Foxconn-Karnataka: ಐಫೋನ್ ತಯಾರಿಕಾ ಸಂಸ್ಥೆಯಿಂದ ರಾಜ್ಯದಲ್ಲಿ ಭಾರೀ ಬಂಡವಾಳ ಹೂಡಿಕೆ, ಅಂಕಿ-ಸಂಖ್ಯೆ
ಬೆಂಗಳೂರು, ಡಿಸೆಂಬರ್ 13: ಹೆಚ್ಚು ಖ್ಯಾತಿ ಪಡೆದ ಆಪಲ್ ಐಫೋನ್ ತಯಾರಕ ಫಾಕ್ಸ್‌ಕಾನ್ (Foxconn) ಕಂಪನಿಯು ಕರ್ನಾಟಕದಲ್ಲಿ ಅತ್ಯಧಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 14,000 ಕೋಟಿ ರೂಪಾಯಿ (ಹೆಚ್ಚುವರಿಯ $1.67 ಶತಕೋಟಿ) ಹಣವನ್ನು ವಿನಿಯೋಗಿಸಲು ಸಜ್ಜಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ (SHLCC) ದಕ್ಷಿಣ ರಾಜ್ಯದಲ್ಲಿ ಹೂಡಿಕೆ ಮಾಡುವ ಫಾಕ್ಸ್‌ಕಾನ್‌ನ ಪ್ರಸ್ತಾವನೆಗೆ ಮಂಗಳವಾರ ಅನುಮೋದನೆ ನೀಡಿದೆ ಎಂದು ಮೂಲಗಳು ದೃಢಪಡಿಸಿವೆ.

ಈಗಾಗಲೇ ಮಾತನಾಡಿಕೊಂಡಂತೆ ದೇವನಹಳ್ಳಿ ವ್ಯಾಪ್ತಿಯಲ್ಲಿ ಫಾಕ್ಸ್‌ಕಾನ್ ಐಫೋನ್ ಉತ್ಪಾದನೆ ಘಟಕೆ ಸ್ಥಾಪಿಸುವುದಾಗಿ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ ಬಂಡವಾಳ ಹೂಡಿಕೆ ಪ್ರಮಾಣ ಬಹಿರಂಗಗೊಂಡಿದೆ. ರಾಜ್ಯ ಸರ್ಕಾರ, ಹೂಡಿಕೆಗಾಗಿ 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಭಾರತದಲ್ಲಿ ಜಾಲ ವಿಸ್ತರಿಸುತ್ತಿರುವ ಫಾಕ್ಸ್‌ಕಾನ್
ಹಿಂದಿನಿ ತಿಂಗಳು ನವೆಂಬರ್‌ನಲ್ಲಿ ಐಫೋನ್ (iPhone) ತಯಾರಕರು ನಿರ್ಮಾಣ ಯೋಜನೆಗಳಿಗಾಗಿ ಮತ್ತೊಂದು NT$50 ಶತಕೋಟಿ ($1.6 ಶತಕೋಟಿ) ಹೂಡಿಕೆ ಮಾಡಲಿದೆ. ಈ ಮೂಲಕ ಭಾರತದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸುವ ಯೋಜನೆ ಪ್ರಕಟಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಟಾಟಾ ಸಂಸ್ಥೆಯವರು ಐಫೋನ್ ಜಾಲ ವಿಸ್ತರಣೆಗೆ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಕಳೆದ ಆಗಸ್ಟ್‌ನಲ್ಲಿ ಫಾಕ್ಸ್‌ಕಾನ್ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಎರಡು ಪ್ರಮುಖ ತಯಾರಿಕೆ ಘಟಕ ಸ್ಥಾಪಿಸುವುದಾಗಿ, ಆ ಸಂಬಂಧ ಹೂಡಿಕೆ ಮಾಡುವ ಬಗ್ಗೆ ($600 ಮಿಲಿಯನ್ ಹೂಡಿಕೆ) ಪ್ನಾಲ್ ಕುರಿತು ಘೋಷಣೆ ಮಾಡಿತ್ತು. ಈ ಕುರಿತು ಫಾಕ್ಸ್‌ಕಾನ್ ಕಂಪನಿಯು ರಾಜ್ಯ ಕೈಗಾರಿಕೆ ಸಚಿವರ ಜತೆ ಚರ್ಚೆ ನಡೆಸಿದ್ದರು.

ಐಫೋನ್ ಉತ್ಪಾದನಾ ಘಟಕ ಹೀಗಿರಲಿದೆ
ಇನ್ನೂ ಬಹುಬೇಡಿಕೆಯ ಐಫೋನ್‌ಗಳಿಗೆ ಯಾಂತ್ರಿಕ ಸ್ಥಾವರ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಇಂಕ್‌ನೊಂದಿಗೆ ಕಾರ್ಯ ನಿರ್ವಹಿಸುವ ಸೆಮಿಕಂಡಕ್ಟರ್ ಉಪಕರಣಗಳು ಈ ಉತ್ಪಾದನಾ ಘಟಕವು ಒಳಗೊಂಡಿರಲಿದೆ ಎಂದು ತಿಳಿಸಿತ್ತು.
ಐಫೋನ್ ಒಂದು ಘಟಕ ಬೆಂಗಳೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ದೇವನಹಳ್ಳಿಯಲ್ಲಿ 300 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಫಾಕ್ಸ್‌ಕಾನ್ ಗುರಿ ಇಟ್ಟುಕೊಂಡಿದೆ. ಭೂಮಿ ಹಸ್ತಾಂತರ ಪ್ರಕ್ರಿಯೆ, ಒಪ್ಪಂದ, ಅನುಮೋದನೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.
ಫಾಕ್ಸ್‌ಕಾನ್ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಈ ಉದ್ಯಮಗಳ ಸ್ಥಾಪನೆಯೊಂದಿಗೆ ಮುಂದುವರಿಯಲು ಇದು ಮಹತ್ವದ ಅವಕಾಶ ಆಗಿದೆ. ಅಲ್ಲದೇ ಸರ್ಕಾರದೊಂದಿಗೆ ಮಾಡಿಕೊಂಡು ಈ ಒಪ್ಪಂದ, ಯೋಜನೆಗಗಳ ಅನುಮೋದನೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತವೆ. ಅಲ್ಲದೇ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ ಎಂದು ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.












Click it and Unblock the Notifications