ಪರಮೇಶ್ವರ ಡಿಸಿಎಂ; ಕೆಪಿಸಿಸಿ ಪಟ್ಟ ಒಕ್ಕಲಿಗರಿಗೆ?

ಆದರೆ ಇತ್ತ Day Oneನಿಂದ ಶುದ್ಧ ಅಂತಃಕರಣದಿಂದ ರಾಜ್ಯದ ಜನತೆಗೆ ಅನೇಕ ಭಾಗ್ಯಗಳನ್ನು ಕಲ್ಪಿಸುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೋಟಾದಲ್ಲಿ ಭಾಗ್ಯ ಮುಗಿದಿದ್ದು, ಡಾ ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಭಾಗ್ಯ ಪ್ರಾಪ್ತಿಯಾಗುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ, ಪರಮೇಶ್ವರ್ ಅವರನ್ನು ಇನ್ನಾದರೂ ಸಂಪುಟಕ್ಕೆ ಸೇರಿಸಿಕೊಳ್ಳದೇ ಹೋದರೆ ಕಾರ್ಯಕರ್ತರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಹೈಕಮಾಂಡಿಗೆ ವೇದ್ಯವಾದಂತಿದೆ.
ಜಾತಿ ಸಮೀಕರಣದ ಲೆಕ್ಕಾಚಾರ
ಹಾಗೆ ನೋಡಿದರೆ ಕೆಪಿಸಿಸಿ ಅಧ್ಯಕ್ಷರಾದ ಡಾ ಪರಮೇಶ್ವರ ಅವರು ಮೊದಲಿಂದಲೂ ಸಂಪುಟ ಸೇರಬೇಕು ಅದರಲ್ಲೂ ಡಿಸಿಎಂ ಆಗಲೇಬೇಕು ಎಂದು ಬಯಸುತ್ತಿರುವವರು. ಇದೀಗ, ಲೋಕಸಭೆ ಚುನಾವಣೆಗೆ ಮುಂಚಿತವಾಗಿಯೇ ಈ ಪ್ರಯೋಗ ನಡೆಸುವ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಇಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ ಪ್ರಧಾನವಾಗಿದ್ದರೂ ಸಿಎಂ ಸಿದ್ದು ಅವರನ್ನು ಕಟ್ಟಿಹಾಕುವ ಪ್ರಯತ್ನ ಎದ್ದು ಕಾಣುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಪಟ್ಟ ಒಕ್ಕಲಿಗ/ಲಿಂಗಾಯಿತರಿಗೆ?
ಪರಮೇಶ್ವರಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ದಲಿತ ವರ್ಗದ ಮತದಾರರನ್ನು ತೃಪ್ತಿಪಡಿಸಿದಂತಾಗುತ್ತದೆ. ಅದಾದನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಅಥವಾ ಲಿಂಗಾಯಿತ ಸಮುದಾಯದವರನ್ನು ನೇಮಕ ಮಾಡುವುದರಿಂದ ಪ್ರಬಲ ಸಮುದಾಯದ ಮತವನ್ನೂ ಸೆಳೆಯಬಹುದು ಎಂಬ ಚಿಂತನೆ ಹೈಕಮಾಂಡಿನದ್ದಾಗಿದೆ. ( ಅಡ್ವಾಣಿ ವಿರುದ್ಧ ಕಿಡಿಕಾರಿ 'ಹಗುರ'ವಾದ ಪರಮೇಶ್ವರ್ ಜಿ )












Click it and Unblock the Notifications