ಕೊಳ್ಳೆಗಾಲದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದವ ಸೆರೆ!

ಚಾಮರಾಜನಗರ, ನ.22 : ಭೂತ-ಪ್ರೇತ, ಮಾಟ-ಮಂತ್ರಕ್ಕೆ ಪ್ರಸಿದ್ಧಿ ಪಡೆದಿರುವ ಕೊಳ್ಳೆಗಾಲದ ಜನರು ಬೆಚ್ಚಿಬೀಳುವಂತೆ ಮಾಡಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹರಳೆ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ದೇವಾಲಯದ ಆವರಣದಲ್ಲಿ ರಕ್ತವನ್ನು ಹಾಕುತ್ತಿದ್ದ ಆರೋಪಿ ಗ್ರಾಮಸ್ಥರ ಕೈಗೆ ಸಿಕ್ಕಿದ್ದು, ಪೊಲೀಸರು ಆತನನ್ನು ಮನೆಗೆ ಕಳಿಸಿದ್ದಾರೆ.

ಕೊಳ್ಳೆಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಎರಡು ದಿನಗಳಿಂದ ದೇವಾಲಯ, ರಸ್ತೆ ಮುಂತಾದ ಕಡೆ ರಕ್ತದ ಕಲೆಗಳು ಪತ್ತೆಯಾಗಿತ್ತು. ಗ್ರಾಮಸ್ಥರು ಇದು ಬಾನಾಮತಿಯ ಕಾಟವೆಂದು, ಅನ್ಯ ಕೋಮಿನವರು ರಕ್ತತಂದು ದೇವಾಲಯ ಅಪವಿತ್ರಗೊಳಿಸುತ್ತಿದ್ದಾರೆ ಎಂದು ದೂರಿದ್ದರು. [ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ!]

Dog

ಗ್ರಾಮಸ್ಥರು ನಿದ್ದೆ ಬಿಟ್ಟು ಕಾದರು ರಕ್ತವನ್ನು ಹಾಕುತ್ತಿರುವುದು ಯಾರು? ಎಂಬುದು ಪತ್ತೆಯಾಗಿರಲಿಲ್ಲ. ಈ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕೋಮಿನ ನಡುವೆ ಶಾಂತಿ ಸಭೆ ನಡೆಸುವ ಹಂತಕ್ಕೂ ಪೊಲೀಸರು ತಲುಪಿದ್ದರು.[ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]

ಆದರೆ, ಶುಕ್ರವಾರ ಬೆಳಗ್ಗೆ ದೇವಾಲಯದ ಆವರಣದಲ್ಲೆಲ್ಲಾ ರಕ್ತದ ಕಲೆ ಮಾಡುತ್ತಿದ್ದ ಆರೋಪಿಯನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ನೋಡಿದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದು, ಆತನನ್ನು ಬಿಟ್ಟು ಕಳಿಸಿದ್ದಾರೆ.

ಹರಳೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣ್ಣ ಎಂಬುವವರಿಗೆ ಸೇರಿದ ನಾಯಿ ರಕ್ತದ ಕಲೆ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ನಾಯಿಯ ಮೂತ್ರದಲ್ಲಿ ರಕ್ತಸ್ರಾವವಾಗುತ್ತಿತ್ತು. ದೇವಾಲಯದ ಆವರಣದಲ್ಲಿ ರಾತ್ರ ನಾಯಿ ಮಲಗುತ್ತಿದ್ದರಿಂದ ಅಲ್ಲಿ ರಕ್ತದ ಕಲೆ ಬೀಳುತ್ತಿತ್ತು.

ಶುಕ್ರವಾರ ಬೆಳಗ್ಗೆ ನಾಯಿ ದೇವಾಲಯದ ಆವರಣದಲ್ಲಿ ಮಲಗಿದ್ದಾಗ ಗ್ರಾಮಸ್ಥರು ಇದನ್ನು ನೋಡಿದ್ದು, ತಕ್ಷಣ ಅದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ನೋಡಿದ ಪೊಲೀಸರು ಪ್ರಕರಣ ಸುಖಾಂತ್ಯವಾಯಿತು ಎಂದು ಆರೋಪಿಯನ್ನು ಠಾಣೆಯಿಂದ ಓಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+