ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೆ ಕೈ ಪಡೆಯಿಂದ ಭಾರೀ ವಿರೋಧ; ಸಚಿವರ ವಿರುದ್ದ ಈಶ್ವರ್ ಖಂಡ್ರೆ ಗರಂ
ಚುನಾವಣಾ ಹೊತ್ತಲಿ ವಿ ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಎನ್ನುವ ವಿಚಾರಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು,ಮಾರ್ಚ್ 9: ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳು ಬೀರುಸಿನ ಪ್ರಚಾರವನ್ನ ಕೈಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ರಾಜಕೀಯ ಪಕ್ಷಗಳು ಹಲವು ಕಸರತ್ತುಗಳನ್ನ ಮುಂದುವರೆಸಿದೆ.
ಚುನಾವಣೆಗೆ ಕೆಲ ತಿಂಗಳುಗಳು ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ಪಕ್ಷಾಂತರ ಪರ್ವಕ್ಕೆ ಕೆಲ ನಾಯಕರು ರೆಡಿಯಾಗಿದ್ರೆ, ಇತ್ತ ಕೆಲ ಹಿರಿಯ ನಾಯಕರನ್ನ ಸೆಳೆಯಲು ಪಕ್ಷಗಳು ಮುಂದಾಗಿವೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಸಚಿವರಾದ ವಿ ಸೋಮಣ್ಣ ಹಾಗೂ ನಾರಾಯಣ ಗೌಡ ಅವರು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಗುತ್ತಾರೆ ಎನ್ನುವ ಚರ್ಚೆ ಜೋರಾಗಿದ್ದು, ಸೋಮಣ್ಣ ಹಾಗೂ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೆ ಭಾರೀ ವಿರೋಧ ಕೇಳಿ ಬರುತ್ತಿವೆ.

ಬಿಜೆಪಿ ಪಕ್ಷದಿಂದ ಸಚಿವ ವಿ ಸೋಮಣ್ಣ ಸಾಕಷ್ಟು ಅಂತರವನ್ನ ಕಾಯ್ದುಕೊಂಡಿದ್ದು, ಚುನಾವಣಾ ಹೊತ್ತಲಿ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಎನ್ನುವ ವಿಚಾರಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸೋಮಣ್ಣ ಮನೆ ಕಟ್ಟಿಸುತ್ತೇನೆ ಅಂತ ಅಧಿವೇಶನದಲ್ಲಿ ಹೇಳಿದ್ರು. ಮನೆ ಕಟ್ಟಲು ಹೋದ ಜನರಿಗೆ ಸೋಮಣ್ಣ ತೊಂದ್ರೆ,ಅನ್ಯಾಯ ಕಿರುಕುಳ ಕೊಟ್ಟಿದ್ದಾರೆ. ಇಂತವರು ಪಕ್ಷಕ್ಕೆ ಹೇಗೆ ಬರ್ತಾರೆ. ನಮಗೆ ಅವರ ಸೇರ್ಪಡೆ ಸಮಾಧಾನ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕಿಡಿಕಾರಿದ್ದಾರೆ.

ಸಚಿವ ಸೋಮಣ್ಣ ವಿಫಲರಾಗಿದ್ದಾರೆ. ಅವರು ಕಾಂಗ್ರೆಸ್ಸಿಗೆ ಬಂದ್ರೆ ಏನು ಲಾಭ ಇಲ್ಲ, ರಾಜ್ಯ ನಾಯಕರು ಯಾಕೆ ತೀರ್ಮಾನ ಮಾಡಿದ್ರು ಅಂತ ಗೊತ್ತಿಲ್ಲ. ಸೋಮಣ್ಣನಿಂದ ಪಕ್ಷಕ್ಕೆ ಉಪಯೋಗ ಇಲ್ಲ ಎಂದು ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಕುರಿತು ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.
ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಸುಳ್ಳು: ಯಡಿಯೂರಪ್ಪ
ಸಚಿವ ವಿಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಸುಳ್ಳು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಮ್ಮ ಜೊತೆಯಲ್ಲಿ ಎಲ್ಲರೂ ಇದ್ದಾರೆ, ಇರುತ್ತಾರೆ. ಬೆಂಗಳೂರಿಗೆ ಹೋದ ಮೇಲೆ ಎಲ್ಲರನ್ನೂ ಭೇಟಿ ಮಾಡಿ ಮಾತನಾಡುವುದಾಗಿ ಹೇಳಿದ ಅವರು, ಸೋಮಣ್ಣ ಸೇರಿದಂತೆ ಯಾರೊಬ್ಬರೂ ಕೂಡ ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದರು.












Click it and Unblock the Notifications