Ganesh Festival Special Train: ಬೆಂಗಳೂರಿನಿಂದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ, ವೇಳಾಪಟ್ಟಿ ಮಾಹಿತಿ
ಬೆಂಗಳೂರು, ಆಗಸ್ಟ್ 27: ಗಣೇಶ ಹಬ್ಬದ ಪ್ರಯುಕ್ತ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಈ ಸಂಬಂಧ ನೈಋತ್ಯ ರೈಲ್ವೆ ವಲಯದಿಂದ (SWR) ಹಬ್ಬದ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ರೈಲುಗಳು ಬೆಂಗಳೂರಿನಿಂದ ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಗೆ ಮೂರು ದಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಸೇವೆ ನೀಡಲಿವೆ. ಈ ಸಂಬಂಧ ಪ್ರಯಾಣಿಕರು ರೈಲು ಸಂಖ್ಯೆ, ದಿನಾಂಕ ಸೇರಿದಂತೆ ವೇಳಾಪಟ್ಟಿ ಗಮನಿಸಿ ಸಂಚರಿಸಬೇಕು. ಟಿಕೆಟ್ ಬುಕ್ಕಿಂಗ್ ಎಂದಿನಂತೆ ಐಆರ್‌ಸಿಟಿಸಿ ಮೂಲಕ ಆನ್‌ಲೈನ್‌ನಲ್ಲಿಯೇ ಬುಕ್ಕಿಂಗ್ ಮಾಡಬಹುದಾಗಿದೆ.

ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಕಲಬುರಿಗ ರೈಲು ನಿಲ್ದಾಣಕ್ಕೆ ಸೆಪ್ಟಂಬರ್ 5ರಿಂದ ದ್ವಿಮುಖವಾಗಿ (ಎರಡು ಬದಿಗೆ) ಒಟ್ಟು ಆರು ಟ್ರಿಪ್‌ಗಳ ಸೇವೆ ನೀಡಲಾಗುತ್ತಿದೆ. ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಿಂದ ಮೂರು ಟ್ರಿಪ್ ಕಲಬುರಗಿಗೆ ಹಾಗೂ ಕಲಬುರಗಿಯಿಂದ ಮೂರು ಟ್ರಿಪ್ ಬೆಂಗಳೂರಿಗೆ ರೈಲು ಓಡಾಡಲಿವೆ.
ವಿಶೇಷ ರೈಲುಗಳು ಸಂಚಾರ, ವೇಳಾಪಟ್ಟಿ ವಿವರ
* ಸೆಪ್ಟಂಬರ್ 5, 6 ಮತ್ತು 7ರಂದು ಮೂರು ದಿನ ಬೆಂಗಳೂರು SMVT- ಕಲಬುರಿಗೆಗೆ ವಿಶೇಷ ರೈಲು (ಸಂಖ್ಯೆ 06589) ರಾತ್ರಿ 9.15ಗಂಟೆಗೆ ಸಂಚಾರ ಆರಂಭಿಸಲಿದೆ. ಮರುದಿನ ಬೆಳಗ್ಗೆ 7.40 ಗಂಟೆಗೆ ಗಮ್ಯಸ್ಥಳ ತಲುಪಲಿದೆ.
* ಸೆಪ್ಟಂಬರ್ 6, 7 ಮತ್ತು 8 ರಂದು ಮೂರು ದಿನ ಕಲಬುರಿಯಿಂದ ಬೆಳಗ್ಗೆ 9.35ಕ್ಕೆ ವಿಶೇಷ ರೈಲು (ಸಂಖ್ಯೆ 06590) ಸಂಚಾರ ಆರಂಭಿಸಿ ಮರು ದಿನ ಬೆಂಗಳೂರು SMVT ನಿಲ್ದಾಣಕ್ಕೆ ಅದೇ ದಿನ ರಾತ್ರಿ 08 ಗಂಟೆಗೆ ತಲುಪಲಿದೆ.
ರೈಲು ನಿಲುಗಡೆಯ ನಿಲ್ದಾಣಗಳು
ಬೆಂಗಳೂರಿನಿಂದ ಕಲಬುರಗಿಗೆ ತೆರಳುವ ಈ ವಿಶೇಷ ರೈಲುಗಳು ಬೆಂಗಳೂರಿನಿಂದ ತೆರಳಿ ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂಟಕಲ್ ಜಂಕ್ಷನ್, ಅದೋನಿ, ಮಂತ್ರಾಲಯಂ ರಸ್ತೆ, ರಾಯಚೂರು ಜಂಕ್ಷನ್, ಶಹಬಾದ್ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.












Click it and Unblock the Notifications