‘ಎಲ್ಲಿದ್ಯಪ್ಪಾ ಹರಕುಬಾಯಿ ಯತ್ನಾಳ್?’ ‘ಹಿಂದೂ ಹುಲಿ’ಗೆ ಶುರುವಾಯ್ತು ಕಿರಿಕ್‌!

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಈಗ ಕರ್ನಾಟಕದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ 'ಉಗ್ರ' ಹೇಳಿಕೆ ನೀಡಿದ ನಂತರ ಅಸಮಾಧಾನ ಸ್ಫೋಟಗೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಇದೇ ವಿಚಾರ ದೊಡ್ಡ ಸದ್ದು ಮಾಡುವಾಗ, ಕರ್ನಾಟಕ ಕಾಂಗ್ರೆಸ್ ಇದೀಗ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

ಅಷ್ಟಕ್ಕೂ ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ & ಕರ್ನಾಟಕ ಕಾಂಗ್ರೆಸ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿ, ಸಂಚಲನವನ್ನೇ ಸೃಷ್ಟಿಸಿದ್ದರು. 'ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗೂ ಮಧ್ಯ ಪ್ರಾಚ್ಯ ದೇಶ ಪ್ರವಾಸದ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರ ಭೇಟಿ ಆಗಿದ್ದರು.' ಎಂದು ಯತ್ನಾಳ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಇದೀಗ ಕಾಂಗ್ರೆಸ್ ಉತ್ತರ ನೀಡುತ್ತಿದೆ.

Explore Why Karnataka Congress Questioned Basanagouda Patil Yatnal

'ಎಲ್ಲಿದ್ಯಪ್ಪಾ ಹರಕುಬಾಯಿ ಯತ್ನಾಳ್?'

ಹೌದು ಯತ್ನಾಳ್ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಶಾಸಕನನ್ನು ಕೆಣಕಿದೆ. ಈ ಮೊದಲು ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಒಳಗಡೆ ಇರುವ ವಿರೋಧ ಪಕ್ಷದ ನಾಯಕ ಎಂದು ಕಾಂಗ್ರೆಸ್ ಕಾಲೆಳೆಯುತ್ತಿತ್ತು. ಈಗ ಇನ್ನೂಂದು ಹೆಜ್ಜೆ ಮುಂದೆ ಹೋಗಿ, 'ಎಲ್ಲಿದ್ಯಪ್ಪಾ ಹರಕುಬಾಯಿ ಯತ್ನಾಳ್?' ಅಂತ ಟ್ವೀಟ್ ಮಾಡಿದೆ ಅದು ಪ್ರಧಾನಿ ಮೋದಿ ಅವರ ಫೋಟೋ ಒಂದನ್ನ ಹಾಕಿ. ಹಾಗಾದರೆ ಕಾಂಗ್ರೆಸ್, ಯತ್ನಾಳ್ ವಿಚಾರಕ್ಕೆ ಪ್ರಧಾನಿ ಮೋದಿ ಅವರ ಫೋಟೋ ಹಾಕಿದ್ದು ಯಾಕೆ? ಕರ್ನಾಟಕದ ಬಿಜೆಪಿ ನಾಯಕರ ವಿರುದ್ಧದ ಕಿತ್ತಾಟದಲ್ಲಿ ಕೇಂದ್ರ ಬಿಜೆಪಿ ನಾಯಕರ ಹೆಸರು ಬಂದಿದ್ದು ಏಕೆ? ಮುಂದೆ ಓದಿ.

'ಬಿಜೆಪಿಯಲ್ಲಿನ ಕಚ್ಚಾಟದಿಂದಾಗಿ ಸಾಮ್ರಾಟರು..'

ಹಾಗೇ ಮತ್ತೊಂದು ಟ್ವೀಟ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದು, 'ಬಿಜೆಪಿಯಲ್ಲಿನ ಕಚ್ಚಾಟದಿಂದಾಗಿ ಸಾಮ್ರಾಟರು "ಶೋಕ" ರಾಗ ಹಾಡುತ್ತಿದ್ದಾರೆ. ಅಶೋಕರಲ್ಲಿ ಆ ಕಳೆದು "ಶೋಕ" ಮಾತ್ರ ಉಳಿದುಕೊಂಡಿದೆ! ಸದನದಲ್ಲಿ ಏನು ಚರ್ಚಿಸಬೇಕು, ಏನು ಮಾಡಬೇಕು ಎನ್ನುವುದು ವಿರೋಧ ಪಕ್ಷದ ನಾಯಕನ ತೀರ್ಮಾನವೋ, ಶಾಸಕನೊಬ್ಬನ ತೀರ್ಮಾನವೋ? @BJP4Karnataka ಪಕ್ಷದ ವಿರೋಧ ಪಕ್ಷದ ನಾಯಕ ಅಶೋಕ್ ಅವರೊ, @BasanagoudaBJP ಅವರೊ ಎಂಬ ಗೊಂದಲ ಸ್ವತಃ ಬಿಜೆಪಿಗರಿಗೆ ಇದ್ದಂತಿದೆ. ಶಾಸಕಾಂಗ ಪಕ್ಷದ ನಾಯಕನ ನಿರ್ಧಾರಕ್ಕೆ ಅವರ ಶಾಸಕರೇ ಕಿಮ್ಮತ್ತು ಕೊಡದಿರುವುದು #BucketJanathaParty ಅನುಭವಿಸುತ್ತಿರುವ ದುರಂತ ಸ್ಥಿತಿ. ಬಕೆಟ್ ಹಿಡಿದು ವಿಪಕ್ಷ ನಾಯಕರಾಗಿದ್ದಕ್ಕೆ ನಿಮಗೆ ಈ ದುಃಸ್ಥಿತಿಯೇ @RAshokaBJP?' ಎಂದು ಈಗ ಪ್ರಶ್ನೆ ಮಾಡಿದೆ.

Explore Why Karnataka Congress Questioned Basanagouda Patil Yatnal

'ಬಿಜೆಪಿಯಲ್ಲಿ ಕೆಂಡದಂತಹ ಕಚ್ಚಾಟವಿದೆ'

ಮತ್ತೊಂದು ಟ್ವೀಟ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ಆರೋಪ ಮಾಡಿರುವಂತೆ, '"ಯತ್ನಾಳ್ ಹೇಳಿದ್ದಕ್ಕೆ ಸಭಾತ್ಯಾಗ ಮಾಡಿದೆವು" ಎನ್ನುವ ಮೂಲಕ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ @BasanagoudaBJP ಅವರೇ ಎಂದು @RAshokaBJP ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಬಿಜೆಪಿಯಲ್ಲಿ ಕೆಂಡದಂತಹ ಕಚ್ಚಾಟವಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷ @BYVijayendra ಅವರ ಮಾತಿಗೆ ಮೂರು ಪೈಸೆ ಕಿಮ್ಮತ್ತಿಲ್ಲ ಎನ್ನುವುದು ಕೂಡ ಬಿಜೆಪಿಯ "ಸದನ ಕದನ"ದಿಂದ ಬಯಲಾಗಿದೆ. Dear @BJP4Karnataka, ನಿಮ್ಮದು "ಮನೆಯೊಂದು ಮೂರು ಬಾಗಿಲಲ್ಲ, ಮುನ್ನೂರು ಬಾಗಿಲು" ಅಲ್ಲವೇ! #BucketJanathaParty' ಎಂದು ಕಾಲೆಳೆದಿದೆ.

ಒಟ್ನಲ್ಲಿ ಪಂಚರಾಜ್ಯ ಚುನಾವಣೆ ಮುಗಿದ ನಂತರ ಕರ್ನಾಟಕದಲ್ಲಿ ಬಿಜೆಪಿ & ಕಾಂಗ್ರೆಸ್‌ನ ನಡುವೆ ಕಿಚ್ಚು ಹೊತ್ತಿದೆ. ಇದು ಎಲ್ಲಿಗೆ ಬಂದು ನಿಲ್ಲುತ್ತೆ ಅಂತಾ ಕಾದು ನೋಡಬೇಕಿದೆ. ಈಗ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಯತ್ನಾಳ್ ಯಾವ ರೀತಿ ಉತ್ತರ ನೀಡ್ತಾರೆ? ಅಂತ ಸೋಷಿಯಲ್ ಮೀಡಿಯಾ ಬಳಕೆದಾರರು ಕಾಯ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+