ಡಾ.ರಾಜ್ ಹುಟ್ಟುಹಬ್ಬ: ಡೂಡಲ್ ಮೂಲಕ ಅಣ್ಣಾವ್ರಿಗೆ ಗೂಗಲ್ ಗೌರವ

ತೈಲವರ್ಣದಲ್ಲಿ ರಚಿಸುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದ್ದು, ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ಮೊಗ ಕಂಗೊಳಿಸುತ್ತಿರುವಂತೆ ರಚಿಸಲಾಗಿದೆ.

ಬೆಂಗಳೂರು, ಏಪ್ರಿಲ್ 24: ಕನ್ನಡ ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಖ್ಯಾತ ಅಂತರ್ಜಾಲ ಸರ್ಚ್ ಇಂಜಿನ್ ಆದ ಗೂಗಲ್ ಸಂಸ್ಥೆ ವಿಶೇಷ ಡೂಡಲ್ ಅನ್ನು ತನ್ನ ಸರ್ಚ್ ಇಂಜಿನ್ ನ ಮುಖಪುಟದಲ್ಲಿ ಹಾಕುವ ಮೂಲಕ ಗೌರವ ಸಮರ್ಪಿಸಿದೆ.

ಏಪ್ರಿಲ್ 24ರಂದು ವರನಟ ಡಾ. ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಹಾಗೂ ವಿಶ್ವದೆಲ್ಲೆಡೆ ಇರುವ ಡಾ. ರಾಜ್ ಅಭಿಮಾನಿಗಳು ಆಚರಿಸುತ್ತಾರೆ.[ಅಣ್ಣಾವ್ರ 89ನೇ ಜನ್ಮದಿನೋತ್ಸವ: ಎಲ್ಲೆಲ್ಲಿ ಏನೇನು ವಿಶೇಷ?]

Google submitts Tribute to Dr. Rajkumar

ತೈಲವರ್ಣದಲ್ಲಿ ರಚಿಸುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದ್ದು, ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ಮೊಗ ಕಂಗೊಳಿಸುತ್ತಿರುವಂತೆ, ಅದನ್ನು ನೂರಾರು ಪ್ರೇಕ್ಷಕರು ನೋಡುತ್ತಿರುವಂತೆ ಬಿಂಬಿಸಲಾಗಿದೆ.

ಇನ್ನುಳಿದಂತೆ, ಡೂಡಲ್ ನಲ್ಲಿ ಸಾಮಾನ್ಯವಾಗಿ ಗೂಗಲ್ ಪದವನ್ನು ಕಂಡೂ ಕಾಣದ ರೀತಿಯಲ್ಲಿ ಅಳವಡಿಸುವಂತೆ ಈ ಚಿತ್ರದಲ್ಲೂ ಸಮ್ಮಿಳಿತಗೊಳಿಸಲಾಗಿದೆ.

ಈ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಡಾ. ರಾಜ್ ಕುಮಾರ್ ಅವರಿಗೆ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾದ ಲಿಂಕ್ ಗಳ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲ ಲಿಂಕ್ ಡಾ. ರಾಜ್ ಕುಮಾರ್ ಬಗೆಗಿನ ವಿಕಿಪೀಡಿಯಾ ಲಿಂಕ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+