ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ತಿರುಗೇಟು
ಬೆಂಗಳೂರು, ಸೆಪ್ಟೆಂಬರ್ 5: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿ ಎಂದು ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ತಿಳಿಸಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಪೂರ್ಣ ತಯಾರಿ ನಡೆಸಿದೆ. ಕಳೆದ 2 ತಿಂಗಳಿಂದ 4 ಬಾರಿ ಬರ ಪರಸ್ಥಿತಿ ಕುರಿತು ಸಂಪುಟ ಉಸಮಿತಿ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, ಬರ ಪರಿಸ್ಥಿತಿಯ ಮಾಹಿತಿ ನಿಮಗಿದೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದೀರೋ ಅಥವಾ ನಿಮ್ಮದೇ ಪಕ್ಷ ಇದನ್ನು ನಿಭಾಯಿಸುವಲ್ಲಿ ಹೇಗೆ ಸೋತಿದೆ ಎಂದು ಪರೋಕ್ಷವಾಗಿ ತಿಳಿಸುತ್ತಿದ್ದೀರೋ? ಎಂದು ಪ್ರಶ್ನಿಸಿದೆ.
ಮುಂದುವರೆದು ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದೆ ಎಂಬ ಮೂಲಕ ನಿಮ್ಮ ನಿರೀಕ್ಷೆ ಇನ್ನಷ್ಟು ಜಾಸ್ತಿಯಿತ್ತು ಎಂಬುದನ್ನೂ ತಾವು ತೋರಿಸಿಕೊಟ್ಟಿದ್ದೀರಿ. ಈಗಾಗಲೇ ಕಲುಷಿತ ನೀರಿಗೆ ಸಾಕಷ್ಟು ಜೀವಗಳು ಬಲಿಯಾಗಿವೆ, ಹೀಗಿರುವಾಗಲೂ ಎಲ್ಲಾ ಇಲಾಖೆಯ ಒಳಗೂ ಮೂಗು ತೂರಿಸುವ ನೀವು ಜಿಲ್ಲಾ ಸಿಇಒಗಳಿಗೆ ಸೂಚನೆ ನೀಡಿ ಕೈ ತೊಳೆದುಕೊಂಡರೆ ಸಾಕೇ? ಎಂದು ಕೇಳಿದೆ.
ಮಾನ್ಯ @PriyankKharge ಅವರೇ,
— BJP Karnataka (@BJP4Karnataka) September 5, 2023
ಬರ ಪರಿಸ್ಥಿತಿಯ ಮಾಹಿತಿ ನಿಮಗಿದೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದೀರೋ ಅಥವಾ ನಿಮ್ಮದೇ ಪಕ್ಷ ಇದನ್ನು ನಿಭಾಯಿಸುವಲ್ಲಿ ಹೇಗೆ ಸೋತಿದೆ ಎಂದು ಪರೋಕ್ಷವಾಗಿ ತಿಳಿಸುತ್ತಿದ್ದೀರೋ?
ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದೆ ಎಂಬ ಮೂಲಕ ನಿಮ್ಮ ನಿರೀಕ್ಷೆ ಇನ್ನಷ್ಟು ಜಾಸ್ತಿಯಿತ್ತು… https://t.co/hPMwkcj7cA
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಎಲ್ಲಾ ಸಚಿವಾಲಯಗಳ ಜವಾಬ್ದಾರಿಯನ್ನೂ ಪ್ರಿಯಾಂಕ್ ಖರ್ಗೆಯವರಿಗೆ ಗುತ್ತಿಗೆ ನೀಡಿದ್ದಾರೆ. ತಮ್ಮ ಇಲಾಖೆಗಿಂತ ಬೇರೆ ಇಲಾಖೆಯ ಕಿಟಕಿಯಲ್ಲಿ ನೋಡುವುದೇ ಅವರಿಗೆ ಹೆಚ್ಚು ಆಪ್ಯಾಯಮಾನವಾದ ಕೆಲಸ ಎಂಬುದನ್ನು ರಾಜ್ಯದ ಜನ ಈ ಹಿಂದೆಯೂ ಕಂಡಿದ್ದಾರೆ. ನಿರಂತರ ನಿರ್ಲಕ್ಷ್ಯಕ್ಕೆ ಒಳಗಾದ ಡಾ.ಜಿ.ಪರಮೇಶ್ವರ್ ಅವರನ್ನೂ ಈ ಸರ್ಕಾರದಲ್ಲಿಯೂ ಸುಮ್ಮನೇ ಕೂರಿಸಿ ಆ ಜವಾಬ್ದಾರಿಗಳನ್ನೂ ಪ್ರಿಯಾಂಕ್ ಖರ್ಗೆಯವರಿಗೆ ನೀಡಲಾಗಿದ್ದು ಗೊತ್ತೇ ಇದೆ ಎಂದು ತಿಳಿಸಿದೆ.
ಈಗ ಕಂದಾಯ ಇಲಾಖೆಯ ಜವಾಬ್ದಾರಿಯನ್ನೂ ಖರ್ಗೆಯವರು ಸಂಪೂರ್ಣವಾಗಿ ವಹಿಸಿಕೊಂಡಿದ್ದಾರೆ. ಅಂಕಿ-ಅಂಶ ನೀಡಿದ ಮಾತ್ರಕ್ಕೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅದನ್ನು ಪರಿಹರಿಸುವ ಜವಾಬ್ದಾರಿಯೇ ಇಲ್ಲದವರು ಮಾತನಾಡಿಯೂ ಪ್ರಯೋಜನವಿಲ್ಲ. ಒಂದೆಡೆ ತಾವೇ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ಅನುಷ್ಠಾನ ಮಾಡಲು ಹೆಣಗುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಯಾವುದನ್ನೂ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ನಿರಂತರ ನಡೆಯುತ್ತಿರುವ ರೈತರ ಆತ್ಮಹತ್ಯೆಯ ವಿಚಾರಗಳಿಗೆ ಪರಿಹಾರ ಮಾರ್ಗಗಳೇ ಕಾಣದಷ್ಟು ಕಾಂಗ್ರೆಸ್ ಆಡಳಿತ ಕುರುಡಾಗಿದೆ.
ಮಾನ್ಯ ಪ್ರಿಯಾಂಕ್ ಖರ್ಗೆ ಸಾಹೇಬರು ತಮ್ಮ ಗಮನವನ್ನು ರಾಜ್ಯಾದ್ಯಾಂತ ಹರಿಸುವ ಮೊದಲು ಅವರದೇ ತವರು ಜಿಲ್ಲೆಯ ಸಮಸ್ಯೆಗಳ ಕಡೆಗೆ ಮೊದಲು ಗಮನ ಹರಿಸಬೇಕು. ಕಲಬುರ್ಗಿ ಮರಳು ಮಾಫಿಯಾ, ಪೊಲೀಸರ ಹತ್ಯೆ, ಪುಡಿ ರೌಡಿಗಳ ಗೂಂಡಾಗಿರಿ, ನಿಮ್ಮ ಬೆಂಬಲಿಗರಿಂದ ನಡೆಯುತ್ತಿರುವ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣಗಳ ಬಗ್ಗೆ ಒಂದಷ್ಟು ಅಂಕಿ-ಅಂಶಗಳನ್ನಾದರೂ ತರಿಸಿ ನೋಡುವುದು ಒಳಿತು. ನಿಮ್ಮ ಇಲಾಖೆ ಮತ್ತು ಕ್ಷೇತ್ರದ ಜನತೆ ನೀಡಿದ ಜವಾಬ್ದಾರಿಯನ್ನಾದರೂ ಸರಿಯಾಗಿ ನಿರ್ವಹಿಸಿ ಅದಕ್ಕೆ ನ್ಯಾಯ ಒದಗಿಸಿ ಎಂದು ಸಲಹೆ ನೀಡಿದೆ.












Click it and Unblock the Notifications