Get Updates
Get notified of breaking news, exclusive insights, and must-see stories!

Nagamale: ಚಾಮರಾಜನಗರದ ನಾಗಮಲೆಗೆ ಉಚಿತ ಪ್ರವೇಶ: ಷರತ್ತುಗಳು ಅನ್ವಯ!

ಚಾಮರಾಜನಗರ ನವೆಂಬರ್‌ 1: ಚಾಮರಾಜನಗರದ ನಾಗಮಲೆ ಚಾರಣ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನಾಗಮಲೆಗೆ ತೆರಳುವ ಮಾದಪ್ಪನ ಭಕ್ತರಿಗೆ ಉಚಿತ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ. ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಹತ್ತಿರವಾದ ನಾಗಮಲೆ ಚಾರಣಕ್ಕೆ ವಿಧಿಸಲಾಗಿದ್ದ ನಿಷೇಧ ಆದೇಶವನ್ನು ಕರ್ನಾಟಕ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಬಹುತೇಕ ಭಕ್ತಾದಿಗಳು ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುವುದು ಸಂಪ್ರದಾಯವಿದೆ. ಜಾತ್ರಾ ಮಹೋತ್ಸವ, ಹಬ್ಬ ಹರಿದಿನ ಸೇರಿದಂತೆ ಇನ್ನಿತರ ದಿನಗಳಲ್ಲಿ ಭಕ್ತಾದಿಗಳು ದಿನದ 24 ಗಂಟೆಯೂ ನಾಗಮಲೆ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಸಾಲು ಸಾಲು ಹಬ್ಬ ರಜೆಗಳು ಇರುವುದರಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

Government allowed free entry to Nagamale in Chamarajanagar

ಆದರೆ ಅಲ್ಲಿಗೆ ಹೋಗುವಾಗ ಹಾಗೂ ಬರುವಾಗ ಕಾಡು ಪ್ರಾಣಿಗಳು ದಾಳಿ ನಡೆಸಿದ ಪರಿಣಾಮ ಈ ಹಿಂದೆ ಭಕ್ತಾದಿಗಳು ಮೃತಪಟ್ಟಿರುವುದಿದೆ. ಹೀಗಾಗಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಕಳೆದ ಫೆಬ್ರವರಿಯಲ್ಲಿ ನಾಗಮಲೆ ಕ್ಷೇತ್ರಕ್ಕೆ ಜೀಪ್ ಮುಖಾಂತರ ಹಾಗೂ ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿತ್ತು.

ನಾಗಮಲೆಗೆ ಚಾರಣಕ್ಕೆ ತೆರಳಲು ಅರಣ್ಯ ಇಲಾಖೆಯ www.aranyavihaara.karanataka.gov.inಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕಿತ್ತು. ದಿನಾಂಕ ನಿಗದಿ ಮಾಡಿಕೊಂಡ ನಂತರವೇ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತಾದಿಗಳಿಗೆ ಹಾಗೂ ಚಾರಣಿಗರಿಗೆ ಬೆಳಗ್ಗೆ 6 ರಿಂದ 10 ಗಂಟೆಯ ತನಕದ ಸ್ಲಾಟ್ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಒಬ್ಬರಿಗೆ 200ರೂಪಾಯಿ ಬೆಲೆ ನಿಗದಿ ಮಾಡಿತ್ತು.

14 ಕಿ.ಮೀ. ನಾಗಮಲೆ ಯಾತ್ರೆಗೆ ಹಳೆಯೂರು ಗೇಟ್‌ನಿಂದ ಚಾರಣ ಆರಂಭವಾಗುತ್ತದೆ. ಜೊತೆಗೆ ಚಾರಣ ಮಾಡುವವರೊಂದಿಗೆ ಗೈಡ್ ಕೂಡ ಇರುತ್ತಿದ್ದರು. ಅರಣ್ಯ ಇಲಾಖೆಯಿಂದ ಪ್ರಾಯೋಗಿಕವಾಗಿ ಒಂದು ದಿನಕ್ಕೆ 200 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ಕಲ್ಪಿಸಿತ್ತು.

ಆದರೆ, 'ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಭಕ್ತರು ಬರುವುದರಿಂದ ಭಕ್ತರ ಮಿತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು' ಎಂದು ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಅವರು ಪ್ರಧಾನ ಮುಖ್ಯಾರಣ್ಯ ಸುರಕ್ಷಣಾಧಿಕಾರಿಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಪಿಸಿಸಿಎಫ್ 'ದೀಪಾವಳಿ, ಕಾರ್ತಿಕ ಸೋಮವಾರಗಳು ಸೇರಿ ಇತರೆ ವಿಶೇಷ ದಿನಗಳಲ್ಲಿ ಮಾತ್ರ ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗದಂತೆ ಹಾಗೂ ಅರಣ್ಯ ಮತ್ತು ವನ್ಯಜೀವಿಗಳಿಗೆ ಹಾನಿ ಉಂಟು ಮಾಡದೆ ಷರತ್ತಿಗೆ ಒಳಪಟ್ಟು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆ ಒಳಗೆ ನಾಗಮಲೆಗೆ ಹೋಗಬಹುದು' ಎಂದು ತಿಳಿಸಿದೆ.

ಮಲೆ ಮಹದೇಶ್ವರಸ್ವಾಮಿಯು ಲಿಂಗದ ರೂಪದಲ್ಲಿ ನಾಗಮಲೆಯಲ್ಲಿ ನೆಲೆಸಿದ್ದಾರೆಂಬ ನಂಬಿಕೆ ಭಕ್ತರದ್ದಾಗಿದೆ. ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದವರು ನಾಗಮಲೆಗೆ ಬರುವುದು ಸಂಪ್ರದಾಯವಾಗಿತ್ತು. ದಟ್ಟಕಾನಿನ ಮಧ್ಯೆ ಕಾಲ್ನಡಿಗೆಯಲ್ಲಿ ಸಾಗುವುದು ದೈವಿಕದ ಜೊತೆ ರೋಮಾಂಚಕ ಅನುಭ ನೀಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+