ಕರ್ನಾಟಕ; ಆಡಳಿತಕ್ಕೆ ಸರ್ಜರಿ, 17 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಮೇ 05: ಕರ್ನಾಟಕದ ಬಿಜೆಪಿ ಸರ್ಕಾರ ಆಡಳಿತದ ವೇಗ ಹೆಚ್ಚಿಸಲು 17 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಹಲವು ಮಹತ್ವದ ಹುದ್ದೆಗಳ ವರ್ಗಾವಣೆ ನಡೆದಿದೆ.

ಗುರುವಾರ ಸಂಜೆ ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದೆ. ಸರ್ಕಾರ ಸೇರಿದಂತೆ ಬಿಬಿಎಂಪಿಯಲ್ಲೂ 40% ಕಮೀಷನ್ ಆರೋಪಗಳು ಕೇಳಿ ಬಂದಿದ್ದವು. ಇದರಿಂದಾಗಿ ಸರ್ಕಾರದ ಇಮೇಜ್‌ಗೆ ಡ್ಯಾಮೇಜ್ ಆಗುತ್ತಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಚುರುಕು ಮುಟ್ಟಿಸಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Karnataka Governament Transfer 17 IAS Officers

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ

1. ಗೌರವ್ ಗುಪ್ತಾ, ಮೂಲಸೌಕರ್ಯ ಇಲಾಖೆ , ಅಪರ ಮುಖ್ಯ ಕಾರ್ಯದರ್ಶಿ, (ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದರು)

2. ತುಷಾರ್ ಗಿರಿನಾಥ್, ಬಿಬಿಎಂಪಿಯ ಮುಖ್ಯ ಆಯುಕ್ತ, (ಕಂದಾಯ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು)

3. ಟಿ. ಕೆ. ಅನಿಲ್ ಕುಮಾರ್,ಕಂದಾಯ ಇಲಾಖೆ, ಪ್ರಧಾನ ಕಾರ್ಯದರ್ಶಿ(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು)

4. ಪೊನ್ನುರಾಜ್ ವಿ. ಕರ್ನಾಟಕ ಪವರ್ ಕಾರ್ಪೋರೇಷನ್, ಎಂಡಿ (ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದರು)

5. ಮನೋಝ್ ಜೈನ್, ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.

6. ಖುಷ್ಬು ಜಿ ಚೌದರಿ,ಉಪ ವಸತಿ ಆಯುಕ್ತರು ಕರ್ನಾಟರ ಭವನ, ದೆಹಲಿ.

7. ಡಾ. ರಾಜೇಂದ್ರ ಕೆ, ಕಾರ್ಯದರ್ಶಿ , ಕೆಪಿಎಸ್‌ಸಿ (ಉಪ ಆಯುಕ್ತರು ಬಾಗಲಕೋಟೆಯಲ್ಲಿದ್ದರು)

8. ಹಿರೇಮಠ್ ಎಂಜಿ ,ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಉಪ ಆಯುಕ್ತರು ಬೆಳಗಾವಿಯಲ್ಲಿದ್ದರು)

9. ನಿತೇಶ್ ಪಾಟೀಲ್, ಉಪ ಆಯುಕ್ತರು ಬೆಳಗಾವಿ (ಉಪ ಆಯುಕ್ತರು ಧಾರವಾಡದಲ್ಲಿದ್ದರು)

10. ಗುರುದತ್ತ ಹೆಗಡೆ, ಉಪ ಆಯುಕ್ತರು ಧಾರವಾಡ (ವ್ಯವಸ್ಥಾಪಕ ನಿರ್ದೇಶಕರು,ಕರ್ನಾಟಕ ಮಗ್ಗ ಅಭಿವೃದ್ದಿ ನಿಗಮ, ಹುಬ್ಬಳ್ಳಿಯಲ್ಲಿದ್ದರು)

11. ನವೀನ್ ಭಟ್,ನಿರ್ದೇಶಕರು ಕರ್ನಾಟಕ ರಸ್ತೆ ಸಾರಿಗೆ ನಿಗಮ, (ಮುಖ್ಯ ಕಾರ್ಯಪಾಲಕ ಅಧಿಕಾರಿ, ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿದ್ದರು)

12. ಬೂಬಾಲನ್, ಉಪ ಆಯುಕ್ತರು ಬಾಗಲಕೋಟೆ (ಮುಖ್ಯ ಕಾರ್ಯಪಾಲಕ ಅಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯತ್ ನಲ್ಲಿದ್ದರು

13. ದಿಲೀಸ್ ಸಸಿ, ನಿರ್ದೇಶಕರು , ಎಲೆಕ್ಟ್ರಾನಿಕ್ ಡಿಲಿವರಿ ಸಿಟಿಜೆನ್ ಸರ್ವೀಸ್, (ಮುಖ್ಯ ಕಾರ್ಯಪಾಲಕ ಅಧಿಕಾರಿ, ಕಲಬುರಗಿ ಜಿಲ್ಲಾ ಪಂಚಾಯತ್ ನಲ್ಲಿದ್ದರು)

14. ಭರತ್ ಎಸ್, ವ್ಯವಸ್ಥಾಪಕ ನಿರ್ದೇಶಕರು, Kwkrtc

15. ಶಿಲ್ಪ ಎಂ, ಜಂಟಿ ವ್ಯವಸ್ಥಾಪಕ ನಿರ್ದೇಶಕರು , ಕರ್ನಾಟಕ ನಗರ ಮೂಲಸೌಕರ್ಯ ಇಲಾಖೆ

16. ಪ್ರಸನ್ನ ಹೆಚ್,ಮುಖ್ಯ ಕಾರ್ಯಪಾಲಕ ಅಧಿಕಾರಿ, ಉಡುಪಿ ಜಿಲ್ಲಾ ಪಂಚಾಯತ್(ಉಪ ವಸತಿ ಆಯುಕ್ತರು ಕರ್ನಾಟರ ಭವನ, ದೆಹಲಿಯಲ್ಲಿದ್ದರು)

17 . ಗಿರೀಶ್ ದಿಲೀಪ್ ಬಡೋಲೆ, ಮುಖ್ಯ ಕಾರ್ಯಪಾಲಕ ಅಧಿಕಾರಿ, ಕಲಬುರಗಿ ಜಿಲ್ಲಾ ಪಂಚಾಯತ್ (ಸಹಾಯಕ ಆಯುಕ್ತರು, ಕೊಳ್ಳೇಗಾಲ ಉಪವಿಭಾಗದಲ್ಲಿದ್ದರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+