Get Updates
Get notified of breaking news, exclusive insights, and must-see stories!

ED Raid: ಕಾಂಗ್ರೆಸ್ ಪ್ರಮುಖ ಹಾಲಿ ಶಾಸಕರ ಕಾರು ಅಕ್ರಮಕ್ಕೆ ಬಳಕೆ ಪತ್ತೆ: ಇಡಿ

ಬೆಂಗಳೂರು, ಮಾರ್ಚ್ 21: ಬೆಂಗಳೂರಿನ ಪ್ರಮುಖ ಕಾಂಗ್ರೆಸ್ ಶಾಸಕರೊಬ್ಬರಿಗೆ ನೀಡಲಾಗಿ ಅಧಿಕೃತ ಸ್ಟಿಕ್ಕರ್ ಇದ್ದ ಕಾರನ್ನು ವ್ಯಕ್ತಿಯೊಬ್ಬರು ಅಪರಾಧ ಚಟುವಟಿಕೆಗೆ ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

ಕಾಂಗ್ರೆಸ್ ಶಾಂತಿನಗರ ಕ್ಷೇತ್ರದ ಶಾಸಕ ಎನ್‌ಎ ಹ್ಯಾರಿಸ್ ಮತ್ತು ಅವರ ಪುತ್ರ ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಹೆಸರು ಇಡಿ ತನಿಖಾ ಪ್ರಕರಣದಲ್ಲಿ ತಳುಕುಹಾಕಿಕೊಂಡಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಪ್ರಕಟಣೆಯು ತಿಳಿಸಿದೆ.

ED Raid Related to Illegal Money Transfer Use of Congress MLA s NA Haris car in The Case ED said

ಬೆಂಗಳೂರಿನ ಪ್ರಮುಖ ನಾಯಕರು ಆದ ಶಾಸಕ ಎನ್‌ಎ ಹ್ಯಾರೀಸ್ ಅವರ ಅಧಿಕೃತ ಪ್ರೋಟೋಕಾಲ್‌ ಸ್ಟಿಕ್ಕರ್ ಇರುವ ಕಾರನ್ನು ಬಳಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಾಸಕರ ಸ್ಟಿಕ್ಕರ್ ಇರುವ ಕಾರನ್ನು ಇತ್ತೀಚೆಗೆ ಇಡಿ ದಾಳಿಗೆ ಒಳಾಗಿ ಕೊಚ್ಚಿ ಮೂಲದ ಆರೋಪಿ ಬಳಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಮಾಹಿತಿ ನೀಡಿದೆ.

ಅಸೆಂಬ್ಲಿ ಅಧಿಕೃತ ಸ್ಟಿಕ್ಕರ್ ಕಾರು ಬಳಕೆ

ಕರ್ನಾಟಕ ವಿಧಾನಸಭೆಯ ಪ್ರೋಟೋಕಾಲ್ ವಿಭಾಗವು ಕಾಂಗ್ರೆಸ್ ಶಾಸಕರಿಗೆ ಅಧಿಕೃತ ಸ್ಟಿಕ್ಕರ್ ಅನ್ನು ನೀಡಿತ್ತು. ಜಾರಿ ನಿರ್ದೇಶನಾಲಯ ಹೇಳುವ ಪ್ರಕಾರ, ಶಾಸಕ ಹ್ಯಾರಿಸ್ ಅವರ ಕಾರನ್ನು ಅವರ ಮಗ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್ ನಲಪಾಡ್ ಖರೀದಿಸಿದ್ದಾರೆ. ಆದರೆ ಶಾಸಕರ ನಿಕಟ ಸಂಬಂಧಿ ಮತ್ತು ಅವರ ರಾಜಕೀಯ ಸಹಾಯಕ ನಫೀಹ್ ಮುಹಮ್ಮದ್ ನಾಸಿರ್ ಹೆಸರಿನಲ್ಲಿ ಕಾರು ನೋಂದಣಿ ಆಗಿದೆ ಎಂದು ತಿಳಿದು ಬಂದಿದೆ.

ED Raid Related to Illegal Money Transfer Use of Congress MLA s NA Haris car in The Case ED said

3 ರಾಜ್ಯದ 9 ಕಡೆ ಇಡಿ ದಾಳಿ

ಇದೇ ತಿಂಗಳ ಮಾರ್ಚ್ 14, 15 ಮತ್ತು 16 ರಂದು ಜಾರಿ ನಿರ್ದೇಶನಾಲಯ (ಇಡಿ) ಕೊಚ್ಚಿ ವಲಯದ ಅಧಿಕಾರಿಗಳು ಕೊಚ್ಚಿ ನಿವಾಸಿ ಮುಹಮ್ಮದ್ ಹಫೀಜ್ ಮತ್ತು ಇತರರಿಗೆ ಸೇರಿದ ಕರ್ನಾಟಕ, ಕೇರಳ ಮತ್ತು ಗೋವಾದ ಒಂಬತ್ತು ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ಅಡಿಯಲ್ಲಿ ದಾಳಿ ನಡೆಸಿದ್ದರು.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ತಡಕಾಡಿದ್ದರು. ಕೆಲವು ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ವಿವಿಧೆಡೆ ಆರೋಪಿ ವಿರುದ್ಧ ಪ್ರಕರಣ ದಾಖಲು

ಅಕ್ರಮ ಹಣ ವರ್ಗಾವಣೆ, ಹಣ ದುರಪಯೋಗ, ನಕಲಿ ಮತ್ತು ದಾಖಲೆಗಳ ಸೃಷ್ಟಿಸಿ ವಂಚನೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾದಲ್ಲಿ ಪೊಲೀಸರು ಕೊಚ್ಚಿ ಮೂಲದ ಆರೋಪಿ ವಿರುದ್ಧ ಎಫ್‌ಐಆರ್ ಗಳನ್ನು ದಾಖಲಿಸಿದ್ದಾರೆ.

ಈ ಆರೋಪಿ ಹಫೀಜ್ ಮತ್ತು ಅವನ ಸಹಚರರ ಹೆಸರುಗಳನ್ನು ಈ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಹಫೀಜ್ ತನ್ನ ಅತ್ತೆಯಂದಿರಿಂದ 108.73 ಕೋಟಿ ರೂಪಾಯಿ ಮೌಲ್ಯದ ವರದಕ್ಷಿಣೆ ಪಡೆದಿದ್ದಾನೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿನ್ನಾಭರಣ, ನಗದು, ದಾಖಲೆ ಇಡಿ ವಶ

ಇಡಿ ದಾಳಿಯಲ್ಲಿ ಅಧಿಕಾರಿಗಳು ಒಟ್ಟು 1,672.8 ಗ್ರಾಂ ಚಿನ್ನಾಭರಣಗಳು, 12.5 ಲಕ್ಷ ರೂಪಾಯಿ ನಗದು, ಏಳು ಮೊಬೈಲ್ ಫೋನ್‌ಗಳು ಮತ್ತು ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದೆ.

ಇದಲ್ಲದೆ, ಆರೋಪಿಗಳಿಗೆ ಸೇರಿದ 4.4 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್/ನಿಶ್ಚಿತ ಠೇವಣಿಗಳನ್ನು ಸ್ಥಗಿತಗೊಳಿಸಲು ಇಡಿ ಆದೇಶ ಹೊರಡಿಸಿದೆ ಎಂದು ವರದಿ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+