ಭೀಕರ ರಸ್ತೆ ಅಪಘಾತ, ಸಾವಿನಲ್ಲೂ ಒಂದಾದ ಐವರು ಜೀವದ ಗೆಳೆಯರು

Posted By:
Subscribe to Oneindia Kannada

ರಾಮನಗರ, ಜುಲೈ 12 : ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದ ಜೀವದ ಗೆಳೆಯರು ಸಾವಿನಲ್ಲೂ ಒಂದಾಗಿದ್ದಾರೆ.

ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರ ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದ ಕ್ಯಾಂಟರ್ ಹಾಗೂ ಕಾರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಗೆಳೆಯರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದ ರಾಜು, ಗುಂಜೂರಿನ ಚಂದ್ರು, ಎಚ್‍ಎಸ್‍ಆರ್ ಲೇಔಟ್‍ ನ ಅನಿಲ್ ಕುಮಾರ್, ಸಂತೋಷ್ ಹಾಗೂ ಮತ್ತೋರ್ವ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ರಾಮನಗರ: ಸಹೋದ್ಯೋಗಿಯನ್ನು ಹತ್ಯೆಗೈದ ಯುವಕನ ಬಂಧನ

Five youths killed in car-canter crash at Ramnagara district

ಮಂಗಳವಾರ ಕನಕಪುರ ತಾಲೂಕಿನ ಕಬ್ಬಾಳು ದೇವಾಲಯಕ್ಕೆ ಐವರೂ ಹೋಗಿ ಪೂಜಾ ಕಾರ್ಯ ಮುಗಿಸಿದ ಬಳಿಕ ವಾಪ್ಪಾಸ್ಸು ಬೆಂಗಳೂರಿಗೆ ತೆರಳುತ್ತಿದ್ದ ಈ ವೇಳೆ ಅತೀವೇಗದಲ್ಲಿದ್ದ ಕಾರು ಹಾಗೂ ಕ್ಯಾಂಟರ್ ಎರಡೂ ಸಹ ಮುಖಾಮುಖಿ ಡಿಕ್ಕಿಯಾಗಿವೆ.

ಘಟನೆಯಲ್ಲಿ ಕ್ಯಾಂಟರ್ ಚಾಲಕನ ಕಾಲು ಮುರಿದಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಐವರ ಮೃತ ದೇಹಗಳೂ ಕೂಡಾ ಕಾರಿನಲ್ಲಿ ಕಚ್ಚಿಕೊಂಡಿದ್ವು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸ ಮಾಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Five youths from the Bengaluru lost their lives in an accident on Kanakpura Road on Tuesday night after their car crashed head-on into a canter coming from the opposite direction. Without waiting for the police to arrive, locals rushed to rescue them but found all the five, in their early twenties, had already been crushed to death inside the vehicle.
Please Wait while comments are loading...