ಸರ್ಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕರಿಗೆ ಸಿಹಿಸುದ್ದಿ ನೀಡಿದ ಸರ್ಕಾರ
ಬೆಂಗಳೂರು, ನವೆಂಬರ್ 18: ಕರ್ನಾಟಕ ಸರ್ಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಸಿಹಿಸುದ್ದಿ ನೀಡಿದೆ. ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ ಸಹಾಯಕ ಪ್ರಾಧ್ಯಾಪಕರ ವೇತನದ ಕುರಿತು ಆದೇಶವೊಂದನ್ನು ಹೊರಡಿಸಿದ್ದಾರೆ. ಈ ಆದೇಶ ವೇತನ ಶ್ರೇಣಿ ರೂ.131400-217100ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ಕುರಿತು ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಆದೇಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಸಿ.ಎ.ಎಸ್ ರಡಿಯಲ್ಲಿ 2018ರ ಯುಜಿಸಿ ನಿಯಮಗಳ ಅನ್ವಯ ಶೈಕ್ಷಣಿಕ ಹಂತ 13ಎ ರ ವೇತನ ಶ್ರೇಣಿ ರೂ. 131400-217100 ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಬಗ್ಗೆ ಎಂಬ ವಿಷಯನ್ನು ಹೊಂದಿದೆ.

ಪ್ರಸ್ತಾವನೆ: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೆ 2016ರ ಪರಿಷ್ಕೃತ ಯು.ಜಿ.ಸಿ. ವೇತನ ಶ್ರೇಣಿಗಳನ್ನು ಆದೇಶಗಳಲ್ಲಿ ಜಾರಿಗೊಳಿಸಲಾಗಿರುತ್ತದೆ. ಈ ಆದೇಶದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ 2ರ [ಯು.ಜಿ.ಸಿ. ವೇತನ ಶ್ರೇಣಿ ರೂ.79800-21150] ರಲ್ಲಿ ಪೂರೈಸಿರುವ 03 ವರ್ಷಗಳ ಅರ್ಹತಾ ಅವಧಿಯನ್ನು ಪರಿಗಣಿಸಿ ಸಿ.ಎ.ಎಸ್ ರಡಿಯಲ್ಲಿ ಶೈಕ್ಷಣಿಕ ಹಂತ 13ಎ ರ ವೇತನ ಶ್ರೇಣಿ ರೂ. 131400-217100 ರಲ್ಲಿ ಸ್ಥಾನೀಕರಣ ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ.
ಸರ್ಕಾರ ಹಾಗೂ ಯು.ಜಿ.ಸಿ.ಯ ಆದೇಶಗಳನ್ವಯ 2016ರ ಯು.ಜಿ.ಸಿ. ವೇತನ ಶ್ರೇಣಿಯಲ್ಲಿ ಅನ್ವಯಿಸುವ ಷರತ್ತಿಗೆ ಒಳಪಟ್ಟು ಸಿ.ಎ.ಎಸ್ ಯೋಜನೆಯಡಿಯಲ್ಲಿ (Career Advancement Scheme) ಉನ್ನತ ಶೈಕ್ಷಣಿಕ ಹಂತಕ್ಕೆ ಸ್ಥಾನೀಕರಣ ಮಂಜೂರು ಮಾಡಲು ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿರುತ್ತದೆ. ಯುಜಿಸಿ ಮಾರ್ಗಸೂಚಿಗಳ ಹಾಗೂ ಸರ್ಕಾರದ ಆದೇಶ ಅನುಸಾರ ಶೈಕ್ಷಣಿಕ ಹಂತ 12 ರಿಂದ ಶೈಕ್ಷಣಿಕ ಹಂತ 13ಎ ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಸಂಬಂಧ ಪ್ರಾಂಶುಪಾಲರು ತಮ್ಮ ಹಂತದಲ್ಲಿ ಯು.ಜಿ.ಸಿ.ಯ ದಿನಾಂಕ: 18.07.2018ರ ಪ್ರಕಾರ ಆಯ್ಕೆ ಸಮಿತಿಯನ್ನು ರಚಿಸಿ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ ಸಂಬಂಧಿಸಿದಂತೆ, ಯು.ಜಿ.ಸಿ.ಯ ಯುಜಿಸಿ 2010 ರ ನಿಯಮ 4 ನೇ ತಿದ್ದುಪಡಿ ಪ್ರಕಾರ ಕೂಲಂಕಷವಾಗಿ ಪರಿಶೀಲಿಸಿ ಅರ್ಹ ಸಹಾಯಕ ಪ್ರಾಧ್ಯಾಪಕರಿಗೆ ಉನ್ನತ ಶೈಕ್ಷಣಿಕ ಹಂತ 13ಎ ರ ಸ್ಥಾನೀಕರಣಕ್ಕಾಗಿ ಶಿಫಾರಸು ಮಾಡಿರುವ ಪ್ರಸಾವನೆಯನ್ನು ರವಾನಿಸಿರುತ್ತಾರೆ.
ಸರ್ಕಾರದ ಆದೇಶ ಮತ್ತು ತಿದ್ದುಪಡಿ ಆದೇಶಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕರಿಗೆ ಸ್ಥಾನೀಕರಣ ಸೌಲಭ್ಯವನ್ನು ಸದರಿಯವರು ಸಿ.ಎ.ಎಸ್ ರಡಿ ಸ್ಥಾನೀಕರಣಕ್ಕೆ ಅರ್ಹತೆ ಹೊಂದಿದ ದಿನಾಂಕದಿಂದ ಅರ್ಹತಾ ಅವಧಿಯನ್ನು ಪರಿಗಣಿಸುವಂತೆ ಹಾಗೂ ವೇತನ ನಿಗದೀಕರಣ ಒಳಗೊಂಡಂತೆ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳನ್ನು ಸ್ಥಾನೀಕರಣ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯವರ್ತಿಯಾಗಿ ಮಂಜೂರು ಮಾಡಲು ಆದೇಶಿಸಲಾಗಿರುತ್ತದೆ. ಯುಜಿಸಿಯ ದಿನಾಂಕ 06.06.2024 ರ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸರ್ಕಾರದ ಪತ್ರದಲ್ಲಿ ಯುಜಿಸಿಯು 2018 ರ ನಿಯಮಾವಳಿಯ ಕಂಡಿಕೆ 6.3ಕ್ಕೆ ತಿದ್ದುಪಡಿ ತರಲಾಗಿರುತ್ತದೆ.
ಈ ಸಂಬಂಧ ಕ್ರಮವಹಿಸಲು ನಿರ್ದೇಶಿಸಿರುವುದರಿಂದ 2010 ರ ಯುಜಿಸಿ ಮಾರ್ಗಸೂಚಿಗಳನ್ವಯ ಪ್ರಾಂಶುಪಾಲರ ಹಂತದ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಕಛೇರಿಯ ಹಂತದಲ್ಲಿ ನಿಯಮಾನುಸಾರ ಪರಿಶೀಅಸಿ ಅರ್ಹ ಸಹಾಯಕ ಪ್ರಾಧ್ಯಾಪಕರನ್ನು ಕೇಂದ್ರ ಕಛೇರಿಯಲ್ಲಿ ರಚಿಸಲಾಗಿರುವ ವಿಷಯ ತಜ್ಞರು ಹಾಗೂ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನೊಳಗೊಂಡ ಆಯ್ಕೆ ಸಮಿತಿಯ ಮುಂದೆ ಪೂರಕ ದಾಖಲೆಗಳೊಂದಿಗೆ ಹಾಜರಾಗಲು ಅವಕಾಶ ನೀಡಲಾಯಿತು. ಅದರನ್ವಯ ಸಂದರ್ಶನಕ್ಕೆ/ ಪರಿಶೀಲನೆಗೆ ಹಾಜರಾದ ಸಹಾಯಕ ಪ್ರಾಧ್ಯಾಪಕರ ಎಪಿಐ(ಪಿಐಎಎಸ್)ಗೆ ಸಂಬಂಧಿಸಿದ ದಾಖಲೆಗಳನ್ನು, ಸಂಶೋಧನಾ ಲೇಖನಗಳು, ಶೈಕ್ಷಣಿಕ ಚಟುವಟಿಕೆಗಳು. ಪಠ್ಯ ಪುಸ್ತಕ ಪ್ರಕಟಿಸಿರುವ ಲೇಖನ, ಹಾಗೂ ಇತರೆ ಪೂರಕ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಸಿ ಶೈಕ್ಷಣಿಕ ಹಂತ 13 ಎ ಸ್ಥಾನೀಕರಣಕ್ಕೆ ಶಿಫಾರಸ್ಸು ಮಾಡಿ ಇಲಾಖಾ ಹಂತದ ಸಿ.ಎ.ಎಸ್ ಆಯ್ಕೆ ಸಮಿತಿಯ ತೀರ್ಮಾನದಂತೆ ಆಯ್ಕೆ ಹೊಂದಿದ ಸಹಾಯಕ ಪ್ರಾಧ್ಯಾಪಕರಿಗೆ ಯುಜಿಸಿ ವೇತನ ಶ್ರೇಣಿ: ರೂ.131400- 217100 ರಲ್ಲಿ ಶೈಕ್ಷಣಿಕ ಹಂತ 13ಎಕ್ಕೆ ಸ್ಥಾನೀಕರಣ ಮಂಜೂರು ಮಾಡಲು ಆದೇಶಿಸಲಾಗಿದೆ.
ಷರತುಗಳು
* 2018ರ ಯುಜಿಸಿ ವೇತನ ಶ್ರೇಣಿಗಳಲ್ಲಿನ ಗ್ರೇಡಿಂಗ್ ಆಧಾರಿತ ಶೈಕ್ಷಣಿಕ ಹಂತ ಮಂಜೂರಾತಿಯು ಯುಜಿಸಿ/ ಸರ್ಕಾರದ ಆದೇಶಗಳಲ್ಲಿನ ನಿಯಮಗಳ ನಿಬಂಧನೆಗಳೂಪಟ್ಟಿರುತ್ತದೆ.
* ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿಗಳನ್ನು ಒದಗಿಸಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಸಹ ಪ್ರಾಧ್ಯಾಪಕರ ಶೈಕ್ಷಣಿಕ ಮಂಜೂರಾತಿಯನ್ನು ಯಾವುದೇ ಮುನ್ಸೂಚನೆಯನ್ನು ನೀಡದೇ ಹಿಂಪಡೆಯಲಾಗುವುದು, ತಪ್ಪು ಮಾಹಿತಿ ಒದಗಿಸಿದ ಸಹಾಯಕ ಪ್ರಾಧ್ಯಾಪಕರು ಗ್ರಂಥಪಾಲಕರು/ ದೈಹಿಕ ಶಿಕ್ಷಣ ನಿರ್ದೇಶಕರ ಹಾಗೂ ಶಿಫಾರಸ್ಸು ಮಾಡಿರುವ ಪ್ರಾಂಶುಪಾಲರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.
* ಸಹಾಯಕ ಪ್ರಾಧ್ಯಾಪಕರ ಖಾಯಂ ನೇಮಕಾತಿ ದಿನಾಂಕ, ಯು.ಜಿ.ಸಿ. ವೇತನ ನಿಗದೀಕರಣದ ದಿನಾಂಕ, ವೇತನ ರಹಿತ ರಜೆ/ ಅನಧಿಕೃತ ಗೈರು ಹಾಜರಿ, ಶಿಸ್ತು ಕ್ರಮದ ಮಾಹಿತಿ, ಸಂಶೋಧನಾ ಲೇಖನ ಹಾಗೂ ರೆಫ್ರೆಷರ್ ಕೋರ್ಸ್‌ಗಳನ್ನು ನಿಗದಿತ ಎರಡು ವಾರದ ತರಬೇತಿ ಪೂರೈಸಿರುವುದು. ಇನ್ನಿತರೆ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ಹಂತದ ಸಮಿತಿಯು ಮತ್ತೊಮ್ಮೆ ಪರಿಶೀಲಿಸುವ ನಿಬಂಧನೆಗೊಳಪಟ್ಟಿರುತ್ತದೆ.
* ಈ ಸ್ಥಾನೀಕರಣ. ಮಂಜೂರಾತಿಯು ಯುಜಿಸಿ/ ಸರ್ಕಾರ/ ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆ/ ಪತ್ರಗಳಲ್ಲಿ ನಿಗದಿಪಡಿಸುವ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಈ ವೃತ್ತಿ ಪದೋನ್ನತಿಯನ್ನು ಸೇವಾ ಜೇಷ್ಠತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
* ಈ ಆದೇಶದನ್ವಯ ಮಂಜೂರು ಮಾಡಲಾದ ಶೈಕ್ಷಣಿಕ ಹಂತಗಳ ಸ್ಥಾನೀಕರಣವು ಸ್ಥಳೀಯ/ ಮಹಾಲೇಖಪಾಲರ ಲೆಕ್ಕಪರಿಶೋಧನೆಗೆ ಒಳಪಟ್ಟಿದ್ದು, ಯಾವುದೇ ಅಸಂಗತೆ ಮಾಹಿತಿ ಕಂಡು ಬಂದಲ್ಲಿ ಮರು ಪರಿಶೀಲಸುವ ಮತ್ತು ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವ ಷರತ್ತಿಗೊಳಪಟ್ಟಿರುತ್ತದೆ.
* ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಹಾಗೂ ತಿದ್ದುಪಡಿ ನಿಯಮಗಳು 2015ರನ್ವಯ ಸರ್ಕಾರಿ ನೌಕರರು ಸರ್ಕಾರದಿಂದ ನಿಗದಿಪಡಿಸಲಾಗಿರುವ ಅಧಿಕೃತ ಏಜೆನ್ಸಿಯಾದ KEONICS ನಿಂದ ನಡೆಸಲಾಗುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿ.ಎಲ್.ಟಿ) ಕಡ್ಡಾಯವಾಗಿ ಉತ್ತೀರ್ಣರಾಗಬೇಕಾಗಿರುತ್ತದೆ. (ಸಿ.ಎಲ್.ಟಿ) ಆದುದರಿಂದ ಈ ಆದೇಶದಲ್ಲಿ ಎ.ಜಿ.ಪಿ. ಮಂಜೂರಾಗಿರುವ ಬೋಧಕರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪೂರೈಸಿ ಸಲ್ಲಿಸುವಂತಹ ಪ್ರಮಾಣ ಪತ್ರವನ್ನು ಅವರ ಎ.ಜಿ.ಪಿ. ದಾಖಲಾತಿಗಳೊಂದಿಗೆ ಕಾಲೇಜಿನಲ್ಲಿ ಸಂರಕ್ಷಿಸುವಂತೆ ಪ್ರಾಂಶುಪಾಲರಿಗೆ ತಿಳಿಸಲಾಗಿದೆ.
* ಸ್ಥಾನೀಕರಣ ಮಂಜೂರಾತಿ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ದೃಢೀಕರಣ ಪತ್ರಗಳಲ್ಲಿನ ಮಾಹಿತಿಯಲ್ಲಿ ಯಾವುದೇ ವ್ಯತಿರಕ್ತ ಮಾಹಿತಿ ಕಂಡು ಬಂದಲ್ಲಿ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ. ಅಲ್ಲದೇ ಸುಳ್ಳು ಮಾಹಿತಿ/ಅಕ್ರಮ ದಾಖಲೆ ನೀಡಿದ ಅಧ್ಯಾಪಕರಿಗೆ ಮಂಜೂರಾತಿ ಆದೇಶವನ್ನು ರದ್ದುಗೊಳಿಸಲಾಗುವುದು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications