SM Krishna: ಮಾಜಿ ಸಿಎಂ ಎಸ್ ಎಂ ಕೃಷ್ಣ ಆಸ್ಪತ್ರೆಗೆ ದಾಖಲು!
ಬೆಂಗಳೂರು, ಏಪ್ರಿಲ್ 21: ತೀವ್ರ ಜ್ವರ ಹಿನ್ನೆಲೆ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇಂದು(ಭಾನುವಾರ) ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದು ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೆ ತೀವ್ರ ಜ್ವರದಿಂದ ಬಳಲುತ್ತಿದ್ದ ಎಸ್ ಎಂ ಕೃಷ್ಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಇದೀಗ ಮತ್ತೆ ಶೀತ ಜ್ವರದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಕಾಂಗ್ರೆಸ್‌ನವರದು ಚಂಬು, ಮೋದಿಯವರದು ಅಕ್ಷಯ ಪಾತ್ರೆ: ಬೊಮ್ಮಾಯಿ
ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವ ಸಿದ್ದತೆ ಇಲ್ಲದ ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದು, ಆರ್ಥಿಕ ವಿಚಾರದಲ್ಲಿ ಹತಾಶರಾಗಿ ತೀರ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಹತ್ತು ವರ್ಷದ ಎನ್ ಡಿ ಎ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ವಿಪತ್ತು ನಿರ್ವಹಣಾ ಮಾನದಂಡ ಬದಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನ ಹಣ ಹೆಚ್ಚಿಗೆ ಬಂದಿದೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ಮರೆಮಾಚಿದೆ. ತನ್ನ ತಪ್ಪು ಮುಚ್ಚಿಕೊಳ್ಳಲು ತೀರ ತಳಮಟ್ಟಕ್ಕೆ ಹೋಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಹಣಕಾಸು ವಿಚಾರದಲ್ಲಿ ಹತಾಶರಾಗಿ ಕಾಂಗ್ರೆಸ್ ನಾಯಕರಿ ತೀರ ಕೆಳಮಟ್ಟದ ಭಾಷೆ ಬಳಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಿಂದ ಕೇಂದ್ರಕ್ಕೆ ನಾಲ್ಕು ಲಕ್ಷಕೋಟಿ ತೆರಿಗೆ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಕೇಂದ್ರದ ನೇರ ತೆರಿಗೆ, ರಾಜ್ಯಕ್ಕೆ ನೀಡುವ ತೆರಿಗೆ ಪಾಲಿಮ ಹಂಚಿಕೆ ಪಾಲಿನಲ್ಲಿ ಬರುವುದಿಲ್ಲ. ಅದು ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರ ಕಾಲದಿಂದ ಇದೆ. ಈ ಪದ್ದತಿ ಜಿಎಸ್ಟಿಗೆ ಮಾತ್ರ ಅನ್ವಯವಾಗತ್ತದೆ ಎಂದರು.
ಕಾಂಗ್ರೆಸ್ ನವರು ಕೇವಲ ಆರೋಪ ಮಾಡುವ ಬದಲು ಯುಪಿಎ ಅವಧಿ ಹಾಗೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಹಾಗೂ ತೆರಿಗೆ ಪಾಲಿನಹಣ ಬಂದಿದೆ ಎಂದು ಹೋಲಿಕೆ ಮಾಡಿ ನೋಡಲಿ. 2004-2014 ರ ಯುಪಿಎ ಅವಧಿಯಲ್ಲಿ 81,795 ಕೋಟಿ ರೂ. ತೆರಿಗೆ ಪಾಲಿನ ಹಣ ಬಂದಿದೆ. 2014-2024 ರ ಎನ್ ಡಿಎ ಅವಧಿಯಲ್ಲಿ 2,82,791 ಕೋಟಿ ರೂ. ರಾಜ್ಯಕ್ಕೆ ಬಂದಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ 4 ಪೈಸೆ ರಾಜ್ಯಕ್ಕೆ ಬರುತ್ತಿತ್ತು ಈಗ 13 ರೂ. ಸಿಗುತ್ತಿದೆ ಎಂದು ಬೊಬ್ಬೆ ಹೊಡಿತ್ತಿದ್ದಾರೆ 2004-2014 ರ ಯುಪಿಎ ಅವಧಿಯಲ್ಲಿ ಕೇಂದ್ರದ ಅನುದಾನ 60,799 ಕೋಟಿ ಬಂದಿದೆ. 2014-24 ರ ವರೆಗಿನ ಪ್ರಧಾನ ನರೇಂದ್ರ ಮೋದಿ ಅವಧಿಯಲ್ಲಿ 2,33,93 ಕೋಟಿ ರೂ. ಅನುದಾನ ಬಂದಿದೆ.
ರಾಜ್ಯಕ್ಕೆ ಕೇಂದ್ರ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಕರ್ನಾಟಕಕ್ಕೆ 6012 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಿದ್ದು, 50 ವರ್ಷಗಳ ಬಳಿಕ ಸಾಲ ಮರಳಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ರಾಜ್ಯ ಸರ್ಕಾರಗಳಿಗೆ ಶೇ 27% ತೆರಿಗೆ ಪಾಲು ಬರುತ್ತಿತ್ತು. ಅದನ್ನು ಯುಪಿಎ ಅವಧಿಯಲ್ಲಿ ಶೇ 37% ಹೆಚ್ಚಿಸಬೇಕೆಂದು ಎಲ್ಲ ರಾಜ್ಯಗಳು ಒತ್ತಾಯ ಮಾಡಿದ್ದವು.ಕಾಂಗ್ರೆಸ್ ಸರ್ಕಾರ ಹೆಚ್ಚಳ ಮಾಡಲಿಲ್ಲ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಅದನ್ನು ಶೇ 40% ಕ್ಕೆ ಏರಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ ಆಗಿದೆ ಹಣಕಾಸು ವೆಚ್ಚದ ಮೇಲೆ ಹಿಡಿತ ಇಲ್ಲ ಗ್ಯಾರಂಟಿ ಯೋಜನೆಗಳಿಗೆ 54 ಸಾವಿರ ಕೋಟಿ ವೆಚ್ಚ ಆಗತ್ತದೆ. ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಂಡಿಲ್ಲ. ಜನರ ತೆರಿಗೆ ಹಣವನ್ನು ಗ್ಯಾರೆಂಟಿ ಗಳಿಗೆ ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಅದನ್ನು ಮರೆ ಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ರೈತರಿಗೆ 4 ಸಾವಿರ ರೂ. ನೀಡುತ್ತಿತ್ತು. ರಾಜ್ಯ ಸರ್ಕಾರ ಅದನ್ನು ಕಡಿತ ಮಾಡಿ, ರೈತರಿಗೆ ಚಂಬು ಕೊಟ್ಟಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ವಿದ್ಯಾರ್ಥಿಗಳಿ ಸ್ಕಾಲರ್ ಶಿಪ್ ಕೊಡಲಾಗಿತ್ತು, ಅದನ್ನು ನಿಲ್ಲಿಸಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ ಟಿಎಸ್ಪಿಯ 11380 ಕೋಟಿ ಎಸ್ಸಿಎಸ್ಟಿ ಅನುದಾನವನ್ನ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದು ರಾಜ್ಯ ಸರ್ಕಾರ ಎಂದು ಆರೋಪಿಸಿದರು.












Click it and Unblock the Notifications