ವೀರಸೇನಾನಿ ಕೆ.ಎಂ ಕಾರ್ಯಪ್ಪರನ್ನು ಸ್ಮರಿಸಿದ ಮಡಿಕೇರಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಡಿಕೇರಿ,ಜನವರಿ,29: ಕೊಡಗಿನ ವೀರಯೋಧ, ಸೇನೆಯ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 117ನೇ ಜನ್ಮ ಜಯಂತಿಯನ್ನು ಮಡಿಕೇರಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸಹಕಾರದಲ್ಲಿ ನಗರದ ಕೋಟೆ ಆವರಣದಲ್ಲಿ ನಡೆದ ಸಮಾರಂಭಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಕೆ.ಸಿ.ಕಾರ್ಯಪ್ಪ ಅವರು, 'ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ದೇಶ, ರಾಜ್ಯ ಹಾಗೂ ಕೊಡಗು ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಇಲ್ಲಿನ ಅರಣ್ಯ, ದೇವರಕಾಡು ಸಂರಕ್ಷಣೆ ಮಾಡುವಂತಾಗಬೇಕು. ಕಾವೇರಿ ನದಿ ನೀರು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಬೇಕಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಮಾತನಾಡಿ,'ದೇಶದ ಪ್ರಥಮ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಶಿಸ್ತು, ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಯುವಜನರು ಅಳವಡಿಸಿಕೊಳ್ಳಬೇಕು' ಎಂದು ಹೇಳಿದರು.[ವೀರಯೋಧ ಕೊಡಗಿನ ಪುತ್ರ ಕಾರ್ಯಪ್ಪನವರಿಗೆ 'ಸೆಲ್ಯೂಟ್']

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್(ನಿವೃತ್ತ) ಕೆ.ಸಿ.ಸುಬ್ಬಯ್ಯ ಅವರು ಮಾತನಾಡಿ 'ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಶಿಸ್ತು ಮತ್ತು ದೇಶಭಕ್ತಿಯನ್ನು ಯುವಜನರಿಗೆ ತಲುಪಿಸುವ ನಿಟ್ಟಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮ ದಿನಾಚರಣೆಯನ್ನು ‘ಶಿಸ್ತಿನ ದಿನಾಚರಣೆ'ಯನ್ನಾಗಿ ಆಚರಿಸುವಂತಾಗಬೇಕು' ಎಂದು ಮನವಿ ಮಾಡಿದರು.

ವೀರಯೋಧ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹುಟ್ಟುಹಬ್ಬದ ಸಂಭ್ರಮ ಈ ಕೆಳಗಿನ ಫೋಟೋಗಳಲ್ಲಿದೆ. ವೀರಯೋಧರಿಗೆ ನಮ್ಮದೊಂದು ನಮನ ಸಲ್ಲಿಸೋಣ.

ಕೆ.ಸಿ.ಕಾರ್ಯಪ್ಪ ಏನು ಹೇಳಿದರು?

ಕೆ.ಸಿ.ಕಾರ್ಯಪ್ಪ ಏನು ಹೇಳಿದರು?

'ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವ ಜನರು ಸೇನೆಗೆ ಸೇರುವತ್ತ ಹೆಚ್ಚು ಆಸಕ್ತಿ ತೋರಬೇಕು. ದೇಶ ಸೇವೆ ಈಶ ಸೇವೆ ಎಂದು ಕೆ.ಸಿ.ಕಾರ್ಯಪ್ಪ ತಿಳಿಯಬೇಕು ಎಂದು ಕಿವಿಮಾತು ಹೇಳಿದರು. ಇವರು ಕೆ.ಎಂ ಕಾರ್ಯಪ್ಪ ಅವರ ಪುತ್ರ. ಕೆ.ಎಂ ಕಾರ್ಯಪ್ಪ ಅವರ ಪೂರ್ಣನಾಮ ಕೊಡಂದೇರಾ ಮಾದಪ್ಪ ಕಾರ್ಯಪ್ಪ.

ಪುತ್ಥಳಿಗೆ ಪುಷ್ಪ ನಮನ

ಪುತ್ಥಳಿಗೆ ಪುಷ್ಪ ನಮನ

ಕೊಡಗು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ಥಳಿಯ ಪಾದಕ್ಕೆ ಹೂವು ಹಾಕುವುದರ ಮೂಲಕ ಜನ್ಮದಿನಾಚರಣೆಯ ಶುಭಕೋರಿದರು.

ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ನಗರದಲ್ಲಿ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನಾಚರಣೆಯನ್ನು ಹಬ್ಬದಂತೆ ಸಂಭ್ರಮದಿಂದ ಪಾಲ್ಗೊಂಡಿದ್ದು, ಇಲಲ್ಇ ಹಲವಾರು ಜನಪದನೃತ್ಯಗಾರರ ತಂಡವೇ ನೆರದಿತ್ತು. ಆಸಂದರ್ಭದಲ್ಲಿ ಕೊಡಗು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ತಮಟೆ ಬಾರಿಸಿ ಸಂಭ್ರಮಪಟ್ಟರು

ಪುಸ್ತಕ ಬಿಡುಗಡೆಯಲ್ಲಿ ಗಣ್ಯರು

ಪುಸ್ತಕ ಬಿಡುಗಡೆಯಲ್ಲಿ ಗಣ್ಯರು

ಜನ್ಮದಿನಾವರಣೆ ಪ್ರಯುಕ್ತ ವೀರಯೋಧ ಕೆ.ಎಂ.ಕಾರ್ಯಪ್ಪ ಅವರ ಕುರಿತ ಪುಸ್ತಕವನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ.ಸಿಇಓ ಚಾರುಲತಾ ಸೋಮಲ್, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆಹಸ್ರನ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮೂವೆರ ಸುಬ್ಬಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ ಬಿ.ಎ.ನಂಜಪ್ಪ, ಎಚ್.ಟಿ.ಅನಿಲ್, ಬಿ.ಸಿ.ದಿನೇಶ್ ಗಣ್ಯರು ಬಿಡುಗಡೆ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Field Marshal K M Cariyappa's 117th birthday celebrated in Madikeri. Field marshal K M Cariyappa as the first Indian Commander in chief of the Indian Army. 
Please Wait while comments are loading...