10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೋಷಕರೇ ಇಲ್ಲಿ ಗಮನಿಸಿ!
ಇನ್ನೇನು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಶುರುವಾಗಲಿವೆ, ಹೀಗಾಗಿ ವಿದ್ಯಾರ್ಥಿಗಳ ಪೋಷಕರಿಗೂ ಸಿಕ್ಕಾಪಟ್ಟೆ ಟೆನ್ಷನ್ ಇದ್ದೇ ಇರುತ್ತದೆ. ಮಕ್ಕಳು ಪರೀಕ್ಷೆಗೆ ಹೇಗೆ ತಯಾರಿನ ನಡೆಸಬೇಕು, ಇಷ್ಟೆಲ್ಲಾ ಒತ್ತಡದ ನಡುವೆ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗದ ರೀತಿ ಹೇಗೆ ನೋಡಿಕೊಳ್ಳಬೇಕು ಎಂಬುದೇ ದೊಡ್ಡ ಟೆನ್ಷನ್ ಆಗಿರುತ್ತದೆ. ಹಾಗೇ ಪರೀಕ್ಷೆ ಬರೆಯಲು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಕೂಡ ಸಹಾಯ ಮಾಡುತ್ತವೆ. ಇಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಹೌದು, ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಶುರುವಾಗುವ ಕಾರಣ ಆದಷ್ಟು ವೇಗವಾಗಿ ತಯಾರಿ ನಡೆಸಬೇಕಿದೆ. ಹೀಗಾಗಿ ವಿದ್ಯಾರ್ಥಿಗಳ ಸಿದ್ಧತೆಯನ್ನ ಬೆಂಬಲಿಸಲು CBSE 10ನೇ ತರಗತಿಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಸಾಕಷ್ಟು ಸಹಾಯ ಮಾಡುತ್ತವೆ. ಈ ಪ್ರಶ್ನೆ ಪತ್ರಿಕೆಗಳು ಬೋರ್ಡ್ ಪರೀಕ್ಷೆಗಳಲ್ಲಿ ಕಂಡುಬರುವ & ಮರುಕಳಿಸುವ ಪ್ರಶ್ನೆ ಮಾದರಿ ಸಂಪ್ರದಾಯ ಅನುಸರಿಸಿ ಸಹಾಯಕ ಮಾರ್ಗದರ್ಶಿಯಾಗಿ ಬೆಂಬಲ ನೀಡುತ್ತವೆ. ಈ ಪತ್ರಿಕೆಗಳನ್ನ ಪರಿಹರಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪರಿಕಲ್ಪನೆ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಎಷ್ಟು ವರ್ಷದ ಪ್ರಶ್ನೆ ಪತ್ರಿಕೆ ಲಭ್ಯ?
2019 ರಿಂದ 2023 ರವರೆಗೆ 10ನೇ ತರಗತಿಯ ಸಿಬಿಎಸ್‌ಇ (CBSE) ಪ್ರಶ್ನೆ ಪತ್ರಿಕೆಯನ್ನು ಅಭ್ಯಾಸ ಮಾಡುವುದು ಪರೀಕ್ಷೆಗೆ ತಯಾರಾಗಲು ಉತ್ತಮ ಮಾರ್ಗ ಎನ್ನಬಹುದು. ಜೊತೆಗೆ 2011 ರಿಂದ 2018ರವರೆಗಿನ ಪ್ರಶ್ನೆ ಪತ್ರಿಕೆಗಳು ಪ್ರಮುಖ ಪ್ರಶ್ನೆ, ಮಾದರಿ ಗುರುತಿಸಲು ನಿಮಗೆ ಸಹಾಯವನ್ನ ಮಾಡುತ್ತವೆ. ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ತಯಾರಾಗಲು ಸಹಾಯವನ್ನು ಮಾಡುತ್ತೆ. ನೀಮ್ಮ ಆತ್ಮವಿಶ್ವಾಸ ಹೆಚ್ಚಿಸಲು & ನಿಮ್ಮ ಮುಂಬರುವ ಪರೀಕ್ಷೆಯಲ್ಲಿ ಉತ್ತಮವಾಗಿ ಪ್ರಶ್ನೆಯ ಎದುರಿಸಲು ಸಹಾಯ ಮಾಡಲು, ನಾವು 10 ನೇ ತರಗತಿಯ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ನೀಡಿದ್ದೇವೆ, ಅದಕ್ಕಾಗಿ ಮುಂದೆ ಓದಿ.
10 ವರ್ಷದ ಪ್ರಶ್ನೆ ಪತ್ರಿಕೆಯಿಂದ...
ಅಂದಹಾಗೆ, ಹೀಗೆ 10 ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಬಿಡಿಸುವುದರಿಂದ ಏನೆಲ್ಲಾ ಪ್ರಯೋಜನ ಆಗಲಿದೆ ಗೊತ್ತೆ? ಇಲ್ಲಿ ಪ್ರಮುಖವಾಗಿ CBSE 10ನೇ ತರಗತಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದು ಅಂದರೆ ಹಳೆಯ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಮೂಲಕ ನಿಮಗೆ ಪರೀಕ್ಷೆಯ ಮಾದರಿ ಅರ್ಥವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯ ಬಗ್ಗೆ ಸಾಮಾನ್ಯ ಜ್ಞಾನ ಪಡೆಯಬಹುದು. ಪರೀಕ್ಷೆ ರಚನೆ ಮತ್ತು ಸ್ವರೂಪಗಳಿಗೆ ಒಗ್ಗಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಪ್ರಮುಖ ವಿಷಯ ಗುರುತಿಸಲು ಸಹಾಯ
ಜೊತೆಗೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಮರುಪರಿಶೀಲಿಸುವ ಮೂಲಕ, ಪುನರಾವರ್ತಿತ ವಿಷಯ ಹಾಗೂ ಪರೀಕ್ಷೆಯಲ್ಲಿ ಮಹತ್ವ ಪಡೆದ ಪ್ರಮುಖ ವಿಷಯಗಳನ್ನು ಗುರುತಿಸಬಹುದು. ಈ ಮೂಲಕ ಉದ್ದೇಶಿತ ಅಧ್ಯಯನ ಅವಧಿ ಮುಗಿಸಲು ಸಹಾಯಕವಾಗುತ್ತದೆ. ಇನ್ನುಳಿದಂತೆ ಮುಖ್ಯ ಪರೀಕ್ಷೆಗೆ ಕೂತಾಗ ಸಮಯವನ್ನು ಹೇಗೆ ನಿಭಾಯಿಸುವುದು? ಎನ್ನುವ ಬಗ್ಗೆಯೂ, ನಿಮಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ. ಈ ಮೂಲಕ ಒತ್ತಡವನ್ನು ಕೂಡ ಕಡಿಮೆ ಮಾಡಿ, ನಿಮಗೆ ಅನುಕೂಲ ಮಾಡಿಕೊಡಲಿದೆ ಇದು.
ಒಟ್ನಲ್ಲಿ ಇಷ್ಟೆಲ್ಲಾ ಸಹಾಯ ಮಾಡುವ ಹಳೆಯ ಪ್ರಶ್ನೆ ಪತ್ರಿಕೆಗಳ ಬಗ್ಗೆ ನಿಮಗೆ ಇಷ್ಟೆಲ್ಲಾ ಮಾಹಿತಿ ಇಲ್ಲಿ ಸಿಕ್ಕಿದೆ. ಹಾಗೇ ಇದರ ಜೊತೆಗೆ ವಿವಿಧ ವಿಷಯಗಳ ಬಗ್ಗೆ 10ನೇ ತರಗತಿಯ ಸಿಬಿಎಸ್‌ಇ (CBSE) ಪ್ರಶ್ನೆ ಪತ್ರಿಕೆಯ, ಕಳೆದ 10 ವರ್ಷಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಹೀಗಾಗಿ ಕಳೆದ 10 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನ ನೋಡಲು, ಹಾಗೂ ಆ ಪ್ರಶ್ನೆ ಪತ್ರಿಕೆಯ ಡೌನ್‌ಲೋಡ್ ಮಾಡಿಕೊಳ್ಳಲು ಮುಂದೆ ಓದಿ.











Click it and Unblock the Notifications