'ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ, ಕೋಮುವಾದಿಗಳ ಜತೆ ರಾಜಿ ಇಲ್ಲ': ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟಂಬರ್ 11: ಆರಂಭದಿಂದಲೂ ಕೋಮುವಾದಿಗಳ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದವನು ನಾನು. ಅಧಿಕಾರ ಇರಲಿ, ಇಲ್ಲದಿರಲಿ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಂಡವನಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಕೆ ಹರಿಪ್ರಸಾಧ್ ಸೇರಿದಂತೆ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ. ನಾನು ನಂಬಿರುವ ಸಿದ್ಧಾಂತಕ್ಕೆ ಇಷ್ಟು ಬದ್ಧತೆ ನನ್ನಲ್ಲಿದೆ". ನಾನು ಕೋಮುವಾದಿಗಳ ಜೊತೆಗೆ ರಾಜೀ ಮಾಡಿಕೊಳ್ಳುವುದಿದಲ್ಲ ಎಂದು ಸಿದ್ದರಾಮಯ್ಯ ಅವರು ತಮ ವಿರುದ್ಧ ಟೀಕೆ ಮಾಡಿದ್ದ ಸ್ವಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಬಹುಕಾಲದಿಂದ ಸಿಎಂ ಸಿದ್ದರಾಮಯ್ಯ ಅವರು ದಲಿತ ನಾಯಕ, ಅಲ್ಪಸಂಖ್ಯಾತ, ಹಿಂದುಳಿ ಮತ್ತು ದಲಿತ ನಾಯಕ ಎಂದು ಗುರುತಿಸಿಕೊಂಡವರು. ಆ ಸಮುದಾಯದವರಿಗೆ ತಮ್ಮ ಅಧಿಕಾರಾವಧಿ ಹಾಗೂ ಕಾಂಗ್ರೆಸ್ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ಬಹಿರಂಗ ಸಭೆಯಲ್ಲಿಯೇ ಆಡಳಿತಾರೂಢ ಕಾಂಗ್ರೆಸ್ ಸ್ವಪಕ್ಷದ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರು ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜಕೀಯ ಇತಿಹಾಸ ಕೆದಕಿ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಆರಂಭದಿಂದಲೂ ಕೋಮುವಾದಿಗಳ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದವನು ನಾನು. ಅಧಿಕಾರ ಇರಲಿ, ಇಲ್ಲದಿರಲಿ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಂಡವನಲ್ಲ.
— Siddaramaiah (@siddaramaiah) September 11, 2023
"ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ. ನಾನು ನಂಬಿರುವ ಸಿದ್ಧಾಂತಕ್ಕೆ ಇಷ್ಟು ಬದ್ಧತೆ ನನ್ನಲ್ಲಿದೆ". pic.twitter.com/WPkwWjsvHq
ಕಾಂಗ್ರೆಸ್‌ಗೆ ಮುಜುಗರ
ಪಂಚೆ, ಖಾಕಿ ಚಡ್ಡಿ ಹಾಕಿಕೊಂಡರೆ ಅವರನ್ನು ಸಮಾಜವಾದಿ ಎನ್ನುವುದಿಲ್ಲ. ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಕಾರಿನಲ್ಲಿ ಓಡಾಡಿದರೆ ಸಾಲದು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ತಮ್ಮನ್ನು ಸಂಪುಟದಿಂದ ಹೊರಗಿಟ್ಟಿದ್ದಕ್ಕೆ ಸಿಎಂ ಗೆ ಅವರು ಧನ್ಯವಾದ ತಿಳಿಸಿದ್ದರು. ದಲಿತ ನಾಯಕರ ಅಧಿಕಾರ ಕುರಿತು ಹರಿಪ್ರಸಾದ್ ಅವರು ಮಾತನಾಡಿದರು.
ಈ ಹಿಂದೆ ವರ್ಗಾವಣೆ ವಿಚಾರವಾಗಿ ಭುಗಿಲೆದ್ದಿದ್ದ ಅಸಮಾಧಾನ ಕಿಚ್ಚು ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿತ್ತು. ಇದೀಗ ಸ್ವಪಕ್ಷದ ಹಿರಿಯ ನಾಯಕರೊಬ್ಬರ ಮುಖ್ಯಮಂತ್ರಿಗಳ ವಿರುದ್ಧದ ಹೇಳಿಕೆಗಳು ವಿಪಕ್ಷದ ನಾಯಕರಿಗೆ ಅಸ್ತ್ರವಾಗಿ ಪರಿಣಮಿಸಿದೆ.












Click it and Unblock the Notifications