ರಾಜ್ಯಸಭೆ ಚುನಾವಣೆ: ಫಲಿತಾಂಶಕ್ಕೂ ಮುನ್ನವೇ ಪರೋಕ್ಷವಾಗಿ ಸೋಲನ್ನ ಒಪ್ಪಿಕೊಂಡ್ರಾ ದಳಪತಿ
ಬೆಂಗಳೂರು, ಫೆಬ್ರವರಿ 27: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಾಜ್ಯಸಭೆ ಚುನಾವಣೆಗೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಹೊಸ ದಾಳ ಪ್ರಯೋಗ ಮಾಡಿದೆ. ರಾಜ್ಯಸಭಾ ಚುಣಾವಣೆಗೆ ಇಂದು(ಮಂಗಳವಾರ) ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಅಡ್ಡಮತದಾನದ ಆತಂಕ ರಾಜಕೀಯ ಪಕ್ಷಗಳೀಗೆ ಎದುರಾಗಿದೆ.
ಹೌದು, ಈ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದು, ರಾಜ್ಯ ಸಭೆ ಚುನಾವಣೆಯಲ್ಲಿ ಫಲಿತಾಂಶಕ್ಕೂ ಮುನ್ನವೇ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಂಡಿದ್ದಾರೆ.

ಇನ್ನು ಎಸ್ ಟಿ ಸೋಮಶೇಖರ್ ನಡೆಯ ಬಗ್ಗೆ ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಮೂರು ವರ್ಷ ಮಂತ್ರಿಯಾಗಿದ್ದಾರೆ. ಬಿಜೆಪಿಗೆ ಹೋಗಬೇಕಾದರೆ ಕಾರಣ ಕೊಟ್ಟಿದ್ದರು, ಅಭಿವೃದ್ಧಿ ಆಗ್ತಿಲ್ಲ ಅಂತ ಹೋಗಿದ್ದರು. ಮೂರು ವರ್ಷ ಮಂತ್ರಿ ಆಗಿ ಅಭಿವೃದ್ಧಿ ಮಾಡಿಕೊಂಡ್ರು. ಎಸ್ ಟಿ ಎಸ್ ಮೂರು ವರ್ಷ ಬಿಜೆಪಿಯಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕಾರಣಕ್ಕಾಗಿ ಬಿಜೆಪಿ ಸೇರಿದ್ದರು. ಮಂತ್ರಿಯಾಗಿ ಅಭಿವೃದ್ಧಿ ಕಾರ್ಯಕ್ರಮ ಯಚೇತ್ತವಾಗಿ ಪಡೆದುಕೊಂಡನು ಅವರ ಅಭಿವೃದ್ಧಿ ಮಾಡಿದ್ದಾರೆ ಎಂದು ಅರ್ಥ ಅಲ್ಲವೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಆಮಿಷ ಬಗ್ಗೆ ಆರೋಪ ಮಾಡ್ತಿದ್ದಾರೆ. ಆಮಿಷ ಹಾಗೂ ಧಮ್ಕಿ ಕಾಂಗ್ರೆಸ್ ಸಂಸ್ಕೃತಿ. ಸರ್ಕಾರ ರಚನೆಯಾದ ದಿನದಿಂದ 12,13 ಶಾಸಕರು ಕಾಂಗ್ರೆಸ್ ಬರಲು ಸಿದ್ದ ಎಂದು ಹೇಳಿದ್ದರು. ನಮ್ಮ ಶಾಸಕರ ನಿಷ್ಠೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಮ್ಮ ಶಾಸಕರಿಗೆ ಆಮಿಷ ಒಡ್ಡುವ ಕೆಲಸ ನಡೆಯುತ್ತಿತ್ತು. ನಮ್ಮ ಶಾಸಕರ ಬದ್ಶತೆ, ನಿಷ್ಠೆ ಸಾಬೀತು ಪಡಿಸಲು ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ನಾವು 19 ಜನರು ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ಕೊಡಲು ಈ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ಶರಣು ಗೌಡ ನಮ್ಮ ಕುಟುಂಬದ ಸದಸ್ಯ. ಕುಟುಂಬದವರು ಎಲ್ಲರೂ ಒಟ್ಟಾಗಿದ್ದೇವೆ ಎಂದು ತಿಳಿಸುವ ಉದ್ದೇಶದಿಂದ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದರು.












Click it and Unblock the Notifications