲೆ ನಮ್ಮ ಗಮನವಿದೆ. ಹ ಜ್ಯೋತಿ ಯೋಜನೆಯ ಫಲಾನುಭವಿಗಳು ಎಸ್‌ಆರ್‌ಟಿಪಿವಿ ಸಿಸ್ಟಮ್‌ಗಳನ್ನು ಹಾಕಿಸಿಕೊಳ್ಳಲು ಉತ್ಸಾಹ ತೋರುತ್ತಿಲ್ಲ. ವಿಶೇಷವಾಗಿ ಬೆಂಗಳೂರು ಮೆಟ್ರೋಪಾಲಿಟನ್ ಏರಿಯಾ ವಲಯ (BMAZ) ಪ್ರದೇಶದಲ್ಲಿ, ಗೃಹ ಜ್ಯೋತಿ ಯೋಜನೆ ಪಡೆದವರು ಕೇವಲ 65% ಆಗಿದೆ. ಆದ್ದರಿಂದ, ಇಲ್ಲಿನ ಈ ಗ್ರಾಹಕರನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ" ಎಂದು ಮಹಾಂತೇಶ ಬಿಳಗಿ ದಿ ಹಿಂದೂಗೆ ತಿಳಿಸಿದರು.
ಉಪವಿಭಾಗದ ಅಧಿಕಾರಿಗಳು ಇತ್ತೀಚೆಗೆ ಎಸ್‌ಆರ್‌ಟಿಪಿವಿ ಅಳವಡಿಸುವ ಕುರಿತು ತರಬೇತಿ ಪಡೆದಿದ್ದಾರೆ. ಫೆಬ್ರವರಿಯಿಂದ ಪಿಎಂ ಸೂರ್ಯ ಘರ್ ಯೋಜನೆಯಡಿ ಬೆಸ್ಕಾಂ 12,061 ಅರ್ಜಿಗಳನ್ನು ಸ್ವೀಕರಿಸಿದೆ. ಇನ್ನು, ಸರ್ಕಾರದ ಹೊಸ ಆದೇಶವು 1 kW ನಿಂದ 150 kW ವರೆಗಿನ ಎಲ್ಲಾ ಸೌರ ಮೇಲ್ಛಾವಣಿ ಅಪ್ಲಿಕೇಶನ್‌ಗಳನ್ನು ಕಾರ್ಯಸಾಧ್ಯವೆಂದು ಪರಿಗಣಿಸಬೇಕು ಎಂದು ಹೇಳಿದೆ.
ಕಳೆದ ಕೆಲವು ದಿನಗಳಲ್ಲಿ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ಕೆಲವು ಗ್ರಾಹಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗಳನ್ನು ಇಂಧನ ಸಚಿವಾಲಯಕ್ಕೆ (ಎಂಎನ್‌ಆರ್‌ಇ) ತಿಳಿಸಲಾಗಿದೆ. ಅವರು ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಗ್ರಾಹಕರು ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ" ಎಂದು ಅಧಿಕಾರಿ ತಿಳಿಸಿದ್ದಾರೆ.











Click it and Unblock the Notifications