ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್‌: ಸಂಬಳ, GPF, ರಜೆ ಮಂಜೂರಾತಿಗೆ ಸಕಾಲದಲ್ಲಿ ಡೆಡ್‌ಲೈನ್ ಫಿಕ್ಸ್!

ಕರ್ನಾಟಕದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ನೌಕರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಸಂಬಳ, ಜಿಪಿಎಫ್‌ (GPF), ರಜೆ ಮಂಜೂರಾತಿ ಸೇರಿದಂತೆ ಪ್ರಮುಖ ಸಿಬ್ಬಂದಿ ಸೇವೆಗಳನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದ ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ಪಡೆಯಲು ನೌಕರರಿಗೆ ಅನುಕೂಲವಾಗಲಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಬಂಧಿಸಿದ ಹಲವಾರು ಪ್ರಮುಖ ಸೇವೆಗಳನ್ನು ಈಗ 'ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011'ರ ವ್ಯಾಪ್ತಿಗೆ ತರಲಾಗಿದೆ. ಆಡಳಿತ ಸುಧಾರಣಾ ಆಯೋಗ-2ರ ಏಳನೇ ವರದಿಯ ಶಿಫಾರಸುಗಳ ಅನುಸಾರ, ಈ ಸೇವೆಗಳನ್ನು ಎಲ್ಲಾ ಕ್ಷೇತ್ರ ಮಟ್ಟದ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.

Government Employees Employees Salary GPF and Leave Approval Services Under Sakala With Fixed Deadlines

​ಸಂಬಳ ಮತ್ತು ವೇತನಕ್ಕೆ ಸಂಬಂಧಿಸಿದ ಸೇವೆಗಳು

* ಸಂಬಳ ವಿತರಣೆ: 3 ಕೆಲಸದ ದಿನಗಳು

* ಕಾಲಮಿತಿ ವೇತನ ಬಡ್ತಿ ಮಂಜೂರಾತಿ: 15 ಕೆಲಸದ ದಿನಗಳು

* ಹಿರಿಯ ವೇತನ ಶ್ರೇಣಿ ಮಂಜೂರಾತಿ: 30 ಕೆಲಸದ ದಿನಗಳು

* ವಾರ್ಷಿಕ ಬಡ್ತಿ ಮಂಜೂರಾತಿ: 15 ಕೆಲಸದ ದಿನಗಳು

* ವಿವಿಧ ಬಗೆಯ ರಜೆಗಳ ಮಂಜೂರಾತಿ (ಗಳಿಕೆ ರಜೆ / ಪರಿವರ್ತಿತ ರಜೆ / ಅರ್ಧ ವೇತನ ರಜೆ / ಅಸಾಧಾರಣ ರಜೆ): 10 ಕೆಲಸದ ದಿನಗಳು

* ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರಾತಿ: 30 ಕೆಲಸದ ದಿನಗಳು

* ಪ್ರವಾಸ ಭತ್ಯೆ ಕೋರಿಕೆ / ಮಂಜೂರಾತಿ: 30 ಕೆಲಸದ ದಿನಗಳು

* ಪಿಂಚಣಿ ಮತ್ತು ಉಪದಾನಗಳ ಇತ್ಯರ್ಥದ ಪ್ರಸ್ತಾವನೆಗಳನ್ನು ಮಹಾಲೇಖಪಾಲರಿಗೆ ಕಳುಹಿಸುವುದು: 30 ಕೆಲಸದ ದಿನಗಳು

* ಸಾಮಾನ್ಯ ಭವಿಷ್ಯ ನಿಧಿ (GPF) ಮುಂಗಡ ಮತ್ತು ಭಾಗಶಃ / ಅಂತಿಮ ಹಿಂಪಡೆಯುವಿಕೆ ಮಂಜೂರಾತಿ: 30 ಕೆಲಸದ ದಿನಗಳು

* ಹಬ್ಬದ ಮುಂಗಡ ಮಂಜೂರಾತಿ: 7 ಕೆಲಸದ ದಿನಗಳು

* ವರ್ಗಾವಣೆ / ನಿಯೋಜನೆ ಮೇರೆಗೆ ಅಂತಿಮ ವೇತನ ಪ್ರಮಾಣಪತ್ರ ನೀಡುವುದು: 15 ಕೆಲಸದ ದಿನಗಳು

* ಸೇವಾ ಪುಸ್ತಕವನ್ನು ಕಳುಹಿಸುವುದು: 15 ಕೆಲಸದ ದಿನಗಳು

* ಪರೀಕ್ಷಾರ್ಥ ಸೇವಾವಧಿ ಘೋಷಣೆ / ವಿಸ್ತರಣೆ: 30 ಕೆಲಸದ ದಿನಗಳು

* ಸ್ಥಾನಪನ್ನಾವಧಿ ಘೋಷಿಸುವುದು: 30 ಕೆಲಸದ ದಿನಗಳು

* ವೇತನ ಪ್ರಮಾಣ ಪತ್ರ ನೀಡುವುದು: 3 ಕೆಲಸದ ದಿನಗಳು

* ಆಧರ್ಪಿತ ರಜೆಯ ವೇತನ ಮಂಜೂರಾತಿ: 15 ಕೆಲಸದ ದಿನಗಳು

* ಅರ್ಜಿಯನ್ನು ಸಮುಚಿತ ಮಾರ್ಗದಲ್ಲಿ ರವಾನಿಸುವುದು (KGID, BIS, GPF ಇತ್ಯಾದಿ): 7 ಕೆಲಸದ ದಿನಗಳು

* ಪ್ರಭಾರ ಭತ್ಯೆ ಮಂಜೂರಾತಿ: 10 ಕೆಲಸದ ದಿನಗಳು

* ಬಾಕಿ ವೇತನ ಮಂಜೂರಾತಿ: 90 ಕೆಲಸದ ದಿನಗಳು

* ಅನುಕಂಪದ ಆಧಾರದ ಮೇಲೆ ನೇಮಕಾತಿ: 90 ಕೆಲಸದ ದಿನಗಳು

* ಅಧಿಕಾರಿಗಳಿಗೆ ಕೆಸಿಎಸ್‌ಆರ್ 53(ಎಫ್) ರನ್ವಯ ಪ್ರಮಾಣ ಪತ್ರ ನೀಡುವುದು: 15 ಕೆಲಸದ ದಿನಗಳು

* ಜೇಷ್ಠತಾ ಪಟ್ಟಿಯಲ್ಲಿ ಹೆಸರು ಮತ್ತು ಕ್ರಮ ಸಂಖ್ಯೆ ತಿದ್ದುಪಡಿ: 30 ಕೆಲಸದ ದಿನಗಳು

* ಮರಣ ಪ್ರಕರಣಗಳ ಇತ್ಯರ್ಥ: 30 ಕೆಲಸದ ದಿನಗಳು

* ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರಾತಿ: 30 ಕೆಲಸದ ದಿನಗಳು

* ಫಾರ್ಮ್-16 ನೀಡುವುದು: 5 ಕೆಲಸದ ದಿನಗಳು

* ಪಾಸ್‌ಪೋರ್ಟ್ ಪಡೆಯಲು ನಿರಾಕ್ಷೇಪಣಾ ಪತ್ರ (NOC) ನೀಡುವುದು: 10 ಕೆಲಸದ ದಿನಗಳು

* ವಾಹನ ಮುಂಗಡ / ಗೃಹ ನಿರ್ಮಾಣ ಮುಂಗಡ ಮಂಜೂರಾತಿ: 15 ಕೆಲಸದ ದಿನಗಳು

* ಮನೆ / ನಿವೇಶನ / ವಾಹನ ಖರೀದಿ ಅಥವಾ ಮಾರಾಟಕ್ಕೆ ಅನುಮತಿ: 30 ಕೆಲಸದ ದಿನಗಳು

* ವಿದೇಶ ಪ್ರವಾಸಕ್ಕೆ ಅನುಮತಿ: 15 ಕೆಲಸದ ದಿನಗಳು

* ಉನ್ನತ ವ್ಯಾಸಂಗಕ್ಕೆ ಅನುಮತಿ: (ಸರ್ಕಾರ ನಿಗದಿಪಡಿಸಿದ ಕೆಲಸದ ದಿನಗಳು)

* ಪ್ರಥಮ ವೇತನ ಪಡೆಯಲು ಅನುಮತಿ: 7 ಕೆಲಸದ ದಿನಗಳು

* ಸೇವಾ ಪುಸ್ತಕದ ನಕಲು ನೀಡುವುದು: 15 ಕೆಲಸದ ದಿನಗಳು

* ಅಂಗವಿಕಲ ಭತ್ಯೆ ಮಂಜೂರಾತಿ: 90 ಕೆಲಸದ ದಿನಗಳು

* ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ಯೆ ಮಂಜೂರಾತಿ: 30 ಕೆಲಸದ ದಿನಗಳು

* ಅನ್ಯ ಸೇವಾ ನಿಯೋಜನೆಯಲ್ಲಿರುವ ಅಧಿಕಾರಿಗಳಿಗೆ ಷರತ್ತು ಮತ್ತು ನಿಬಂಧನೆಗಳು: 15 ಕೆಲಸದ ದಿನಗಳು

​ಇತರ ಪ್ರಮುಖ ಸಿಬ್ಬಂದಿ ಸೇವೆಗಳು

​ಹಬ್ಬದ ಮುಂಗಡ ಮಂಜೂರಾತಿ - 7 ಕೆಲಸದ ದಿನಗಳು, ಸೇವಾ ಪುಸ್ತಕ ಕಳುಹಿಸುವುದು ಹಾಗೂ ಸೇವಾ ಪುಸ್ತಕದ ನಕಲು ನೀಡುವುದು - 15 ಕೆಲಸದ ದಿನಗಳು, ಪರೀಕ್ಷಾರ್ಥ ಸೇವಾವಧಿ ಘೋಷಣೆ/ವಿಸ್ತರಣೆ, ಸ್ಥಾನಪನ್ನಾವಧಿ ಘೋಷಣೆ, ಕೆಸಿಎಸ್‌ಆರ್ 53(ಎಫ್) ರನ್ವಯ ಪ್ರಮಾಣ ಪತ್ರ, ಜೇಷ್ಠತಾ ಪಟ್ಟಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರಾತಿ - 30 ಕೆಲಸದ ದಿನಗಳು, ಅನುಕಂಪದ ಆಧಾರದ ಮೇಲೆ ನೇಮಕಾತಿ ಮತ್ತು ಅಂಗವಿಕಲ ಭತ್ಯೆ ಮಂಜೂರಾತಿ - 90 ಕೆಲಸದ ದಿನಗಳು, ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ಯೆ ಮಂಜೂರಾತಿ - 30 ಕೆಲಸದ ದಿನಗಳು.

Government Employees: ​ವಿಶೇಷ ಸೂಚನೆಗಳು

ಈಗಾಗಲೇ ಸಕಾಲ ವ್ಯಾಪ್ತಿಯಲ್ಲಿರುವ ಇಲಾಖೆಗಳು ತಮ್ಮ ಪೂರ್ವಾಸ್ತಿತ್ವದಲ್ಲಿದ್ದ ಅಧಿಕಾರಿಗಳ ವ್ಯವಸ್ಥೆಯನ್ನೇ ಮುಂದುವರಿಸಲಿದ್ದು, ಉಳಿದ ಇಲಾಖೆಗಳ ನೋಡಲ್ ಅಧಿಕಾರಿಗಳು ಅಧಿಸೂಚನೆ ಹೊರಬಿದ್ದ 15 ದಿನಗಳ ಒಳಗಾಗಿ ಸಕಾಲ ಮಿಷನ್‌ಗೆ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಅಲ್ಲದೆ, ಮೊದಲನೇ ಹಾಗೂ ಎರಡನೇ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸಕ್ಷಮ ಪ್ರಾಧಿಕಾರಗಳಿಗೆ ಏಕರೂಪವಾಗಿ 35 ಕೆಲಸದ ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ.

ಸಿಬ್ಬಂದಿ ಸೇವೆಗಳನ್ನು ನಿಯಮಿತ ಸಮಯದಲ್ಲೇ ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಕಾಲಮಿತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+