ಬಿಜೆಪಿ-ಕೆಜೆಪಿ ಒಡೆಯದಿದ್ದರೆ ಈ ಜನ್ಮದಲ್ಲಿ ಸಿದ್ದರಾಮಯ್ಯ ಸಿಎಂ ಆಗ್ತಾ ಇರಲಿಲ್ಲ: ಈಶ್ವರಪ್ಪ

ಶಿವಮೊಗ್ಗ,ಡಿಸೆಂಬರ್ 31: ಬಿಜೆಪಿ, ಕೆಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಈ ಜನ್ಮದಲ್ಲಿ ಸಿಎಂ ಆಗ್ತಾ ಇರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹರಿಹಾಯ್ದಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಸಿದ್ದರಾಮಯ್ಯರನ್ನ ಬಸವಪ್ರಭು ಸ್ವಾಮಿಗಳೇ ಮುಂದಿನ ಸಿಎಂ ಎಂದು ಘೋಷಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿಎಂ ಅಂತ ಘೋಷಣೆ ಯಾಕೆ?, ಸಿಎಂ ಸ್ಥಾನದಲ್ಲಿ ಕೂರಿಸಬೇಕಿತ್ತು. ಬಿಜೆಪಿ, ಕೆಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಜನ್ಮದಲ್ಲಿ ಸಿಎಂ ಆಗ್ತಾ ಇರಲಿಲ್ಲ ಎಂದು ಹೇಳಿದ್ದಾರೆ.

ಯಾರು ಬೇಡ ಅಂತಾರೇ‌,‌ಅವರೇ ತೆಗೆದುಕೊಂಡು ಹೋಗಿ ಸಿಎಂ ಸ್ಥಾನದಲ್ಲಿ ಕೂರಿಸಲಿ.‌ ಯಾರೋ ಒಬ್ಬರು ತೀರ್ಮಾನ ತೀರ್ಮಾನ ಮಾಡುವುದಕ್ಕೆ ಬರಲ್ಲ. ರಾಜ್ಯದ ಜನ ಸರ್ಕಾರ ಏನ್ ಕೆಲಸ ಮಾಡಿದೆ. ಸಂಘಟನೆ ಏನಿದೆ ಎಲ್ಲವನ್ನೂ ಗಮನಿಸುತ್ತಾರೆ. ಇವರ ನಾಯಕತ್ವ ಇದ್ದಾಗ ಏನು ಅಭಿವೃದ್ಧಿಯಾಗಿದೆ ಎಲ್ಲವನ್ನೂ ನೋಡ್ತಾರೆ ಎಂದರು.

Former Minister K S Eshwarappa Slams D K Shivakumar

ನಾವು ಏಕತೆಯಿಂದ ಇದ್ದೇವೆ. ಅಂದಿಗಿಂತ ಇಂದು ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬೆಳೆದಿದೆ. ಮೋದಿ ಅವರ ನಾಯಕತ್ವದ ಜೊತೆಗೆ ಅಭಿವೃದ್ಧಿ ಕೆಲಸ, ಸಂಘಟನೆ ಸಹ ಇದೆ. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ ಎನ್ನುವ ವಿಶ್ವಾಸ ನನಗಿದೆ. ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಯಾರೋ ಸ್ವಾಮೀಜಿ ಹೇಳಿದರೆ ಆಗಲ್ಲ.‌ರಾಜ್ಯದ ಜನರು ಅದನ್ನು ತೀರ್ಮಾನ ಮಾಡಬೇಕು. ಆ ಜನ ಬಿಜೆಪಿ ಪರವಾಗಿ ಇದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಅಮಿತ್ ಶಾ ಬಂದರೇ ಮಂಡ್ಯ ಅಭಿವೃದ್ದಿಯಾಗುತ್ತಾ ಎಂದು ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ. ಹಾಗಾದರೇ ರಾಹುಲ್ ಗಾಂಧಿ ಯಾತ್ರೆಯಿಂಧ ಭಾರತ್ ಜೋಡಣೆಯಾಗುತ್ತಾ..? ಅಮಿತ್ ಶಾ ಭಾರತದ 2ನೇ ವಲ್ಲಭಾಯ್ ಪಟೇಲ್. ಅಮಿತ್ ಶಾ ಗೃಹ ಸಚಿವರಾದ ಬಳಿಕ ಭಯೋತ್ಪಾದನೆ ನಿಯಂತ್ರಣ ವಾಗಿದೆ ಎಂದು ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.

ಅಮಿತ್ ಶಾ ಐದು ವರ್ಷನೂ ಇಲ್ಲಿ ಬಂದು ಆಳ್ವಿಕೆ ಮಾಡಕ್ಕೆ ಬರಲ್ಲ. ಒಂದು ಸರಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಬಂದು ಹೋದರು. ಹಾಗಾದ್ರೆ ಭಾರತ ಜೋಡ್ಸಿ ಬಿಡ್ತಾ...? ಹಾಗಂತ ನಾನು ರಾಹುಲ್ ಗಾಂಧಿಗೆ ಟೀಕೆ ಮಾಡ್ಲಾ...? ರಾಹುಲ್ ಗಾಂಧಿಗೆ ದೇಶ ನೋಡುವ ಅವಕಾಶ ಸಿಕ್ತು. ಅದಕ್ಕಾಗಿ ನಾನು ಸಂತೋಷ ಪಡುತ್ತೇನೆ. ಅಮಿತ್ ಶಾ ದೆಹಲಿಯಲ್ಲೇ ಕುಳಿತು ಎಲ್ಲವನ್ನೂ ಗಮನಿಸ್ತಾ ಇದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಅಮಿತ್ ಶಾ ಎಷ್ಟು ಕ್ರಮವನ್ನು ಕೈಗೊಂಡರು. ಇದೇ ಸಿದ್ದರಾಮಯ್ಯ ಇದ್ದಂತಹ ಸಂದರ್ಭದಲ್ಲಿ ಏಕೆ ಮಾಡ್ಲಿಲ್ಲ...? ಡಿ.ಕೆ ಶಿವಕುಮಾರ್ ಆಗ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದರು.‌

Former Minister K S Eshwarappa Slams D K Shivakumar

ಕೇಂದ್ರ ಗೃಹ ಸಚಿವರು ದಿಟ್ಟ ಹೆಜ್ಜೆ ಇಟ್ಟು ಮುನ್ನುಗುತ್ತಿದ್ದಾರೆ. ನಾವು ಶಾಂತಿ ಕಾಪಾಡಬೇಕು ಎಂಬ ಪ್ರಯತ್ನ ಮಾಡುತ್ತಿದ್ದೇವೆ.ಆದರೆ, ಕಾಂಗ್ರೆಸ್ ಶಾಂತಿ ಕದಡುವ ಭಯೋತ್ಪಾದಕರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ. ಅಮಿತ್ ಶಾ ಮಾಡುತ್ತಿರುವ ಕೆಲಸ ಬೆಂಬಲಿಸಿ. ನೀವು ರಾಷ್ಟ್ರಭಕ್ತರಾಗುತ್ತೀರಿ. ಇಲ್ಲವಾದ್ರೇ ಭಯೋತ್ಪಾದಕರ ರಕ್ತ ನಿಮ್ಮ ಮೈಯಲ್ಲಿ ಹರಿಯುತ್ತಿದೆ ಎಂದು ರಾಜ್ಯದ ಜನ ತೀರ್ಮಾನ ಮಾಡ್ತಾರೆ.‌ ಇವಾಗ ಅಲ್ಪ ಸ್ವಲ್ಪ ಸೀಟ್ ಬಂದಿದೆ.‌ ಮುಂದಿನ ಚುನಾವಣೆಯಲ್ಲಿ ಭಯೋತ್ಪಾದಕರ ಜೊತೆ ಜನ ನಿಮ್ಮನ್ನು ಹೊರಗೆ ಕಳಿಸ್ತಾರೆ ಎಂದ ಈಶ್ವರಪ್ಪ ಕಿಡಿಕಾರಿದರು.

ಪಂಚಮಸಾಲಿಯವರನ್ನ 2 ಡಿ ಮತ್ತೆ ಒಕ್ಕಲಿಗರನ್ನ 2 ಸಿಗೆ ಸೇರಿಸಬೇಕು ಎಂಬ ಬಿಜೆಪಿಯ ಪ್ರಯತ್ನಕ್ಕೆ ಇದು ಮೊದಲ ಹೆಜ್ಜೆಯಾಗಿದೆ. ಇದು ಹೊಸ ಮೀಸಲಾತಿಯಾಗಿ ಹೊರಬರುವ ಸಾಧ್ಯತೆ ಇದೆ. ಇದಕ್ಕೆ ಇಎಸ್ ಡಬ್ಲ್ಯೂ ಯಿಂದ ಎಷ್ಟು ಮೀಸಲಾತಿ ನೀಡಬಹುದು ಬೇರೆ ಕಡೆಯಿಂದ ಎಷ್ಟು ಮೀಸಲು ತರಬಹುದು ಎಂಬುದು ಚರ್ಚೆ ನಡೆಯುತ್ತಿದೆ. ಇದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಸಹಕಾರ ನೀಡಬೇಕು. ಈಗಷ್ಟೇ ಮದುವೆಯಾಗಿದೆ 10 ಮಕ್ಕಳಾಗಬೇಕು ಎಂದರೆ ಹೇಗೆ? ಅಂತ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದ್ದಾರೆ.

ನಮಗೆ ಯುಗಾದಿ ಹೊಸ ವರ್ಷ, ಇದು ವಿದೇಶಿಗರ, ಕ್ರಿಶ್ಚಿಯನ್ ಹಬ್ಬ ಎಂದ ಈಶ್ವರಪ್ಪ

ನನಗೆ ಹೊಸ ವರ್ಷ ಯುಗಾದಿಗೆ. ಇವಾಗ ಅಲ್ಲ. ಹೊಸ ವರ್ಷ, ಸಂಭ್ರಮಾಚರಣೆ ಬೇರೆ ಬೇರೆ. ಹಿಂದೂ ಸಂಪ್ರದಾಯದಂತೆ ಯುಗಾದಿಗೆ ನಾನು ಹೊಸ ವರ್ಷ ಮಾಡುತ್ತೇನೆ.‌ ಇದು ಕ್ರಿಶ್ಚಿಯನ್ ರ ಹಬ್ಬ, ವಿದೇಶಿಯರ ಹಬ್ಬ ಅವರು ಸಂತೋಷದ ಮಾಡಲಿ. ಅದಕ್ಕೆ ನಾವೇನ್ ಅಡ್ಡಿಪಡಿಸಲ್ಲ ಎಂದ ಈಶ್ವರಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+