ಹಿರಿಯ ನಟ, ಮಾಜಿ ಸಚಿವ ಎಂ.ಎಚ್.ಅಂಬರೀಶ್ ಪರಿಚಯ

Recommended Video

      Ambareesh, Kannada Actor Demise : ನಟ ಅಂಬರೀಶ್ ವ್ಯಕ್ತಿಚಿತ್ರ | Oneindia Kannada

      ಬೆಂಗಳೂರು, ನವೆಂಬರ್ 24 : ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅವರು ಶನಿವಾರ ಮೃತಪಟ್ಟಿದ್ದಾರೆ.

      66 ವರ್ಷದ ಎಂ.ಎಚ್.ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) ಶನಿವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಕಿಡ್ನಿ, ಶ್ವಾಸಕೋಶದ ಸಮಸ್ಯೆ ಹಿನ್ನಲೆಯಲ್ಲಿ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

      ಖ್ಯಾತ ಪಿಟೀಲು ವಾದಾಕ ವಿದ್ವಾನ್ ದಿ.ಚೌಡಯ್ಯ ಅವರ ಮೊಮ್ಮಗ ಅಂಬರೀಶ್. ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದು ಖ್ಯಾತಿ ಪಡೆದಿದ್ದರು. ಸಾವಿರಾರು ಅಭಿಮಾನಿಗಳು ಅಂಬರೀಶ್ ನಿಧನಕ್ಕೆ ಕಣ್ಣೀರು ಹಾಕುತ್ತಿದ್ದಾರೆ.

      'ಅಂಬಿ ನಿಂಗ್ ವಯಸ್ಸಾಯ್ತೋ' ಅಂಬರೀಶ್ ಅಭಿನಯದ ಕೊನೆಯ ಚಿತ್ರ. 2013ರ ವಿಧಾನಸಭೆ ಚುನಾವಣೆಯಲ್ಲಿ ಅವರು ಮಂಡ್ಯ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ಅವರ ಕೊನೆಯ ಚುನಾವಣೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದಲ್ಲಿ ಅವರು ವಸತಿ ಸಚಿವರಾಗಿದ್ದರು.

      ರೆಬಲ್ ಸ್ಟಾರ್ ಪರಿಚಯ

      ರೆಬಲ್ ಸ್ಟಾರ್ ಪರಿಚಯ

      * ಎಂ.ಎಚ್.ಅಂಬರೀಶ್ (66)
      * ಮಳವಳ್ಳಿ ಹುಚ್ಚೇಗೌಡ ಅಮರನಾಥ್
      * 1952, ಮೇ 29ರಂದು ಜನನ
      * ಮಂಡ್ಯದ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನನ

      ಕುಟುಂಬದ ಪರಿಚಯ

      ಕುಟುಂಬದ ಪರಿಚಯ

      * ಖ್ಯಾತ ಪಿಟೀಲು ವಿದ್ವಾನ್ ದಿ.ಟಿ.ಚೌಡಯ್ಯ ಅವರ ಮೊಮ್ಮಗ
      * ಪತ್ನಿ : ಹಿರಿಯ ನಟಿ ಸುಮಲತಾ
      * ಪುತ್ರ : ಅಭಿಷೇಕ್ ಗೌಡ

      ನಾಗರಹಾವು ಮೊದಲ ಚಿತ್ರ

      ನಾಗರಹಾವು ಮೊದಲ ಚಿತ್ರ

      * 1973ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ
      * ಮೊದಲ ಚಿತ್ರ ನಾಗರಹಾವು (ಪುಟ್ಟಣ್ಣ ಕಣಗಾಲ್ ನಿರ್ದೇಶನ)
      * ನಾಯಕನಾಗಿ ಮೊದಲ ಚಿತ್ರ ಅಂತ (ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನ)
      * ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್ 100ನೇ ಚಿತ್ರ

      ಮಾಜಿ ಸಚಿವ, ಸಂಸದ

      ಮಾಜಿ ಸಚಿವ, ಸಂಸದ

      * ಮಂಡ್ಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ
      * ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಣೆ
      * ಮಂಡ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ
      * ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಣೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+