ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!
Recommended Video

ಬೆಂಗಳೂರು, ನವೆಂಬರ್ 26 : ಮಾಜಿ ಸಚಿವ ಅಂಬರೀಶ್ ಮತ್ತು ಅವರ ಆಪ್ತ ಸ್ನೇಹಿತರೊಬ್ಬರು ಕೆಲವೇ ದಿನಗಳ ಅಂತರದಲ್ಲಿ ಕಾಲನ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಇಬ್ಬರೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಹೌದು..ಅಂಬರೀಶ್ ಮತ್ತು ಎಂ.ಪಿ.ರವೀಂದ್ರ ಅವರು ಆಪ್ತ ಸ್ನೇಹಿತರು. ವಿಷಾದದ ಸಂಗತಿ ಎಂದರೆ ಇಬ್ಬರೂ ಸಹ ಒಂದೇ ತಿಂಗಳಿನಲ್ಲಿ ವಿಧಿವಶರಾಗಿದ್ದಾರೆ. ಆಪ್ತರಾದ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಅಂಬರೀಶ್ ಅವರು ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಅವರು ಅಂಬರೀಶ್ ಆಪ್ತ ಸ್ನೇಹಿತರಾಗಿದ್ದರು. ಇಬ್ಬರ ಸ್ನೇಹ ಈಗ ನೆನಪು ಮಾತ್ರ.
2013ರ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದು ಅಂಬರೀಶ್ ವಿಧಾನಸಭೆ ಪ್ರವೇಶಿಸಿದ್ದರು. ಹರಪನಹಳ್ಳಿ ಕ್ಷೇತ್ರದಿಂದ ಗೆದ್ದು ಎಂ.ಪಿ.ರವೀಂದ್ರ ಶಾಸಕರಾಗಿದ್ದರು. ಆದರೆ, 2018ರ ಚುನಾವಣೆಯಲ್ಲಿ ಎಂ.ಪಿ.ರವೀಂದ್ರ ಸೋತಿದ್ದರು, ಅಂಬರೀಶ್ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ...

ಸಾವಿನಲ್ಲೂ ಒಂದಾದ ಸ್ನೇಹಿತರು
ಅನಾರೋಗ್ಯದಿಂದ ಬಳಲುತ್ತಿದ್ದ ಎಂ.ಪಿ.ರವೀಂದ್ರ ಅವರು ನವೆಂಬರ್ 3ರಂದು ವಿಧಿವಶರಾಗಿದ್ದರು. ಅಂಬರೀಶ್ ಅವರು ನವೆಂಬರ್ 24ರಂದು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಈ ಮೂಲಕ ಇಬ್ಬರೂ ಸಹ ಒಂದೇ ತಿಂಗಳಿನಲ್ಲಿ ಇಹಲೋಕದ ಯಾತ್ರೆ ಮುಗಿಸುವ ಮೂಲಕ ಸಾವಿನಲ್ಲಿಯೂ ಒಂದಾಗಿದ್ದಾರೆ.
In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ

ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ
ಅಂಬರೀಶ್ ಮತ್ತು ಎಂ.ಪಿ.ರವೀಂದ್ರ ಅವರು ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಒಂದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹೌದು, ಎಂ.ಪಿ.ರವೀಂದ್ರ ಅವರ ಆರೋಗ್ಯ ಹದಗೆಟ್ಟಾಗ ಸಿಂಗಪುರದ ಮೌಂಟ್ ಎಲಿಜೆಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅಂಬರೀಶ್ ಸಲಹೆ ನೀಡಿದ್ದರು. ಅಲ್ಲಿ, ಅಂಬರೀಶ್ ಸಹ ಚಿಕಿತ್ಸೆ ಪಡೆದಿದ್ದರು. ಎಂ.ಪಿ.ರವೀಂದ್ರ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ವಿಶೇಷ ವಸತಿ ಯೋಜನೆ
ಅಂಬರೀಶ್ 2013ರ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾದರು. ಎಂ.ಪಿ.ರವೀಂದ್ರ ಅವರ ಮೇಲಿನ ಪ್ರೀತಿಯಿಂದಾಗಿ ಅವರು ಪ್ರತಿನಿಧಿಸುವ ಹರಪನಹಳ್ಳಿ ತಾಲೂಕಿಗೆ 1850 ಮನೆಗಳ ವಿಶೇಷ ವಸತಿ ಯೋಜನೆ ನೀಡಿದ್ದರು. ಇದರಿಂದಾಗಿ ಕ್ಷೇತ್ರದಲ್ಲಿ ಹಲವು ಬಡವರಿಗೆ ತಲೆ ಮೇಲೋಂದು ಸೂರು ಸಿಕ್ಕಿತು.

ಎಂ.ಪಿ.ಪ್ರಕಾಶ್ ಸೈಟು ಕೊಡಿಸಿದ್ದರು
ಎಂ.ಪಿ.ಪ್ರಕಾಶ್ ಅವರು ಅಂಬರೀಶ್ ಅವರಿಗೆ ಬೆಂಗಳೂರಿನಲ್ಲಿ ಸೈಟು ಕೊಡಿಸಿದ್ದರು. ಅಂಬರೀಶ್ ಅವರು ಈ ಬಗ್ಗೆ ಹಲವು ವರ್ಷದ ಹಿಂದೆ ಹೇಳಿಕೊಂಡಿದ್ದರು. ಎಂ.ಪಿ.ಪ್ರಕಾಶ್ ಮಗಳ ಮದುವೆಗೆ ಕರೆಯಲು ಅಂಬರೀಶ್ ಅವರನ್ನು ಹುಡುಕುತ್ತಿದ್ದರು. ಅಂಬರೀಶ್ ವುಡ್ ಲ್ಯಾಂಡ್ ಹೋಟೆಲ್‌ನಲ್ಲಿ ಇರುವುದುನ್ನು ತಿಳಿದು ಅಲ್ಲಿಗೆ ಬಂದು ಆಹ್ವಾನ ನೀಡಿದ್ದರು. ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಬಗ್ಗೆ ಮಾಹಿತಿ ತಿಳಿದು, ಜಿ ಕೆಟಗರಿ ನಿವೇಶನದಡಿ ಅಂಬರೀಶ್ ಅವರಿಗೆ ಬೆಂಗಳೂರಿನಲ್ಲಿ ಸೈಟು ಕೊಡಿಸಿದ್ದರು.












Click it and Unblock the Notifications