Drone Prathap Case: ಡ್ರೋನ್ ಪ್ರತಾಪ್ ಜೊತೆ ಇನ್ನಿಬ್ಬರಿಗೂ ಎದುರಾಯ್ತು ಸಂಕಷ್ಟ!
Drone Prathap Sodium Blast: ಸದಾ ಒಂದಿಲ್ಲೊಂದು ವಿವಾದಾತ್ಮಕ ವಿಷಯಗಳಿಂದಲೇ ಸುದ್ದಿಯಲ್ಲಿ ಇರುವ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಪ್ರತಾಪ್ ಇದೀಗ ಪ್ರಯೋಗದ ಹೆಸರಿನಲ್ಲಿ ಮಾಡಿರುವ ಸ್ಟಂಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಾಪ್ ಜೊತೆಗೆ ಇದೀಗ ಇನ್ನಿಬ್ಬರಿಗೂ ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್‌ನನ್ನು ಇಡೀ ಕರ್ನಾಟಕವೇ ಒಂದು ಸಮಯದಲ್ಲಿ ಮೆಚ್ಚುಗೆಯ ಕಣ್ಣುಗಳಿಂದ ನೋಡಿತ್ತು. ಯಾವಾಗ ಪ್ರತಾಪ್ ಮೋಸ ಮಾಡಿದ್ದಾನೆ ಎನ್ನಲಾದ ಸುದ್ದಿ ಬಂತೋ ಆಗ ತೀವ್ರ ನೆಗೆಟಿವ್ ಆಗಿತ್ತು. ಅದಾದ ಮೇಲೆ ಬಿಗ್‌ಬಾಸ್‌ನಲ್ಲಿ ಸ್ಪರ್ಧೆ ಮಾಡಿದ ಮೇಲೆ ಅವರ ಲಕ್ ಬದಲಾಗಿತ್ತು. ಜನ ಪ್ರತಾಪ್‌ಗೆ ಇನ್ನೊಂದು ಅವಕಾಶವನ್ನು ಕೊಟ್ಟಿದ್ದರು. ಆದರೆ, ಈಗ ಪ್ರತಾಪ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಎನ್ನುವ ರಾಸಾಯನಿಕವನ್ನು ಬಳಸಿ ಸ್ಫೋಟಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಾಪ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಡ್ರೋನ್ ಪ್ರತಾಪ್‌ನೊಂದಿಗೆ ಇನ್ನಿಬ್ಬರು ಸೇರಿ ಒಟ್ಟು ಮೂವರ ಮೇಲೆ ತುಮಕೂರಿನ ಮಿಡಿಗೇಶಿ ಪೊಲೀಸ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇಲ್ಲಿ ಮಧುಗಿರಿ ತಾಲ್ಲೂಕಿನ ಜನಕಲೋಟಿ ಗ್ರಾಮದಲ್ಲಿರು ರಾಯರ ಬೃಂದಾವನ ಎನ್ನುವ ಫಾರಂ ಹೌಸ್ನಲ್ಲಿರುವ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಎಡವಟ್ಟು ಮಾಡಿದ್ದರು. ಪರೀಕ್ಷೆಯ ಹೆಸರಿನಲ್ಲಿ ಪ್ರತಾಪ್ ಮಾಡಿರುವ ಎಡವಟ್ಟು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಇನ್ನಿಬ್ಬರಿಗೆ ಸಂಕಷ್ಟ: ಈ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ನೊಂದಿಗೆ ಇನ್ನಿಬ್ಬರಿಗೂ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ. ಕೃಷಿವೊಂಡವೊಂದರಲ್ಲಿ ಮಾಡಿದ್ದ ಈ ಪ್ರಯೋಗವನ್ನು ಪ್ರತಾಪ್ ಅವರೊಂದಿಗೆ ಇದ್ದವರು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದರು. ಇದರಲ್ಲಿ ಇದೀಗ ಇನ್ನಿಬ್ಬರಿಗೂ ಸಂಕಷ್ಟ ಸೃಷ್ಟಿಯಾಗಿದೆ.
ಈ ಘಟನೆಗೆ ಮುಖ್ಯವಾಗಿ ಕಾರಣರಾಗಿರುವ ಡ್ರೋನ್ ಪ್ರತಾಪ್ ಸೇರಿದಂತೆ ಕೃಷಿ ಹೊಂಡದ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎನ್ನಲಾಗಿದೆ. ರಾಯರ ಬೃಂದಾವನ ಫಾರಂ ಎನ್ನುವ ಮಾಲೀಕ ಜಿತೇಂದ್ರ ಜೈನ್ ಎನ್ನುವವರು ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದ ವ್ಯಕ್ತಿಯ ಮೇಲೂ ಪ್ರಕರಣದಾಖಲಾಗಿದೆ ಎನ್ನಲಾಗಿದೆ.
ಯಾವ ಸೆಕ್ಷನ್‌ಗಳಡಿ ದೂರು ದಾಖಲು: ಪ್ರತಾಪ್ ಸಿಂಹ ಹಾಗೂ ಈ ಕೇಸ್‌ಗೆ ಸಂಬಂಧಿಸಿದ ಇನ್ನಿಬ್ಬರ ಮೇಲೆ ದೂರು ದಾಖಲಾಗಿದೆ. ಈ ಕೇಸ್‌ನಲ್ಲಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 176, ಸಿಆರ್ಪಿಸಿ 158-ಎ & ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಪ್ರತಾಪ್ ಸಿಂಹ ಬಿಗ್‌ಬಾಸ್‌ನಿಂದ ಬಂದ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಬಿಗ್‌ಬಾಸ್‌ನಿಂದ ಬಂದ ಹಣದಿಂದ ಅವರು ಬಡವರಿಗೂ ಸಹಾಯ ಮಾಡಿದ್ದರು. ಅಲ್ಲದೆ ಹಲವರಿಗೆ ನೆರವು ನೀಡಿದ್ದರು. ಇದು ಜನರಲ್ಲಿ ಪ್ರತಾಪ್‌ನ ಬಗ್ಗೆ ಇದ್ದ ತಪ್ಪು ಭಾವನೆಗಳು ಹೋಗುವಂತೆ ಮಾಡಿದ್ದವು. ಆದರೆ, ಈಗ ನಡೆದಿರುವ ಬೆಳವಣಿಗೆ ಪ್ರತಾಪ್‌ನ ಮೇಲೆ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications