Government Employee: ಸರ್ಕಾರಿ ನೌಕರರು ಕಡ್ಡಾಯವಾಗಿ ಈ ವಿಮೆ ಮಾಡಿಸಿ

ಬೆಂಗಳೂರು, ಜನವರಿ 21: ಕರ್ನಾಟಕದ ಸರ್ಕಾರಿ ನೌಕರರಿಗೆ ವಿಮೆ ಯೋಜನೆಯನ್ನು ಮಾಡಿಸುವಂತೆ ಸೂಚನೆ ನೀಡಲಾಗಿದೆ. ಈ ವಿಮಾ ಯೋಜನೆಗಳ ಕುರಿತು ಸರ್ಕಾರಿ ನೌಕರರಿಗೆ ಮಾಹಿತಿಗಳನ್ನು ನೀಡಿ, ಎಲ್ಲಾ ನೌಕರರು ಕಡ್ಡಾಯವಾಗಿ ವಿಮೆ ಮಾಡಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಹ ತಿಳಿಸಲಾಗುತ್ತಿದೆ.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಡಿಸಬೇಕು ಎಂದು, ವಿಮೆ ಯೋಜನೆ ಕುರಿತು ಅವರಿಗೆ ಮಾಹಿತಿ ನೀಡಲಾಗುತ್ತಿದೆ.

Government Employees Insurance Scheme Details

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ಕುರಿತು ಅಧಿಕಾರಿಗಳಿಗೆ ಸಭೆಯನ್ನು ನಡೆಸಿ ಮಾಹಿತಿ ನೀಡಲಾಗುತ್ತಿದೆ. ಈ ಯೋಜನೆಗಳನ್ನು ಮಾಡಿಸಿಕೊಂಡರೆ ಕುಟುಂಬದವರಿಗೆ ದೊರೆಯುವ ಸೌಲಭ್ಯಗಳ ಕುರಿತು ವಿವರಗಳನ್ನು ನೀಡಲಾಗುತ್ತಿದೆ.

ನೌಕರರಿಗೆ ಮಾಹಿತಿ: ಉನ್ನತ ಅಧಿಕಾರಿಗಳು ತಮ್ಮ ಕಛೇರಿಯಲ್ಲಿರುವ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಿ. ಇದು ಸರ್ಕಾರಿ ನೌಕರರು ಮಾತ್ರವಲ್ಲದೆ ಸಾರ್ವಜನಿಕರು ಸಹ ಈ ಪಾಲಿಸಿ ಮಾಡಿಕೊಂಡರೆ ಅವರಿಗೂ ತುಂಬಾ ಅನುಕೂಲವಾಗಲಿದ್ದು. ಸಾಮಾನ್ಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತರಲಾಗಿದೆ ವಿವರಣೆ ನೀಡಬೇಕು ಎಂದು ತಿಳಿಸಲಾಗುತ್ತಿದೆ.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ವಾರ್ಷಿಕ ಕೇವಲ 20 ರೂ. ಕಟ್ಟಿದರೆ 2 ಲಕ್ಷ ರೂ.ಗಳ ದುರ್ಘಟನಾ ವಿಮೆ ಸಿಗಲಿದ್ದು 18 ರಿಂದ 70 ವರ್ಷದ ವರೆಗಿನ ಪ್ರಾಯದ ಎಲ್ಲಾ ಸೇವಿಂಗ್ಸ್ ಬ್ಯಾಂಕ್ ಖಾತೆದಾರರು ಈ ಪಾಲಿಸಿ ಮಾಡಬಹುದಾಗಿದೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವಾರ್ಷಿಕ ಪ್ರಿಮಿಯಮ್ 436 ರೂ. ಕಟ್ಟಿದರೆ 2 ಲಕ್ಷ ರೂ. ತನಕ ಜೀವ ವಿಮೆ ಸಿಗಲಿದ್ದು, 18 ರಿಂದ 50 ವರ್ಷದ ಪ್ರಾಯದ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆದಾರರು ಈ ಪಾಲಿಸಿಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.

ವಿಶೇಷವಾಗಿ ಹಳ್ಳಿಗಾಡಿನ ಜನರಿಗೆ ಈ ಯೋಜನೆಗಳಿಂದ ತುಂಬಾ ಉಪಯೋಗವಾಗಲಿದೆ. ಕಡಿಮೆ ಪ್ರಿಮಿಯಂ ಕಟ್ಟಿದರೆ ಸಾಕು ಇದರ ಲಾಭ ಸಿಗಲಿದೆ. ಇದಕ್ಕೆ ಭಾರತ ದೇಶದ ಎಲ್ಲಾ ನಾಗರಿಕರು ಅರ್ಹರು. ಯಾವುದೇ ಬ್ಯಾಂಕಿನಲ್ಲಿ ತಮ್ಮ ಅಕೌಂಟ್ ಇದ್ದರೆ ಪ್ರಿಮಿಯಂ ಮೊತ್ತ ತಾನಾಗಿಯೇ ಕಡಿತವಾಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಈ ಪಾಲಿಸಿ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ 9 ಮೇ 2015ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮೂರು ವಿಮೆ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗೆ ಚಾಲನೆ ನೀಡಿದರು. ಜನರಿಗೆ ಕೈಗೆಟುಕುವ ವಿಮೆ ಮತ್ತು ಭದ್ರತೆಯನ್ನು ಒದಗಿಸಲು ಈ ಯೋಜನೆಗಳನ್ನು ಜಾರಿಗೊಳಿಸಲಾಯಿತು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)ಯನ್ನು ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾದ ಒಂದು ವರ್ಷದ ಜೀವ ವಿಮಾ ಯೋಜನೆಯಾಗಿದ್ದು, ಯಾವುದೇ ಕಾರಣದಿಂದ ಮರಣಕ್ಕೆ ಕವರೇಜ್ ನೀಡುತ್ತದೆ. ವೈಯಕ್ತಿಕ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರುವ 18-50 ವರ್ಷ ವಯಸ್ಸಿನ ವ್ಯಕ್ತಿಗಳು ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಅರ್ಹರು. 50 ವರ್ಷಗಳನ್ನು ಪೂರೈಸುವ ಮೊದಲು ಯೋಜನೆಗೆ ಸೇರುವ ಜನರು ನಿಯಮಿತ ಪ್ರೀಮಿಯಂ ಪಾವತಿಸಿದ ನಂತರ 55 ವರ್ಷಗಳವರೆಗೆ ಮುಂದುವರಿಸಬಹುದು.

ಖಾತೆದಾರರ ಬ್ಯಾಂಕ್‌ನ ಶಾಖೆ/ ಬಿಸಿ ಪಾಯಿಂಟ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಯ ಸಂದರ್ಭದಲ್ಲಿ ಪೋಸ್ಟ್ ಆಫೀಸ್‌ಗೆ ಭೇಟಿ ನೀಡುವ ಮೂಲಕ ಯೋಜನೆಯಡಿ ನೋಂದಣಿ ಮಾಡಿಸಬಹುದು. ಯೋಜನೆಯ ಅಡಿಯಲ್ಲಿ ಪ್ರೀಮಿಯಂ ಅನ್ನು ಖಾತೆದಾರರಿಂದ ಒಂದು ಬಾರಿಯ ಆದೇಶದ ಆಧಾರದ ಮೇಲೆ ಚಂದಾದಾರರ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ಸ್ವಯಂ ಡೆಬಿಟ್ ಮಾಡಲಾಗುತ್ತದೆ. ವಿವರವಾದ ಮಾಹಿತಿ ಪ್ರಾದೇಶಿಕ ಭಾಷೆಗಳಲ್ಲಿ https://jansuraksha.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+