ಸಿದ್ದರಾಮಯ್ಯಗೆ ಸಿಟಿ ರವಿ ಅಭಿನಂದನೆ: ‘ಸಿದ್ರಾಮುಲ್ಲಾ ಖಾನ್’ ಡೈಲಾಗ್ ಎಲ್ಲಿ?
ಬೆಂಗಳೂರು: ಅದಕ್ಕೆ ಅಲ್ವಾ ಹೇಳೋದು ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಮತ್ತು ಯಾರೂ ಮಿತ್ರರಲ್ಲ ಅಂತಾ. ಇದೀಗ ಸಿಟಿ ರವಿ ಕಥೆಯೂ ಹಾಗೇ ಆಯ್ತಾ? ಅನ್ನೋ ಡೌಟ್ ಕಾಡುತ್ತಿದೆ. ಯಾಕಂದ್ರೆ ಇಷ್ಟು ದಿನ ಸಿದ್ದರಾಮಯ್ಯಗೆ 'ಸಿದ್ರಾಮುಲ್ಲಾ ಖಾನ್'... 'ಸಿದ್ರಾಮುಲ್ಲಾ ಖಾನ್'... ಅಂತಿದ್ದ ಸಿಟಿ ರವಿ ಅವರು ಇದೀಗ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ, ಅದು ಮಾನ್ಯ ಶ್ರೀ ಸಿದ್ದರಾಮಯ್ಯ ಎಂದು!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲ್ಲ, ಕಾಂಗ್ರೆಸ್ ಮುಗಿದು ಹೋದ ಅಧ್ಯಾಯ ಅಂತಿದ್ದ ಬಿಜೆಪಿ ಲೀಡರ್ಸ್ ಒಬ್ಬೊಬ್ಬರಾಗಿ ಹೊಸ ಸರ್ಕಾರಕ್ಕೆ ಶುಭ ಕೋರಿದ್ದಾರೆ. ಅದ್ರಲ್ಲೂ ಧರ್ಮದ ಬೇರು ಹಿಡಿದು ಸಿದ್ದರಾಮಯ್ಯ ಅವರ ವಿರುದ್ಧ ಹಲವು ಆರೋಪ ಮಾಡಿದ್ದ, ಸಿದ್ದರಾಮಯ್ಯ ಅವರನ್ನ ಪದೇ ಪದೆ 'ಸಿದ್ರಾಮುಲ್ಲಾ ಖಾನ್' ಎಂದು ಕರೆಯುತ್ತಿದ್ದ ಸಿಟಿ ರವಿ ಶಾಕ್ ನೀಡಿದ್ದಾರೆ. ಸಿದ್ದರಾಮಯ್ಯರ ಸರ್ಕಾರಕ್ಕೆ ಶುಭಾಶಯ ಕೋರಿರುವ ಸಿ.ಟಿ. ರವಿ, ಸಿದ್ದರಾಮಯ್ಯ ಅವರನ್ನು 'ಮಾನ್ಯ ಶ್ರೀ ಸಿದ್ದರಾಮಯ್ಯ' ಎಂದು ಕರೆದಿದ್ದಾರೆ. ಹಾಗಾದ್ರೆ ಇವರ ಡೈಲಾಗ್‌ಗಳು ಚುನಾವಣೆಗೆ ಸೀಮಿತವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಮಾಜಿ ಶಾಸಕ ಸಿಟಿ ರವಿ ಹೇಳಿದ್ದೇನು?
ಅಷ್ಟಕ್ಕೂ ಇಷ್ಟುದಿನ ಸಿದ್ದರಾಮಯ್ಯ ಬಗ್ಗೆ ವಾಗ್ದಾಳಿ ನಡೆಸಲು ಬಳಸುತ್ತಿದ್ದ ಟ್ವಿಟ್ಟರ್ ಅಕೌಂಟ್‌ನಲ್ಲೇ ವಿಷ್ ಮಾಡಿದ್ದಾರೆ ಸಿಟಿ ರವಿ. 'ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಮಾನ್ಯ ಶ್ರೀ @siddaramaiah ಅವರಿಗೆ ಅಭಿನಂದನೆಗಳು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಹಲವು ಗ್ಯಾರೆಂಟಿಗಳು ಹಾಗೂ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆಗಳನ್ನು ಕಾರ್ಯರೂಪಕ್ಕೆ ತರುವಿರೆಂದು ಕನ್ನಡಿಗರ ಪರವಾಗಿ ಆಶಿಸುತ್ತೇನೆ.' ಎಂದಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ.
'ಸಿದ್ರಾಮುಲ್ಲಾ ಖಾನ್' ಅಂತಿದ್ರು ಸಿಟಿ ರವಿ!
ಹೌದು, ಚುನಾವಣೆಗೆ ಮೊದಲು ಸಿದ್ದರಾಮಯ್ಯ ಕುರಿತು ಸಿಟಿ ರವಿ ಪದೇ ಪದೆ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ 'ಸಿದ್ರಾಮುಲ್ಲಾ ಖಾನ್'.. 'ಸಿದ್ರಾಮುಲ್ಲಾ ಖಾನ್'.. ಎಂದು ಕರೆಯುತ್ತಿದ್ದರು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಬಹಿರಂಗ ಸಮಾವೇಶಗಳಲ್ಲಿ ಪ್ರಸ್ತಾಪ ಕೂಡ ಮಾಡಿದ್ರು. ಆದ್ರೆ ಈಗ ದಿಢೀರ್ ಅಂತಾ ಸಿಎಂ ಸಿದ್ದರಾಮಯ್ಯ ಅವರನ್ನ 'ಮಾನ್ಯ ಶ್ರೀ ಸಿದ್ದರಾಮಯ್ಯ' ಎಂದು ಕರೆದಿದ್ದಾರೆ ಸಿ.ಟಿ.ರವಿ. ಹಾಗೇ ಈ ಬಗ್ಗೆ ಪೋಸ್ಟ್ ಹಾಕಿರುವ ಅವರಿಗೆ ಪರ, ವಿರೋಧದ ಕಮೆಂಟ್ಸ್ ಬರುತ್ತಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ!
ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತ್ರವಲ್ಲ, ಚುನಾವಣೆಗೆ ಮೊದಲು ಪ್ರಚಾರಕ್ಕೆ ಅಂತಾ ಕನಕಪುರ ಕ್ಷೇತ್ರಕ್ಕೆ ಬಂದಾಗ ಅಮೇಥಿಯನ್ನೇ ಬಿಟ್ಟಿಲ್ಲ ಇನ್ನು ಕನಕಪುರ ಬಿಡ್ತೀವಾ? ಅಂತಾ ಡೈಲಾಗ್ ಬೇರೆ ಹೊಡೆದಿದ್ದರು ಸಿಟಿ ರವಿ. ಆದ್ರೆ ಅದು ಬರೀ ಡೈಲಾಗ್ ಆಗಿಯೇ ಉಳಿದು ಹೋಯ್ತು. ತಮ್ಮ ಕ್ಷೇತ್ರದಲ್ಲೇ ಸಿಟಿ ರವಿ ಈ ಬಾರಿ ಗೆಲ್ಲಲು ಆಗಲೇ ಇಲ್ಲ, ಸತತವಾಗಿ ಗೆದ್ದಿದ್ದ ಕ್ಷೇತ್ರ ಸಿಟಿ ರವಿ ಕೈಬಿಟ್ಟು ಹೋಗಿದೆ. ಒಂದು ಕಾಲದ ಸಿಟಿ ರವಿ ಆಪ್ತ ವ್ಯಕ್ತಿಯೇ ಸಿಟಿ ರವಿಗೆ ಈ ಬಾರಿ ಸೋಲನ್ನ ಕರುಣಿಸಿದ್ದರು. ಮತ್ತೊಂದ್ಕಡೆ ಕನಕಪುರಲದಲ್ಲಿ ಡಿ.ಕೆ.ಶಿವಕುಮಾರ್ ಭರ್ಜರಿ ಗೆಲುವು ಸಾಧಿಸಿ ಡಿಸಿಎಂ ಆಗಿದ್ದಾರೆ.

ಮುಂದಿನ ಸಿಎಂ ಆಗುವ ಕನಸು!
ಹೌದು ಸಿಟಿ ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮದೇ ಹವಾ ಇಟ್ಟಿದ್ದರು. ಸಾಲು ಸಾಲು ಗೆಲುವಿನ ಮೂಲಕ ಈ ಬಾರಿ ಕೂಡ ಮತ್ತೆ ಆಯ್ಕೆಯಾಗುವ ವಿಶ್ವಾಸದಲ್ಲಿ ಸಿಟಿ ರವಿ ಇದ್ದರು. ಈ ಚುನಾವಣೆಯೂ ಸೇರಿ ಒಟ್ಟು 6 ಬಾರಿ ಸ್ಪರ್ಧೆ ಮಾಡಿದ್ದರು ಸಿಟಿ ರವಿ. ಸತತ 4 ಗೆಲುವು ರವಿ ಅವರಿಗೆ ಭಾರಿ ಶಕ್ತಿ ತುಂಬಿದ್ದು, ಈಗ ಕೂಡ ಅದೇ ರೀತಿ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿ ಇದ್ದರು. ಆದರೆ ಸಿ.ಟಿ.ರವಿ ಆಪ್ತನೇ 5ನೇ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದ್ದು, ಕರ್ನಾಟಕದ ಮುಂದಿನ ಸಿಎಂ ಆಗುವ ಕನಸು ಕಂಡಿದ್ದ ಸಿಟಿ ರವಿಗೆ ಹಿನ್ನಡೆ ಮಾಡಿದೆ.
2018ರಲ್ಲಿ ಗೆದ್ದು 2023ರಲ್ಲಿ ಸೋತರು
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿಗೆ ಸಾಕಷ್ಟು ಪ್ಲಸ್ ಪಾಯಿಂಟ್ ಇತ್ತು. 2018ರ ಚುನಾವಣೆ ರವಿ ಅವರಿಗೆ ಕಷ್ಟವೂ ಆಗಿರಲಿಲ್ಲ. ಜತೆಗೆ ಪಕ್ಷದ ಒಗ್ಗಟ್ಟು, ಜನಾಭಿಪ್ರಾಯ ಕೂಡ ಅವರ ಪರ ಇದ್ದಿದ್ದು ಒಳ್ಳೆಯದೇ ಆಗಿತ್ತು. ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಅಷ್ಟು ಸವಾಲು ನೀಡದೆ ಸಿಟಿ ರವಿ ಗೆಲುವಿಗೆ ವೇದಿಕೆ ಒದಗಿಸಿದರು. ಆದರೆ ಈ ಬಾರಿ ಎಲ್ಲವೂ ಉಲ್ಟಾ ಆಗಿ, ಸಿಟಿ ರವಿ ಭಾರಿ ದೊಡ್ಡ ಸಂಕಷ್ಟದಲ್ಲಿ ಸಿಲುಕಿಬಿಟ್ಟರು. ಈಗ ಹೊಸ ಸರ್ಕಾರಕ್ಕೆ ಶುಭಾಶಯ ಕೋರಿ ಸುದ್ದಿಯಲ್ಲಿದ್ದಾರೆ ಸಿಟಿ ರವಿ.
ಸಿಟಿ ರವಿ ವಿರುದ್ಧ ನಿಂತ ಜೆಡಿಎಸ್
2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲಎಂಬತಾಗಿತ್ತು. ತಮ್ಮದೇ ಪಕ್ಷದ ಅಭ್ಯರ್ಥಿ ಇದ್ದರೂ ಜೆಡಿಎಸ್ ಮುಖಂಡ ಹಾಗೂ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಕಾಂಗ್ರೆಸ್ ಪರ ಮತ ನೀಡಲು ಕರೆಕೊಟ್ಟಿದ್ದರು. ಇದು ಸಿ.ಟಿ.ರವಿಗೆ ದೊಡ್ಡ ಹೊಡೆತ ನೀಡುವ ಜೊತೆಗೆ, ನೂರಾರು ಸವಾಲು ಎದುರಿಸುವಂತೆ ಮಾಡಿತ್ತು. ಜಿಲ್ಲೆಯ ವಿವಿಧ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿ ಸಿ.ಟಿ.ರವಿ ಸೋಲಿಸಲು ತಂತ್ರ ರೂಪಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಕೂಡ ಸಿಟಿ ರವಿಯ ಸೋಲಿಗೆ ದೊಡ್ಡ ಕೊಡುಗೆ ನೀಡಿತು ಎಂಬ ಮಾತು ಕೇಳಿಬರುತ್ತಿದೆ.

ಎಚ್‌ಡಿಡಿ, ಸಿದ್ದರಾಮಯ್ಯ, ಬಿಎಸ್‌ವೈ ವಿರುದ್ಧ ಮಾತು!
ಅಂತಿಮವಾಗಿ ಬಿಜೆಪಿಯಲ್ಲಿ ಉನ್ನತ ಹುದ್ದೆ ಪಡೆದ ತಕ್ಷಣ ಬಿಜೆಪಿ ಕಟ್ಟಿ ಬೆಳೆಸಿದ್ದ, ಕಮಲ ಪಡೆ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಾ ಬಂದರು. ಪರಿಣಾಮ ಹಲವು ಸಮುದಾಯಗಳು ಸಿಟಿ ರವಿ ವಿರುದ್ಧ ತಿರುಗಿಬಿದ್ದವು ಎಂಬ ಆರೋಪವಿದೆ. ಆದರೆ ಈಗ ನೋಡಿದ್ರೆ ಸೀನ್ ಉಲ್ಟಾ ಆಯ್ತಾ? ಅಂತ ಕನ್ನಡ ನಾಡಿನ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ನಲ್ಲಿ ಚುನಾವಣೆಗೆ ಒಂದು.. ಚುನಾವಣೆ ಫಲಿತಾಂಶ ಬಂದ ನಂತರ ಮತ್ತೊಂದು ಅಂತಾ ರಾಜಕಾರಣಿಗಳ ಹೇಳಿಕೆಗಳ ಬಗ್ಗೆ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡುವ ಹೇಳಿಕೆ ಈಗ ಯಾಕೆ ಬರಲ್ಲ? ಎಂಬುದೇ ಕನ್ನಡ ನಾಡಿನ ಮತದಾರರ ಪ್ರಶ್ನೆ. ಈ ಪ್ರಶ್ನೆಗೆಲ್ಲಾ ಉತ್ತರ ಪಡೆಯಲು ಬಹುಶಃ ಇನ್ನೊಂದು ಚುನಾವಣೆ ತನಕ ನಾವು ಕಾಯಬೇಕು ಅಂತಾ ಕಾಣುತ್ತೆ. ಯಾಕಂದ್ರೆ ಮತ್ತೆ ಚುನಾವಣೆ ಬಂದ ಸಂದರ್ಭದಲ್ಲೇ ತಾನೆ ದಾಳಿಗಳು, ವಾಗ್ದಾಳಿಗಳು, ತಿರುಗೇಟುಗಳು ಕೇಳಿಬರುವುದು!
-
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ












Click it and Unblock the Notifications