ಸಿದ್ದರಾಮಯ್ಯ ತಾವು ಕಳ್ಳರಾಗಿದ್ದು, ಉಳಿದವರನ್ನು ಕಳ್ಳರಂತೆ ನೋಡ್ತಾರೆ: ಜನಾರ್ದನ ರೆಡ್ಡಿ

ಕೊಪ್ಪಳ, ಆಗಸ್ಟ್‌ 28: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಕಳ್ಳರಾಗಿದ್ದು, ಉಳಿದವರನ್ನು ಕಳ್ಳರಂತೆ ನೋಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಕಿಡಿಕಾರಿದ್ದಾರೆ.

ಗಂಗಾವತಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ನನ್ನ ವಿರುದ್ಧ ಪ್ರಾಶಿಕ್ಯೂಶನ್ ಗೆ ರಾಜ್ಯಪಾಲರಿಗೆ ಸರ್ಕಾರದಿಂದ ‌ಒತ್ತಡ ಹೇರುತ್ತಿದ್ದಾರೆ.ನಾನು ಜೈಲಿನಿಂದ ಹೊರಬಂದ ಮೇಲೆ ಅಕ್ರಮ ಆಸ್ತಿ ಕೇಸ್ ಹಾಕಿಸಿದ್ರು, ಈ ಬಗ್ಗೆ ಎರಡು ಸಲ ಬಿ-ರಿಪೋರ್ಟ್ ಸಲ್ಲಿಸಲಾಗಿದೆ. ಲೋಕಾಯುಕ್ತ ಎಸ್ಪಿಯವರು ಮೂರು ಬಾರಿ ನೋ ಆಬ್ಜೇಕ್ಸೆನ್ ಪೈಲ್ ಮಾಡಿದ್ದಾರೆ. ಸಿದ್ದರಾಮಯ್ಯ ಗೆ ಮೂಡಾ ಹಗರಣ ಕಂಠಕವಾಗಿದೆ.ಸಿಎಂ ತಾವು ಕಳ್ಳರಾಗಿದ್ದು, ಹೀಗಾಗಿ ಉಳಿದವರನ್ನು ಕಳ್ಳರ ರೀತಿ ನೋಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Former Minister Janardana Reddy Attacked Chief Minister Siddaramaiah

ಸಿದ್ದರಾಮಯ್ಯ ಅವರು ಉಳಿದವರನ್ನು ಎಳೆದುಕೊಳ್ಳೋ ಕೆಲಸ ಮಾಡುತ್ತಿದ್ದಾರೆ. ಮತ್ತೆ ಪ್ರಾಶಿಕ್ಯೂಶನ್ ಗೆ ಕಳಿಸಿದ್ರೆ ಸಿದ್ದರಾಮಯ್ಯ ಸರ್ಕಾರ ನಗೆಪಾಟಲಿಗೀಡಾಗುತ್ತದೆ. ಇಂತಹ ಬೆದರಿಕೆಗೆ ಜನಾರ್ದನ ರೆಡ್ಡಿ ಬೆದರಲ್ಲ.

ಸಿದ್ದರಾಮಯ್ಯ ಅಹಿಂದ ಮುಖವಾಡ ಹಾಕಿಕೊಂಡು ಜನರಿಗೆ ವಂಚಿಸಿದ್ದಾರೆ. ಅನಾಮಧೇಯ ಹೆಸರ ಮೇಲೆ ನೂರಾರು ಸೈಟು ತಗೆದುಕೊಂಡಿದ್ದಾರೆ.ಇದು ನಾಲ್ಕು ಸಾವಿರ ಕೋಟಿ ಹಗರಣವಾಗಿದೆ.ಡ್ಯಾನ್ಸ್ ಮಾಡ್ತಾ ಕುಣಿತಾ ಬಳ್ಳಾರಿಗೆ ಬಂದು ಮಾತನಾಡಿದ್ದರು.ಲಕ್ಷ ಕೋಟಿ ಕೊಳ್ಳೆ ಹೊಡೆದಿದ್ದಾರೆ.

ಆ ಹಣದಲ್ಲಿ ಬಡವರಿಗೆ ಮನೆ ಕಟ್ಟಿಕೊಡ್ತೇನೆ ಅಂತ ಹೇಳಿದ್ರು ದೊಡ್ಡಮನುಷ್ಯ ಸಿದ್ದರಾಮಯ್ಯ ಅವರು ಎರಡು ಸಲ ಅಧಿಕಾರಕ್ಕೆ ಬಂದಿದ್ದಾರೆ. ಹಾಗಾದ್ರೆ ಲಕ್ಷ ಕೋಟಿ ಎಲ್ಲಿಗೆ ಹೋಯ್ತು?.ಸಿಎಂ ಪದವಿಗೆ ಆಸೆಗೆ ಬಿದ್ದು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು.ಅವರ ಕೆಟ್ಟ ಹಣೆಬರಹವನ್ನು ಅವರೇ ಬರೆದುಕೊಂಡಿದ್ದಾರೆ.ಅವರ ಕೆಟ್ಟ ಕರ್ಮದಿಂದ ತಪ್ಪಿಸಿಕೊಳ್ಳಲು ಆಗಲ್ಲ ಎಂದು ಹೇಳಿದರು.

ಗಂಗಾವತಿಯಲ್ಲಿ ತಿರುಪತಿ, ಬಿಲ್ಲು, ಗಧೆ ಲಾಂಛನ ವಿದ್ಯುತ್ ಕಂಬಗಳನ್ನು ಹಾಕುತ್ತೇವೆ. ರಾಣಾ ಪ್ರತಾಪ ಸಿಂಹ ವೃತ್ತದಿಂದ ಅಂಜನಾದ್ರಿಯವರೆಗೂ ವಿದ್ಯುತ್ ಕಂಬ ಹಾಕಲಾಗುವುದು.ಒಟ್ಟು 65 ಕೋಟಿ ರೂಪಾಯಿಯಲ್ಲಿ ಮಂಜೂರಾಗಿದೆ. ಇಷ್ಟರಲ್ಲಿಯೇ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಲಾಗುವುದು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಮಾರ್ಗದಲ್ಲಿ ಮಾತ್ರ ಈ ರೀತಿಯ ವಿದ್ಯುತ್ ದೀಪ ಅಳವಡಿಸಲಾಗುತ್ತಿದೆ. ಕೋಮ ಸಾಮರಸ್ಯಕ್ಕೆ ಧಕ್ಕೆಯಾಗುವಂಥ ವಿದ್ಯುತ್ ಕಂಬ ಅಳವಡಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+