ಸಚಿವರೇ ಹೇಳ್ತಿದ್ದಾರೆ ಟೀಚರ್ಸ್ ವರ್ಗಾವಣೆ 15 ದಿನದಲ್ಲಿ ಪಕ್ಕಾ
ಬೆಂಗಳೂರು, ಜು.13: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇನ್ನು 15 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಬಿಜೆಪಿಯ ತಾರಾ ಅನೂರಾಧ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು, ವರ್ಗಾವಣೆ ಕುರಿತ ಕೆಲವು ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು ಇತ್ಯರ್ಥವಾಗಬೇಕಿದೆಎ. ಹೀಗಾಗಿ ಇನ್ನು 15 ದಿನಗಳೊಳಗಾಗಿ ವರ್ಗಾವಣೆಗೆ ಚಾಲ ನೀಡಲಾಗುತ್ತದೆ ಎಂದರು.
ಕಾಂಗ್ರೆಸ್‌ನ ಧರ್ಮಸೇನಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದ 5588 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 10,258 ಕೊಠಡಿಗಳು ಹಾಗೂ 264 ಸರ್ಕಾರಿ ಪ್ರೌಢಶಾಲೆಗಳಲ್ಲಿ 949 ಕೊಠಡಿಗಳು ಶಿಥಿಲಗೊಂಡಿರುತ್ತದೆ. ಈ ಸಾಲಿನಲ್ಲಿ 1338 ಸರ್ಕಾರಿ ಪ್ರಾಥಮಿಕಕ ಶಾಲಾ ಕೊಠಡಿ ಹಾಗೂ 777 ಪ್ರೌಢಶಾಲೆಗಳ ಕೊಠಡಿಗಳ ದುರಸ್ತಿಗೆ 35 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

29 ಕೋರ್ಸ್‌ಗಳನ್ನು ರದ್ದುಗೊಳಿಸುವುದರಿಂದ ಕೆಲಸ ಕಳೆದುಕೊಂಡ ಸರ್ಕಾರಿ 1263 ಮತ್ತು ಅನುದಾನಿತ ಸಂಸ್ಥೆಗಳ 1393 ಸಿಬ್ಬಂದಿಯನ್ನು ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಲಾಗಿದೆ ಎಂದರು.












Click it and Unblock the Notifications