DK Suresh Wife: ಡಿಕೆ ಸುರೇಶ್ ಪತ್ನಿಯಿಂದ ದೂರವಾಗಿದ್ದೇಕೆ? ಮಗ-ಪತ್ನಿ ಎಲ್ಲಿದ್ದಾರೆ? ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 23: ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಗೆಲುವಿಗೆ ಸಹೋದರ ಡಿ ಕೆ ಸುರೇಶ್ ಎಂತಹ ಸಂದರ್ಭದಲ್ಲಿಯೂ ಅಣ್ಣನ ಪರ ಜೊತೆಯಾಗಿ ನಿಂತಿದ್ದಾರೆ.
ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್ ಅವರನ್ನ ಅವರ ಅಭಿಮಾನಿಗಳು ರಾಮ-ಲಕ್ಷ್ಮಣ ಎಂದೇ ಕರೆಯುತ್ತಾರೆ. ಡಿ ಕೆ ಶಿವಕುಮಾರ್ ಅವರ ರಾಜಕೀಯ ಎಳು ಬೀಳುಗಳಲ್ಲಿ, ಜೈಲಿಗೆ ಹೋದಾ ಸಂದರ್ಭದಲ್ಲಿ, ಸಿಎಂ ಸ್ಥಾನ ಕೈ ತಪ್ಪಿದ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಅವರ ಬೆನ್ನ ಹಿಂದೆ ಧೈರ್ಯವಾಗಿ ನಿಂತವರು ಡಿ ಕೆ ಸುರೇಶ್ ಅವರು, ಡಿ ಕೆ ಸುರೇಶ್ ಅವರು ಡಿ ಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯದಲ್ಲಿ ಮಾತ್ರವಲ್ಲದೇ ಡಿ.ಕೆ. ಶಿವಕುಮಾರ್ ಅವರ ಫ್ಯಾಮಿಲಿಯನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾರೆ. ಆದರೆ, ಡಿ ಕೆ ಸುರೇಶ್ ಅವರಿಗೆ ತಮ್ಮದೇ ಆದ ಫ್ಯಾಮಿನಿ ಇಲ್ವಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅವರ ಹೆಂಡತಿ ಯಾರು, ಮಕ್ಕಳು ಯಾರು ಎಂಬ ಬಗ್ಗೆ ಮಾಜಿ ಸಂಸದರಾ ಡಿ ಕೆ ಸುರೇಶ್ ಅವರೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹೆಂಡತಿ-ಮಗ ಎಲ್ಲಿದ್ದಾರೆ? ಪತ್ನಿಯಿಂದ ದೂರವಾಗಿದ್ದೇಕೆ ಗೊತ್ತಾ?
ಡಿ ಕೆ ಶಿವಕುಮಾರ್ ಅವರ ಹೆಂಡತಿಯ ಹೆಸರು ಉಷಾ ಶಿವಕುಮಾರ್, ಡಿ ಕೆ ಶಿವಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ. ಆದರೆ, ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಮದುವೆಯಾಗಿದ್ದಾರೆ ಅಂತ ಗೊತ್ತು. ಅವರ ಪತ್ನಿ ಯಾರು? ಪತ್ನಿಯಿಂದ ಡಿ ಕೆ ಸುರೇಶ್ ದೂರವಾಗಿದ್ದೇಕೆ? ಈಗ ಎಲ್ಲಿದ್ದಾರೆ? ಮಗ ಯಾರ ಜೊತೆಯಲ್ಲಿದ್ದಾನೆ? ಈಗ ಡಿ ಕೆ ಸುರೇಶ್ ಅವರು ಪತ್ನಿಯ ಸಂಪರ್ಕದಲ್ಲಿದ್ದಾರಾ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಹಾಗೂ ಅವರ ಬೆಂಬಲಿಗರಿಗೆ ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಡಿ ಕೆ ಸುರೇಶ್ ಅವರೇ ಮುಕ್ತವಾಗಿ ಉತ್ತರವನ್ನ ನೀಡಿದ್ದಾರೆ.
ಡಿ ಕೆ ಸುರೇಶ್ ಅವರು ತಮ್ಮ ಹೆಂಡತಿಯಿಂದ ದೂರವಾಗಿದ್ದಾರೆ. ನನ್ನ ಚಿಂತನೆಗಳೇ ಬೇರೆ, ಅವರ ಚಿಂತನೆಗಳೇ ಬೇರೆ. ಹಾಗಾಗಿ ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗಿಲ್ಲ. ಇದೇ ಕಾರಣಕ್ಕೆ ಇಬ್ಬರೂ ದೂರ ಆದೆವು ಅಂತ ಡಿ ಕೆ ಸುರೇಸ್ ಅವರು ಮೊದಲ ಬಾರಿಗೆ ಪತ್ನಿಯ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಪತ್ನಿ ಯಾರು? ಈಗ ಎಲ್ಲಿದ್ದಾರೆ ಎಂಬ ಬಗ್ಗೆ ಡಿ ಕೆ ಸುರೇಶ್ ಅವರು ಮಾಹಿತಿಯನ್ನ ಹಂಚಿಕೊಂಡಿಲ್ಲ.
ನನ್ನ ಮಗ ಸದ್ಯಕ್ಕೆ ಗ್ರಾಜುಯೇಟ್ ಮಾಡಿದ್ದಾನೆ, ಅವನ ತಾಯಿ ಜೊತೆ ಇದ್ದಾನೆ ಅಂತ ಡಿಕೆ ಸುರೇಶ್ ಹೇಳಿದ್ದಾರೆ. ಅಲ್ಲದೇ ಮಗನ ಬಗ್ಗೆ ನಿಮ್ಮ ಕನಸೇನು ಎಂಬ ಪ್ರಶ್ನೆಗೆ ಡಿ ಕೆ ಸುರೇಶ್ ಅವರು ಉತ್ತರಿಸಿದ್ದು, ಮಗ ಅಂದ ಮೇಲೆ ಕನಸು ಇದ್ದೇ ಇರುತ್ತೆ. ನೋಡೋಣ ಯಾವತ್ತು ಕಾಲ ಕೂಡಿ ಬರುತ್ತೆ ಅಂತ. ಮಗ ನನ್ನ ಹತ್ತಿರ ದಿನಾ ಮಾತನಾಡುತ್ತಾನೆ ಅಂತ ಹೇಳಿದ್ದಾರೆ.
ತಮ್ಮ ಮಗನ ಬಗ್ಗೆ ತಮಗಿರುವ ಕನಸುಗಳು, ಆತ ಮುಂದೆ ಏನು ಆಗಬೇಕು ಎಂಬ ಬಗ್ಗೆ ಡಿಕೆ ಸುರೇಶ್ ಮನ ಬಿಚ್ಚಿ ಮಾತನಾಡಿದ್ದಾರೆ. ನಮ್ಮ ಅಪ್ಪನ ಮಾತನ್ನೇ ನಾನು ಕೇಳಿರಲಿಲ್ಲ. ಆದರೆ, ಆತ ಈಗಿನ ಕಾಲದ ಹುಡುಗ, ಹೀಗಾಗಿ ಅವನ ಯೋಚನೆಗಳು, ಪ್ಲಾನ್ ಏನಿರುತ್ತೆ ಗೊತ್ತಿಲ್ಲ. ಅವನು ನನ್ನ ಮಾತು ಕೇಳ್ತಾನೋ, ಕೇಳಲ್ವೋ ಗೊತ್ತಿಲ್ಲ. ನೋಡೋಣ ವಿಧಿಯಾಟ ಹೇಗಿದೆ ಅಂತ ಡಿಕೆ ಸುರೇಶ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.












Click it and Unblock the Notifications