ಇದು ಆನ್‌ಲೈನ್ ರೆಡಿಯೋ, ಇದು ನಮ್ ರೆಡಿಯೋ

Subscribe to Oneindia Kannada

ಬೆಂಗಳೂರು, ಫೆಬ್ರವರಿ. 28: "ಕನ್ನಡವೇ ನಮ್ಮ ಸವಿನುಡಿ, ಕನ್ನಡವೇ ನಮ್ಮ ನರನುಡಿ, ಕನ್ನಡವೇ ನಮ್ ರೆಡಿಯೋ, ಕನ್ನಡಿಗರ ನೆಚ್ಚಿನ ಒಡನಾಡಿ..ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ!!" ಹೌದು.. ಕನ್ನಡದ ಮೊಟ್ಟಮೊದಲ ಆನ್ ಲೈನ್ ರೆಡಿಯೋ 'ನಮ್ಮ ರೆಡಿಯೋ' ಅಧಿಕೃತವಾಗಿ ಫೆಬ್ರವರಿ 28 ರಂದು ಲೋಕಾರ್ಪಣೆಗೊಳ್ಳಲಿದೆ.

ಕಾರ್ಯಕ್ರಮವನ್ನು ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ನಟ ಚೇತನ್ ಕುಮಾರ್, ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಕೌಸಲ್ಯ ಡೆವಲಪರ್ಸ್ ನ ಕರ್ನಲ್ ಗೋಪಾಲ್ ಟಿ ಕೌಶಿಕ್, ಹಿಂದುಸ್ತಾನಿ ಗಾಯಕ ಡಾ. ನಾಗರಾಜ ರಾವ್ ಹವಾಲ್ದಾರ್ ಭಾಗವಹಿಸಲಿದ್ದಾರೆ.[ನೀವು ಪತ್ರಿಕೆಗೆ ಬರೆಯಬೇಕೆ? ಈ ಪುಸ್ತಕ ಓದಿ]

kannada


ಪಂಡಿತ್ ಡಾ. ನಾಗರಾಜ ರಾವ್ ಹವಾಲ್ದಾರ್ ತಂಡಂದಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವು ನಡೆಯಲಿದೆ. ಕುಮಾರಕೃಪಾ ರಸ್ತೆಯ ಹೋಟೆಲ್ ಸಾಲಿಟೇರ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.[ಕುಡ್ಲದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಹದಿಮೂರರ ಹರೆಯದ ಸಂಭ್ರಮ]

ಇನ್ನು ಮುಂದೆ ಆನ್ ಲೈನ್ ನಲ್ಲೇ ನಿಮ್ಮ ನೆಚ್ಚಿನ ಕನ್ನಡ ಗೀತೆಗಳನ್ನು ಆಸ್ವಾದಿಸಬಹುದು. ಇದು ಕನ್ನಡ ನಾಡು ನುಡಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದೇ ವಿಶ್ಲೇಷಣೆ ಮಾಡಲಾಗಿದೆ. ರೇಡಿಯೋ ಕೇಳಬಹುದು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
One of the good News for all Kannadigas. The first online Kannada radio will be launching on 28 February 2016 at Bengaluru. You can listen kannada songs on online. Here is a new radio link nammradio.com.
Please Wait while comments are loading...