ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಒಯುಗೆ ಬಿಟ್ಟ ಗ್ರಹಣ: ಪ್ರವೇಶಕ್ಕೆ ಅವಕಾಶ

|
Google Oneindia Kannada News

ಬೆಂಗಳೂರು, ಡಿಸೆಂಬರ್, 09: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ವಿಶ್ವ ವಿದ್ಯಾಲಯ ಎದುರಿಸುತ್ತಿದ್ದ ಗೊಂದಲಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅನುಮತಿ ನೀಡಿರುವ ಕೋರ್ಸ್‌ಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.

2015-16ನೇ ಸಾಲಿಗೆ ಯುಜಿಸಿ ಮಾನ್ಯತೆ ನವೀಕರಿಸಿರುವ ಕೋರ್ಸ್‌ಗಳಿಗೆ ಮಾತ್ರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಮಾನ್ಯತೆ ಇಲ್ಲದಿರುವ ಕೋರ್ಸ್‌ಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂಬ ನಿರ್ಧಾರವನ್ನು ಉನ್ನತ ಶಿಕ್ಷಣ ಇಲಾಖೆ ಸಚಿವ ಟಿ.ಬಿ.ಜಯಚಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.[ಮಾನ್ಯತೆ ರದ್ದಾಗಿದ್ದು ಯಾಕೆ?]

ksou

ಪ್ರವೇಶ ಪಡೆಯಲು ಅಡ್ಡಿ ಇಲ್ಲ. ನಿಗದಿಯಂತೆ ಆಗಿದ್ದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಆದರೆ ಯುಜಿಸಿ ತಡೆ ನೀಡಿದ್ದರಿಂದ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ.[ಲಗ್ನ ಪತ್ರಿಕೇಲಿ (ಎಂಎ) ಅಂತ ಬರೆಸಿಕೊಳ್ಳೋಣ ಅಂತಿದ್ದೆ!]

ದ್ವಿತೀಯ ಮತ್ತು ತೃತೀಯ ವರ್ಷದ ಬಿಎ, ಬಿಕಾಂ ಹಾಗೂ ಅಂತಿಮ ವರ್ಷದ ಎಂಎ, ಎಂಕಾಂ ಪದವಿಗಳ ನವೀಕರಣಕ್ಕೆ ದಂಡ ಶುಲ್ಕವಿಲ್ಲದೆ 2016ರ ಜನವರಿ 4ರೊಳಗೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಶುಲ್ಕ ಪಾವತಿಸಿದ ಅರ್ಜಿಯನ್ನು ಹತ್ತಿರದ ಪ್ರಾದೇಶಿಕ ಕೇಂದ್ರಗಳಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬಹುದು ಕೆಎಸ್‌ಒಯು ಪ್ರಾದೇಶಿಕ ನಿರ್ದೇಶಕ ಆರ್. ಲೋಕೇಶ್ ತಿಳಿಸಿದ್ದಾರೆ.

ಶುಲ್ಕ ಎಷ್ಟು?
2015-16ನೇ ಶೈಕ್ಷಣಿಕ ಸಾಲಿನ ದ್ವಿತೀಯ ಬಿ.ಎ., ಬಿ.ಕಾಂ., ಕೋರ್ಸ್ ಗಳಿಗೆ 3200 ಪ್ರವೇಶ ಶುಲ್ಕವಿರುತ್ತದೆ. ತೃತೀಯ ಬಿ.ಎ., ಬಿ.ಕಾಂ., ಕೋರ್ಸ್ ಗಳಿಗೆ ಬೋಧನಾ ಶುಲ್ಕ ರೂ 3700 ರು. ಆಗಿರುತ್ತದೆ. ಎಂ.ಎ., ಎಂ.ಕಾಂ., ಕೋರ್ಸ್ ಗಳಿಗೆ ಬೋಧನಾ ಶುಲ್ಕ ರೂ 4500 ರು., ಅಂತಿಮ ಎಂಸಿಜೆ, ಕೋರ್ಸ್ ಗಳಿಗೆ ಬೋಧನಾ ಶುಲ್ಕ ರೂ 9000 ರು. ಆಗಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ನಂ-58, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಮೈಕೋ ಲೇಔಟ್, ಬಿ.ಟಿ.ಎಂ.2ನೇ ಹಂತ, ಬೆಂಗಳೂರು-76. ಸ್ಥಿರ ದೂರವಾಣಿ ಸಂಖ್ಯೆ : 080 -26681320, 080-23448811 ಅಥವಾ 9844506629 ಸಂಪರ್ಕಿಸಬಹುದು.

English summary
Finally, some good news for students of Karnataka State Open University (KSOU), Mysuru. Higher Education (Universities), said the varsity had been permitted to go ahead with the process of admissions for second and third-year students. KSOU can not give admission to de-recognition of courses by the UGC beyond 2012-13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X