ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟು ಸ್ಥಾನ? ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಗೆಲುವು? ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 03: ಕಳೆದ ವಿಧಾನಸಭಾ ಚುಣಾವಣೆ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನ ಎದುರಿಸಿದ್ದು, ದೇಶದಲ್ಲಿ ಏಳು ಹಂತಗಳ ಚುಣಾವಣೆ ಮುಗಿದ ಬಳಿಕ ಚುನಾವಣಾಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ.
ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫೈಕಿ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಬಹುತೇಕ ಎಲ್ಲಾ ವಾಹಿನಿಗಳು ವರದಿ ಮಾಡಿವೆ. ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್ (COPS Exit Poll) ತನ್ನ ಮತಗಟ್ಟೆ ಸಮೀಕ್ಷಾ ವರದಿಯನ್ನು ಬಹಿರಂಗ ಪಡಿಸಿದ್ದು, ಈ ಸಮೀಕ್ಷೆ ಪ್ರಕಾರ ಆಡಳಿತರೂಢ ಕಾಂಗ್ರೆಸ್ 11 ಕ್ಷೇತ್ರ, ಬಿಜೆಪಿ 15 ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.

ಎಕ್ಸಿಟ್ ಪೋಲ್ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ನನಗೆ ಈ ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ, ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ, ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆ ಸುಳ್ಳಾಯಿತು. ಆ ಚುನಾವಣೆಯಲ್ಲಿ ನನ್ನ ಭವಿಷ್ಯವೇ ನಿಜವಾಗಿತ್ತು ಎಂದು ಹೇಳಿದರು.
ಸಮೀಕ್ಷೆ ನಡೆಸುವ ಸಂಸ್ಥೆಗಳು ಐದು ಸಾವಿರದಷ್ಟು ಜನರ ಅಭಿಪ್ರಾಯ ಮಾತ್ರ ಸಂಗ್ರಹ ಮಾಡಿರುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ದಾಟಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಇನ್ನೂ ಹಲವು ಸಂಸ್ಥೆಗಳು ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ನಿರಾಯಾಸವಾಗಿ ಗದ್ದುಗೆ ಉಳಿಸಿಕೊಳ್ಳಲಿದೆ. ಕೆಲವೊಂದು ಸಮೀಕ್ಷೆಗಳು, ಬಿಜೆಪಿ ನಾಲ್ಕು ನೂರರ ಗಡಿಯನ್ನೂ ದಾಟಬಹುದು ಎಂದು ಹೇಳಿದೆ. ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನಗಳು ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಕಾಪ್ಸ್ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲಲಿದೆ
ಬಿಜೆಪಿ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳು ಇಲ್ಲಿವೆ
1. ಶಿವಮೊಗ್ಗ
2. ದಕ್ಷಿಣ ಕನ್ನಡ
3. ಬಾಗಲಕೋಟೆ
4. ವಿಜಯಪುರ
5. ಹಾವೇರಿ - ಗದಗ
6. ಹುಬ್ಬಳ್ಳಿ - ಧಾರವಾಡ
7. ಉತ್ತರ ಕನ್ನಡ
8. ಉಡುಪಿ - ಚಿಕ್ಕಮಗಳೂರು
9. ತುಮಕೂರು
10. ಮೈಸೂರು - ಕೊಡಗು
11. ಬೆಂಗಳೂರು ಗ್ರಾಮೀಣ
12. ಬೆಂಗಳೂರು ಉತ್ತರ
13. ಬೆಂಗಳೂರು ಕೇಂದ್ರ
14. ಬೆಂಗಳೂರು ದಕ್ಷಿಣ
15. ಚಿಕ್ಕಬಳ್ಳಾಪುರ
ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳು ಇಲ್ಲಿವೆ
1. ಚಿಕ್ಕೋಡಿ
2. ಬೆಳಗಾವಿ
3. ಕಲಬುರಗಿ
4. ರಾಯಚೂರು
5. ಬೀದರ್
6. ಕೊಪ್ಪಳ
7. ಬಳ್ಳಾರಿ
8. ದಾವಣಗೆರೆ
9. ಹಾಸನ
10. ಚಿತ್ರದುರ್ಗ
11. ಚಾಮರಾಜನಗರ
ಜೆಡಿಎಸ್ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳು ಇಲ್ಲಿವೆ
1. ಮಂಡ್ಯ
2. ಕೋಲಾರ












Click it and Unblock the Notifications