‘45 ರೂಪಾಯಿಯ ಒಂದು ಮಾಸ್ಕಿಗೆ 480 ರೂಪಾಯಿ ಬಿಲ್! ಒಂದು ದಿನಕ್ಕೆ ಒಂದು ಬೆಡ್ ಗೆ 20 ಸಾವಿರ ಬಾಡಿಗೆ!’

ಕರ್ನಾಟಕ ಬಿಜೆಪಿಗೆ ಹೊರಗಿನ ಶತ್ರುಗಳಿಗಿಂತ, ಒಳಗಿನ ಶತ್ರುಗಳನ್ನ ನಿಭಾಯಿಸುವುದೇ ಇದೀಗ ದೊಡ್ಡ ಸವಾಲಾಗಿದೆ. ಬಿ.ಎಸ್. ಯಡಿಯೂರಪ್ಪ & ಅವರ ಪುತ್ರ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟಿಲ್ ಯತ್ನಾಳ್ ಮನಸ್ಸಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಆದರೆ ಈ ಆರೋಪವನ್ನೇ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದ್ದು ಹೊಸ ಹೊಸ ಅಸ್ತ್ರಗಳನ್ನ ಪ್ರಯೋಗ ಮಾಡುತ್ತಿದೆ. ಕೊರೊನಾ ಕಾಲದ ಹಗರಣ ಆರೋಪದ ಕುರಿತು ಕಾಂಗ್ರೆಸ್ ಹೇಳಿದ್ದೇನು?

'ಕೊರೊನಾ' ಕಾಲದಲ್ಲಿ ಕರ್ನಾಟಕ ಅದರಲ್ಲೂ ಕನ್ನಡಿಗರು ನಲುಗಿ ಹೋಗಿದ್ದರು. ಹೀಗೆ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಕೊರೊನಾ ಅಬ್ಬರಿಸಿತ್ತು. ಪರಿಸ್ಥಿತಿ ಹೀಗಿದ್ದಾಗ, ಅಂದಿನ ಬಿಜೆಪಿ ಸರ್ಕಾರದಲ್ಲಿ ಇದ್ದ ನಾಯಕರು ಭ್ರಷ್ಟಾಚಾರ ಎಸಗಿದ್ದರು ಎಂಬ ಗಂಭೀರ ಆರೋಪವನ್ನ ಯತ್ನಾಳ್ ಮಾಡಿದ್ದರು. ಆದರೆ ಇದೇ ಆರೋಪ ಈಗ ಬಿಜೆಪಿ ನಾಯಕರಿಗೆ ಗಂಟಲ ಒಳಗೆ ಸಿಲುಕಿದ ಕೆಂಡವಾಗಿದೆ. ಹಾಗಾದ್ರೆ ಈ ಬಗ್ಗೆ ಕಾಂಗ್ರೆಸ್ ಈಗ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Explore What The Congress Said About Basanagouda Patil Yatnal Allegations

'45 ರೂಪಾಯಿಯ ಒಂದು ಮಾಸ್ಕಿಗೆ 480..'

ಹೌದು, ಯತ್ನಾಳ್ ಮಾಡಿರುವ ಆರೋಪವನ್ನೇ ಆಧಾರವಾಗಿ ಇಟ್ಟುಕೊಂಡು ಕರ್ನಾಟಕದ ಕಾಂಗ್ರೆಸ್ ಸಾಲು ಸಾಲು ಆರೋಪ ಮಾಡುತ್ತಿದೆ. ಈಗ ಬಿಜೆಪಿ ನಾಯಕರ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿ, '◆45 ರೂಪಾಯಿಯ ಒಂದು ಮಾಸ್ಕಿಗೆ 480 ರೂಪಾಯಿ ಬಿಲ್! ◆ಒಂದು ದಿನಕ್ಕೆ ಒಂದು ಬೆಡ್ ಗೆ 20 ಸಾವಿರ ಬಾಡಿಗೆ! ◆ದಿನಕ್ಕೆ 20 ಸಾವಿರ ಬಾಡಿಗೆಯ 10 ಸಾವಿರ ಹಾಸಿಗೆಗಳು! ◆ಆ 10 ಸಾವಿರ ಬಾಡಿಗೆ ಹಾಸಿಗೆಗಳ ಕ್ವರಂಟೈನ್ ಕೇಂದ್ರ ಬಳಕೆಯೇ ಆಗಿಲ್ಲ! ಕ್ವರಂಟೈನ್ ಸೆಂಟರ್ ಹೆಸರಲ್ಲಿ, ಮಾಸ್ಕುಗಳಲ್ಲಿ ಲೂಟಿ ಹೊಡೆದ ಹಣಕ್ಕೆ ಎಷ್ಟು ಸೊನ್ನೆ @BJP4Karnataka, @BYVijayendra?' ಎಂದು ಪ್ರಶ್ನೆ ಕೇಳುತ್ತಲೇ ಹೊಸ ಹೊಸ ಆರೋಪ ಹೊರಿಸಿದೆ ಕರ್ನಾಟಕ ಕಾಂಗ್ರೆಸ್.

ಐಟಿ, ಇಡಿ, ಸಿಬಿಐ ವಿಚಾರ ಪ್ರಸ್ತಾಪ!

ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ "ನಾ ಖವುಂಗಾ ನಾ ಖಾನೆದುಂಗ" ಎಂದು ಭಾಷಣ ಬಿಗಿಯುವ @narendramodi ಅವರು "ಕೈ ಕಟ್ ಬಾಯ್ ಮುಚ್" ಎನ್ನುವಂತೆ ಸುಮ್ಮನಿರುವುದೇಕೆ? ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು? ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ನಿಷ್ಠುರತೆ ಹೊಂದಿದ್ದರೆ ಮೋದಿಯವರು ತಮ್ಮ ಪಕ್ಷದವರ ಮೇಲೆ ತನಿಖೆ ನಡೆಸಲಿ.' ಎಂದು ಆಗ್ರಹಿಸಿದೆ ಕಾಂಗ್ರೆಸ್.

Explore What The Congress Said About Basanagouda Patil Yatnal Allegations

ಹೀಗೆ ಯತ್ನಾಳ್ ಮಾಡಿರುವ ಒಂದು ಆರೋಪ, ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಹೀಗಾಗಿ ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತೋ ಆನ್ನೋ ಚಿಂತೆ ಕೂಡ ಬಿಜೆಪಿ ನಾಯಕರಿಗೆ ಶುರುವಾಗಿದೆ. ಇನ್ನು ಮತ್ತೊಂದು ಕಡೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವರ್ತನೆ ಕುರಿತು ರಾಜ್ಯದ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ಸಾಕಷ್ಟು ನಾಯಕರು ಈ ಕುರಿತಾಗಿ ಪ್ರತಿಕ್ರಿಯೆ ನೀಡಿತ್ತಿದ್ದು ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಮೂಲಕ ಯತ್ನಾಳ್ ವಿರುದ್ಧ ಕ್ರಮ ಗ್ಯಾರಂಟಿನಾ..? ಎಂಬ ಪ್ರಶ್ನೆ ರಾಜ್ಯ ರಾಜಕೀಯ ಅಖಾಡದಲ್ಲಿ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+