ಮಗನನ್ನು ಪತ್ತೆ ಹಚ್ಚುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ಕಾದಿತ್ತು ಶಾಕ್‌!

ಬೆಂಗಳೂರು, ಫೆಬ್ರವರಿ 08; ವಯಸ್ಸಿಗೆ ಬಂದ ಮಗ ಕಾಣೆಯಾಗಿದ್ದು, ಪತ್ತೆ ಹಚ್ಚಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ವೃದ್ಧರಿಗೆ ಶಾಕ್ ಆದ ಘಟನೆ ನಡೆದಿದೆ.

ಅವರು ಮಗನಿಗಾಗಿ ಪರದಾಡಿದರೆ ಆತ ಮಾತ್ರ ತಾನು ಪತ್ನಿಯೊಂದಿಗೆ ಜೀವನ ನಡೆಸುತ್ತೇನೆಂದು ಹೆತ್ತ ಪೋಷಕರನ್ನು ದೂರ ಮಾಡಿ ಹೊರಟು ಹೋಗಿದ್ದಾನೆ. ಕೇಳಲು ಸಿನಿಮಾದ ಕತೆಯಂತೆ ಕಂಡರೂ ಇದು ನಿಜವಾಗಿಯೂ ನಡೆದಿರುವ ಘಟನೆ.

ಹಲವು ತಿಂಗಳಿಂದ ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಉಡುಪಿಯ 63 ವರ್ಷದ ಹಿರಿಯ ನಾಗರಿಕರರೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

Father Who Filed Habeas Corpus Petition For Son Shocked

ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಕಾಣೆಯಾದ ಮಗನನ್ನು ಪತ್ತೆ ಹೆಚ್ಚಿ ಕೋರ್ಟ್‌ಗೆ ಹಾಜರುಪಡಿಸಿದರು. ಆತ ಕಳೆದ 1 ವರ್ಷ 8 ತಿಂಗಳಿಂದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಮತ್ತು ಪತ್ನಿಗೆ ಈ ಹಿಂದೆಯೇ ಇಬ್ಬರು ಪತಿಯರಿದ್ದರು. ಅವರಿಂದ ಆಕೆ ತಲಾ ಒಂದು ಗಂಡು ಮಗವಿಗೆ ಜನ್ಮ ನೀಡಿರುವ ವಿಚಾರ ಬಹಿರಂಗವಾಯಿತು.

ಈ ವಿಚಾರ ತಿಳಿದು ಮಗನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಾದ ತಂದೆಗೆ ಶಾಕ್ ಆಯಿತು. ಮಗ ಪತ್ತೆಯಾದ ಮತ್ತು ಆತ ಪತ್ನಿ ಮತ್ತು ಮಕ್ಕಳ ಜೊತೆಗೆ ಬದುಕುವುದಾಗಿ ತಿಳಿಸಿದ್ದರಿಂದ ಅರ್ಜಿದಾರ ತಂದೆಗೆ ಯಾವುದೇ ಪರಿಹಾರ ಕಲ್ಪಿಸಲು ಅವಕಾಶವಿಲ್ಲದೇ ಹೈಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿತು.

ಆ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕಾಣೆಯಾಗಿದ್ದ ಅರ್ಜಿದಾರರ ಪುತ್ರನನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ತನ್ನ ಪತ್ನಿ ಮತ್ತು ಇಬ್ಬರ ಮಕ್ಕಳ ಜೊತೆಗೆ ಆನಂದ್ ಶೆಟ್ಟಿ ವಾಸವಾಗಿದ್ದಾರೆ. ಹಾಗೆಯೇ, ಅವರೊಂದಿಗೆ ಬುದುಕುವುದಾಗಿಯೂ ತಿಳಿಸಿದ್ದಾರೆ. ಆದ್ದರಿಂದ ಅರ್ಜಿಯ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲವೆಂದು ಪ್ರಕರಣ ಮುಕ್ತಾಯಗೊಳಿಸಿತು.

ಪ್ರಕರಣದ ಹಿನ್ನೆಲೆ ಏನು?; ಹಲವು ತಿಂಗಳಿಂದ ಕಾಣೆಯಾಗಿರುವ ತನ್ನ ಮಗ ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಉಡುಪಿಯ 63 ವರ್ಷದ ಹಿರಿಯ ನಾಗರಿಕರು ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಾಗಲಕೋಟೆಯ ಹುನಗುಂದ ಠಾಣಾ ಪೊಲೀಸರು ಮಗ, ಆತನ ಪತ್ನಿ ವಿದ್ಯಾ ಹಾಗೂ ಅವರ ಇಬ್ಬರು ಅಪ್ರಾಪ್ತ ಪುತ್ರರನ್ನು ಹೈಕೋರ್ಟ್ ಮುಂದೆ ಇತ್ತೀಚೆಗೆ ಹಾಜರುಪಡಿಸಿದ್ದರು. ವಿಚಾರಣೆಗೆ ಅರ್ಜಿದಾರರು, ಅವರ ಪತ್ನಿ ಮತ್ತು ಪುತ್ರಿ ಸಹ ಖುದ್ದು ಹಾಜರಾಗಿದ್ದರು. ಮಗ ತಾನು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಲು ಬಯಸಿದ್ದೇನೆ ಎಂದು ಆತ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.

ಇದೇ ವೇಳೆ ಸರ್ಕಾರಿ ವಕೀಲರು, ಆತ ಪತ್ನಿ ಮತ್ತವರ ಮಕ್ಕಳೊಂದಿಗೆ ಕಳೆದ ಒಂದು ವರ್ಷ 8 ತಿಂಗಳಿಂದ ಬೆಂಗಳೂರಿನ ಕೋರಮಂಗಲದಲ್ಲಿ ವಾಸವಾಗಿದ್ದಾರೆ. ವಿವಾಹ ಪೂರ್ವದಲ್ಲೇ ಪತ್ನಿ ವಿದ್ಯಾಗೆ ಇಬ್ಬರು ಪತಿಯರಿದ್ದರು. ಆ ಇಬ್ಬರು ಪತಿಯಿಂದ ತಲಾ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+