Karnataka@50: ಸುವರ್ಣ ಸಂಭ್ರಮಾಚರಣೆ ರೂಪುರೇಷೆಗೆ ಸಿದ್ಧತೆಗೆ ಜಿಲ್ಲಾವಾರು ಸಲಹೆ ಸಂಗ್ರಹ
ಕಲಬುರಗಿ, ಆಗಸ್ಟ್ 28: ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ 'ಸುವರ್ಣ ಸಂಭ್ರಮಾಚರಣೆ' ನಡೆಸಲಿದೆ. ಅರ್ಥಪೂರ್ಣ ಆಚರಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಜ್ಞರು, ಸಾಹಿತಿಗಳು, ಕಲಾವಿದರ ಸಲಹೆ ಪಡೆಯುವ ಕಾರ್ಯ ಮುಂದುವರಿದೆ.
ಸೋಮವಾರ ಕಲ್ಯಾಣ ಕರ್ನಾಟಕ ಭಾಗದ ಕಲುಬುರಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ನೇತೃತ್ವದಲ್ಲಿ ಸಮಾಲೋಚನೆ ಸಭೆ ನಡೆಯಿತು. ರಾಜ್ಯಾದ್ಯಂತ ಸಲಹೆಗಳನ್ನು ಸ್ವೀಕರಿಸಿ ಅವುಗಳನ್ನು ಕ್ರೋಢಿಕರಿಸಲು ಸಮಿತಿ ರಚಿಸಲಾಗುವುದು. ಬಳಿಕ ಸಿಎಂ ಮತ್ತು ಡಿಸಿಎಂ ಅವರ ಜೊತೆ ಚರ್ಚಿಸಿ 'ಸುವರ್ಣ ಸಂಭ್ರಮಾಚರಣೆ' ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಮಾಲೋಚನಾ ಸಭೆಯಲ್ಲಿ ಇಡೀ ವರ್ಷ ಪೂರ್ತಿ ಕನ್ನಡದ ಕಂಪು ಪಸರಿಸುವ ಕಾರ್ಯಕ್ರಮ ಆಯೋಜಿಸಬೇಕು. ಗ್ರಾಮ ಪಂಚಾಯತಿಯಿಂದ ತಾಲೂಕು, ಜಿಲ್ಲಾ, ವಿಭಾಗವಾರು ಕಾರ್ಯಕ್ರಮ ಸಂಘಟಿಸಬೇಕು. ಶಾಲಾ-ಕಾಲೇಜಿನಲ್ಲಿ ಉಪನ್ಯಾಸ, ವಿಚಾರ ಸಂಕಿರಣ, ರಸಪ್ರಸ್ನೆ ಮೂಲಕ ಮಕ್ಕಳ ಕೇಂದ್ರಿತ ಕಾರ್ಯಕ್ರಮ ಹೆಚ್ಚಾಗಬೇಕು.
31 ಜಿಲ್ಲೆಗಳ ಕಲೆ ಸಮಾಗಮವಾಗಲಿ
31 ಜಿಲ್ಲೆಗಳ ಕಲಾವಿದರ ಕಲೆ ಸಮಾಗಮವಾಗಬೇಕು, ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕನ್ನಡಕ್ಕೆ ದುಡಿದ ಮಹನೀಯರನ್ನು ಸಂಘ-ಸಂಸ್ಥೆಗಳನ್ನು ಗುರುತಿಸಿ ಗೌರವಿಸಬೇಕು. ಗಡಿ ಮತ್ತು ಹೊರನಾಡು ಕನ್ನಡಿಗರನ್ನು ಸಂಭ್ರಮಾಚರಣೆಯಲ್ಲಿ ಸಕ್ರೀಯವಾಗಿ ಒಳಗೊಳ್ಳಬೇಕು, 50 ಸಾಧಕರನ್ನು ಗೌರವಿಸುವುದು ಸೇರಿದಂತೆ ಅನೇಕ ಸಲಹೆಗಳನ್ನು ಸಚಿವರಿಗೆ ನೀಡಲಾಯಿತು.

50ರ ಸಂಭ್ರಮಾಚರಣೆಯ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಕಲಾವಿದರ-ಸಾಹಿತಿಗಳ ಸಲಹೆ ಸ್ವೀಕರಿಸಲು ಈಗಾಗಲೆ ಬೆಂಗಳೂರು, ಬೆಳಗಾವಿಯಲ್ಲಿ ಸಮಾಲೋಚನೆ ಸಭೆ ನಡೆಸಲಾಗಿದೆ. ಇಂದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ತಿಳಿಸಿದರು.
ಸಭೆಗೆ ಬಂದ ಪ್ರಮುಖ ಸಲಹೆಗಳು
ಗುಲಬರ್ಗಾ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ.ಹೆಚ್.ಟಿ.ಪೋತೆ ಅವರು ಈ ಭಾಗದಲ್ಲಿ ಎಂ.ಎ ಓದಿದವರಿಗೆ ಒಂದು ಪ್ಯಾರಾ ಕನ್ನಡ ಸರಿಯಾಗಿ ಬರೆಯಕ್ಕೆ ಬರುವುದಿಲ್ಲ. ಮೊದಲು ಇದನ್ನು ಸರಿಪಡಿಸುವ ಕೆಲಸವಾಗಬೇಕಿದೆ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ಇತರೆ ಭಾಗದಲ್ಲಿ 50 ಪ್ರತಿಷ್ಠಾನ ಇವೆ, ಈ ಭಾಗದಲ್ಲಿಲ್ಲ. ಶಾಂತರಸರು, ಚೆನ್ನಣ್ಣ ವಾಲೀಕಾರ, ಗೀತಾ ನಾಗಭೂಷಣ ಆದಿಯಾಗಿ ಪ್ರತಿ ಜಿಲ್ಲೆಯಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಇದೇ ರೀತಿ ಬೇರೆ ಬೇರೆ ವಲಯದ ಗಣ್ಯರು ಸಲಹೆ ನೀಡಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ನಾಡು-ನುಡಿ, ಕಲೆ, ಸಂಗೀತ, ಸಾಮಾಜಿಕ , ಭೌಗೋಳಿಕ ಹಾಗೂ ರಾಜಕೀಯ ಇತಿಹಾಸ ಒಳಗೊಂಡ ಪುಸ್ತಕ ಮುದ್ರಿಸಿ ಸಾರ್ವಜನಿಕರಿಗೆ ಮುಕ್ತವಾಗಿ ದೊರೆಯಂತಾಗಬೇಕು. ಸುವರ್ಣಾ ಸಂಭ್ರಮ ನೆನಪಿನಲ್ಲಿ 50 ಜನ ನಾಡಿನ ಸಾಧಕರನ್ನು ಸನ್ಮಾನಿಸಬೇಕು.
* ಪ್ರತಿ ಜಿಲ್ಲೆಯ ಗಡಿಯಲ್ಲಿ ಸುವರ್ಣ ಸಂಭ್ರಮದ ನೆನಪಿನಲ್ಲಿ "ಪ್ರವೇಶ ದ್ವಾರ" ನಿರ್ಮಿಸಬೇಕು
* ಕನ್ನಡಕ್ಕೆ ಮೊಟ್ಟ ಮೊದಲ ಗ್ರಂಥ ನೀಡಿದ ನೆಲ ಇದಾಗಿದೆ. ಬಸವಕಲ್ಯಾಣದಿಂದ-ಮೈಸೂರು ವರೆಗೆ ಜ್ಯೋತಿ ಯಾತ್ರೆ ಅರಂಭಿಸಬೇಕು. ಹಂಪಿಯಲ್ಲಿ ಸಮಾರೋಪ ಕಾರ್ಯಕ್ರಮ ಸಂಘಟಿಸಬೇಕು. ಕರ್ನಾಟಕ ನಾಮಕರಣ ಮಾಡಿದ ದೇವರಾಜ ಅರಸು ಪೋಟೊ ಎಲ್ಲೆಡೆ ರರಾಜಿಸಬೇಕು. ಏಕೀಕರಣ ಹೋರಾಡಿದ ಎಲ್ಲಾ ಹೋರಾಟಗಾರರನ್ನು ಗುರುತಿಸುವ ಕಾರ್ಯವಾಗಬೇಕು.
* ನೃಪತುಂಗ ಕವಿ ಶ್ರೀ ವಿಜಯ್ ಅವರ ರೂಪಕ ಕಾರ್ಯಕ್ರಮ ನಾಡಿನುದ್ದಕ್ಕೂ ಪಸರಿಸಬೇಕು. ಸರಕಾರಿ ನೌಕರರು, ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಎಸ್.ಎಸ್.ಎಲ್.ಸಿ. ವರೆಗೆ ಕನ್ನಡದಲ್ಲೆ ಓದಿಸಬೇಕು.
* 50ರ ಈ ಸಂಭ್ರಮದಲ್ಲಿ ಎಲ್ಲೆಡೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಸ್ಥಳೀಯ, ಪ್ರಾದೇಶಿಕ ಭಾಷೆಯ ಶಬ್ದ ಕೋಶ ರಚಿಸಬೇಕು.
* ಮಕ್ಕಳಿಂದ ನಾಟಕ ಆಯೋಜಿಸಿ, ಮಕ್ಕಳ ಕಥೆ ಹೇಳಿಕೊಡಿ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತಮ ಲೇಖಕರ ಪದ್ಯಗಳ ಪುಸ್ತಕಗಳಿದ್ದು, ಮಕ್ಕಳು ಓದುವಂತಾಗಬೇಕು. ಮಕ್ಕಳ ಕೇಂದ್ರಿತ ಕಾರ್ಯಕ್ರಮ ಹೆಚ್ಚಾಗಬೇಕು.
* ಬೀದರ ಸೇರಿದಂತೆ ಗಡಿ ಜಿಲ್ಲೆಯಲ್ಲಿ ಇತರೆ ಭಾಷೆ ಹಾವಳಿ ಹೆಚ್ಚಿದೆ. ಗಡಿ ಭಾಗದಲ್ಲಿ ಕನ್ನಡ ಪಸರಿಸಲು ಶ್ರಮಿಸಿದ ಕನ್ನಡ ಸಂಘ, ಕನ್ನಡ ಕೈಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
* ರಾಯಚೂರಿನಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಕನ್ನಡದ ಉಳಿವಿಗೆ ಶ್ರಮಿಸುತ್ತಿರುವ ಕರ್ನಾಟಕ ಸಂಘಕ್ಕೆ ಅನುದಾನ ನೀಡಬೇಕು.
* ಈ ಭಾಗದ ಕಡಕೋಳ ಮಡಿವಾಳಪ್ಪ ಹಾಗೂ ಇತರೆ ತತ್ವಪದಕಾರರ ಜೀವನ್ನಾಧಾರಿತ ರೂಪಕಗಳ ಕಾರ್ಯಕ್ರಮ ನಾಡಿನೆಲ್ಲೆಡೆ ಪಸರಿಸಬೇಕು. ಈ ಭಾಗದ ವಚನಕಾರ, ತತ್ವಪದಕಾರರ ಇತಿಹಾಸ ಸಹ ಅರಿಯಬೇಕಿದೆ. ಈ ಭಾಗದಲ್ಲಿಯೂ ಪ್ರತಿಭಾವಂತ ಕಲಾವಿದರಿದ್ದು, ಅವರಿಗೆ ಅವಕಾಶ ನೀಡಬೇಕು.
* ಸ್ವಾತಂತ್ರ್ಯ ಪೂರ್ವ ನಿಜಾಮನ ಅಡಳಿತಕ್ಕೆ ಒಳಪಟ್ಟ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರ್ದು ಭಾಷೆ ಪ್ರಾಬಲ್ಯದ ನಡುವೆ ಕನ್ನಡ ಉಳಿಸಿದ ಮಹನೀಯರನ್ನು ಪರಿಚಯಿಸುವ, ಗೌರವಿಸುವ ಕೆಲಸ ಸರ್ಕಾರ ಮಾಡಬೇಕು ಎಂಬ ಸಲಹೆಗಳು ಸರ್ಕಾರಕ್ಕೆ ಸಲಿಕೆಯಾದವರು.
ಸಭೆಯಲ್ಲಿ ಇಲಾಖೆ ನಿರ್ದೇಶಕ ಡಾ.ವಿಶ್ವನಾಥ ಹಿರೇಮಠ, ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧೂಸೂಧನ ರೆಡ್ಡಿ, ಕನ್ನಡ ಮತ್ತು ಸಂಸ್ಖತಿ ಇಲಾಖೆಯ 7 ಜಿಲ್ಲೆಗಳ ಸಹಾಯಕ ನಿರ್ದೇಶಕರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸುಮಾರು 400ಕ್ಕೂ ಹೆಚ್ಚು ಕಲಾವಿದರು, ಸಾಹಿತಿಗಳು, ಚಿಂತಕರು, ಲೇಖಕರು ಭಾಗವಹಿಸಿದ್ದರು.
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications