ಹಣ ವಂಚನೆ ಪ್ರಕರಣ: ಸಿಸಿಬಿ ಕಚೇರಿಯತ್ತ ಜನಾರ್ದನ ರೆಡ್ಡಿ

ಬೆಂಗಳೂರು, ನವೆಂಬರ್ 10: ಬಹುಕೋಟಿ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಸಿಬಿ ಪೊಲೀಸರ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಜನಾರ್ದನ ರೆಡ್ಡಿ ಅವರು ವಕೀಲ ಆರ್.ಪಿ. ಚಂದ್ರಶೇಖರ್ ಜತೆ ಸಿಸಿಬಿ ಕಚೇರಿಗೆ ಹಾಜರಾಗಲು ಹೊರಟಿದ್ದು, ವಿಚಾರಣೆಗೆ ಒಳಪಡುವ ನಿರೀಕ್ಷೆಯಿದೆ.

ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈ. ಲಿಮಿಟೆಡ್ ಕಂಪೆನಿಯ ಮಾಲೀಕ ಫರೀದ್ ಗೆ ಸಹಾಯ ಮಾಡಲು ಜನಾರ್ದನ ರೆಡ್ಡಿ ವಾಮಮಾರ್ಗ ಅನುಸರಿಸಿದ್ದರು ಎಂಬ ಆರೋಪದಡಿ ಸಿಸಿಬಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

gali janardhana reddy surrendered before ccb police on multi crore fraud case

ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ವಾರದಿಂದ ಕಾಣಿಸಿಕೊಳ್ಳದ ಜನಾರ್ದನ ರೆಡ್ಡಿ, ಪೊಲೀಸರ ಮುಂದೆ ಹಾಜರಾಗುವುದು ಅನಿವಾರ್ಯವಾಗಿದೆ.

2017ರಲ್ಲಿ ಬಹುಕೋಟಿ ವಂಚನೆ ಆರೋಪದಲ್ಲಿ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಮೆಹಫೂಜ್ ಅಲಿ ಖಾನ್ ಹೆಸರು ಬಾಯ್ಬಿಟ್ಟಿದ್ದಾನೆ.

ಉದ್ಯಮಿ ಬ್ರಿಜೇಶ್ ರೆಡ್ಡಿಯನ್ನು ಜಾರಿ ನಿರ್ದೇಶನಾಲಯದ ಕೇಸಿನಿಂದ ಬಚಾವ್ ಮಾಡಲು ಗಾಲಿ ರೆಡ್ಡಿ ಪಡೆದ ಲಂಚದ ಮೊತ್ತವನ್ನು ಫರೀದ್ ಬಳ್ಳಾರಿಯ ರಾಜಮಹಲ್ ಜ್ಯುವೆಲ್ಲರ್ಸ್ ನ ರಮೇಶ್ ಹಾಗೂ ಬೆಂಗಳೂರಿನ ಅಂಬಿಕಾ ಜ್ಯುವೆಲ್ಲರ್ಸ್ ನ ರಮೇಶ್ ಕೊಠಾರಿಗೆ ತಲುಪಿಸಿದ್ದಾನೆ. ಆದರೆ, 18 ಕೋಟಿ ರು ನಗದು ರೂಪಕ್ಕೆ ಬದಲಾಗಿ 57 ಕೆಜಿ ಚಿನ್ನದ ರೂಪದಲ್ಲಿ ಗಾಲಿ ರೆಡ್ಡಿ ಪಾಲಾಗಿದೆ ಎನ್ನಲಾಗಿದೆ.

ಆಂಬಿಡೆಂಟ್ ಹೆಸರಿನ ಚಿಟ್​ಫಂಡ್​ ಸಂಸ್ಥೆಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿತ್ತು. ಈ ಸಂಸ್ಥೆಗೆ ಜನಾರ್ದನ ರೆಡ್ಡಿ ಕೂಡ ಬೆಂಬಲ ನೀಡಿದ್ದರು ಎನ್ನಲಾಗಿದೆ. ಚಿಟ್​ಫಂಡ್​ ಪ್ರಕರಣದಲ್ಲಿ ರೆಡ್ಡಿ ಆಪ್ತ ಸಹಾಯಕ ಅಲಿಖಾನ್​ ಪಾತ್ರ ಕೂಡ ಇದೆ ಎಂಬ ಆರೋಪವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+