ಕೇಂದ್ರ ಸರಕಾರದಿಂದ ಹಣ ತರುವ ದಮ್ಮು ತಾಕತ್ ನಿಮಗಿದೆಯೇ: ಮಧು ಬಂಗಾರಪ್ಪ ಸವಾಲು ಹಾಕಿದ್ದು ಯಾರಿಗೆ?

ಶಿವಮೊಗ್ಗ, ನವೆಂಬರ್‌ 27: ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕೇಂದ್ರ ಸರಕಾರಕ್ಕೆ ಕನಿಷ್ಠ ಸೌಜನ್ಯವು ಇಲ್ಲ. ನಮ್ಮ ರಾಜ್ಯದ ಸಚಿವರು ದೆಹಲಿಗೆ ಹೋದ್ರೂ ಅಧಿಕಾರಿಗಳನ್ನು ಮಾತನಾಡಿಸಲು ಆಗಲ್ಲ. ಕೇಂದ್ರ ಸರಕಾರದಿಂದ ಹಣ ತರುವ ದಮ್ಮು ತಾಕತ್ ಇದೆಯಾ ಎಂದು ಬಿಜೆಪಿ ನಾಯಕರನ್ನ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬರಗಾಲ ನಿರ್ವಹಣೆ ಮಾಡುವುದಕ್ಕೆ ಸರಕಾರ ಕ್ರಮ ವಹಿಸಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಒಂದು ತಿಂಗಳ ನಂತರ ತೊಂದರೆ ಬರಬಹುದು. ಬಹಳ ಆಹಾಕಾರ ಆಗೋದು ನೀರಿಗೆ. ಮೇವಿಗೆ ಯಾವುದೇ ತೊಂದರೆ ಇಲ್ಲ. ಜಿಲ್ಲೆಯ 238 ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಹುದು.

madhu-bangarappa-questions

ಜೆಪಿಯವರು ಬರಿ ಸರಕಾರ ಬೀಳಿಸುವ ಯೋಚನೆಯಲ್ಲೇ ಇದ್ದಾರೆ. ಅವರಿಗೆ 6-7 ತಿಂಗಳು ಆದರೂ ಅವರ ಯೋಗ್ಯತೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿರಲಿಲ್ಲ. ಪಂಚ ರಾಜ್ಯ ಚುನಾವಣೆ ಫಲಿತಾಂಶ ಬರಲಿ ಅಡ್ರೆಸ್ ಇಲ್ಲದಾಗೆ ಹೋಗ್ತಾರೆ. ಅವರ ಯೋಗ್ಯತೆಗೆ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಆಗಲಿಲ್ಲ ಎಂದು ರಾಜ್ಯಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ರೈತರಿಗೆ ನೀಡುವ ವಿದ್ಯುತ್ ಪೂರೈಕೆ ಸಮಯದಲ್ಲಿ ವ್ಯತ್ಯಾಸ ಆಗಬಹುದು. ಖಜಾನೆಯಲ್ಲಿ ದುಡ್ಡಿಲ್ಲ, ರಾಜ್ಯದಲ್ಲಿ ವಿದ್ಯುತ್ ಇಲ್ಲ ಅಂತಾ ಬಿಜೆಪಿಯವರು ಅಪಪ್ರಚಾರ ಮಾಡಿದ್ರು. ಅಂತಹ ಸಮಸ್ಯೆ ‌ಇಲ್ಲ. ಖಜಾನೆಯಲ್ಲಿ ದುಡ್ಡಿದೆ. ವಿದ್ಯುತ್ ಇದೆ. ವಿಪಕ್ಷ ನಾಯಕ ಅಶೋಕ್ ಸರಕಾರ ಅದಾಗೆ ಬಿದ್ದು ಹೋಗ್ತದೆ ಅಂದಿದ್ದಾರೆ. ಸರಕಾರ ಬೀಳಿಸೋದೆ ಅವರ ಕೆಲಸನಾ..? ಅಶೋಕ್ ಅವರು ಡಿಸಿಎಂ ಆಗಿದ್ದವರು. ಅವರಿಗು ಸರಕಾರ ನಡೆಸಿ ಅನುಭವ ಇದೆ. ಆಡಳಿತ ಪಕ್ಷಕ್ಕೆ ಸಲಹೆ ಸಹಕಾರ ಕೊಡಬೇಕು. ಅದು ಬಿಟ್ಟು ಸರಕಾರ ಬೀಳಿಸೋದೆ ಅವರ ಕೆಲಸವಲ್ಲ. ಮನಸ್ಸಿಗೆ ಬಂದಾಗೆ ಮಾತಾಡೋದೆ ಬಿಜೆಪಿಯವರ ಕೆಲಸ ಎಂದು ಕಿಡಿಕಾರಿದರು.

ಶಿವಮೊಗ್ಗ ರಾಗಿಗುಡ್ಡ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಗಿಗುಡ್ಡ ವಿಚಾರದಲ್ಲಿ ಬಿಜೆಪಿಯವರು ಶಾಂತಿ ಕದಡುವ ಪ್ರಯತ್ನ ಮಾಡಿದ್ರು. ಅದು ಸಾಧ್ಯವಾಗಲಿಲ್ಲ. ಶಿವಮೊಗ್ಗದ ಜನರು ಅವರ ಮುಖಕ್ಕೆ ಹೊಡೆದ್ರು. ನಮ್ಮ ಸರಕಾರ ಬಂದ ಮೇಲೆ ರಾಜ್ಯದ ಎಲ್ಲಾ ಕಡೆ ಶಾಂತಿ ನೆಲೆಸಿದೆ. ಶಾಲೆಗಳ ಮಾನಿಟರಿಂಗ್‌ ಜಿ.ಪಂ. ಕೈಯಲ್ಲಿದೆ. ಪಿಯುಸಿ ಕಾಲೇಜುಗಳ ಮಾನಿಟರಿಂಗ್ ಜಿ.ಪಂ. ಗೆ ಕೊಡ್ತಿದ್ದೇವೆ. ಈ ಬಗ್ಗೆ ಉಪನ್ಯಾಸಕರಿಗೆ ಯಾವುದೇ ಆತಂಕ ಬೇಡ, ಕೇವಲ ಮಾನಿಟರಿಂಗ್ ಅಷ್ಟೇ ಜಿ.ಪಂ. ವ್ಯಾಪ್ತಿಗೆ ವಹಿಸುತ್ತಿದ್ದೇವೆ.

ಅಡಕೆ ಸಂಶೋಧನಾ ಕೇಂದ್ರದ ವಿಚಾರವಾಗಿ ಮಾತನಾಡಿ, 2018 ರಲ್ಲಿ ಅಮಿತ್ ಶಾ ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಮಾಡ್ತೀವಿ. ಈ ಕೇಂದ್ರಕ್ಕೆ 500 ಕೋಟಿ ಕೊಡುತ್ತಿವಿ ಅಂದ್ರು ಹಣವನ್ನೇ ಕೊಡಲಿಲ್ಲ. ಇದೀಗ ಆರಗ ಜ್ಞಾನೇಂದ್ರ ಅಡಕೆ ವಿಚಾರವಾಗಿ ಪ್ರತಿಭಟನೆ ಮಾಡ್ತೀನಿ ಅಂತಾರೆ. ಆರಗ ಜ್ಞಾನೇಂದ್ರ ಅವರೇ ಮೊದಲು ನೀವು ಅಮಿತ್ ಶಾ ವಿರುದ್ದ ಪ್ರತಿಭಟನೆ ಮಾಡಿ. ಅವರು ಹೇಳಿದಾಗೆ 500 ಕೋಟಿ ಕೊಟ್ಟಿದ್ದರೆ ಇಷ್ಟೊತ್ತಿಗೆ ಫಲಿತಾಂಶ ಬರಬೇಕಿತ್ತು.

ಮಲೆನಾಡಿನಲ್ಲಿ ‌ಕಾಡಾನೆ ದಾಳಿ ವಿಚಾರವಾಗಿ ಉತ್ತರಿಸಿ, ಏನು ಮಾಡುವ ಆಗಿಲ್ಲ. ಅವುಗಳ ಜಾಗಕ್ಕೆ ನಾವು ಬಂದು ಬಿಟ್ಟಿದ್ದೀವಿ. ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆನೆ ಬರದಂತೆ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಜಾತಿ ಜನಗಣತಿ ಆಗಬೇಕು ಎಂಬುದು ನಮ್ಮ ‌ಪಕ್ಷದ ನಿಲುವು, ಜಾತಿ ಜನಗಣತಿ ಆದಷ್ಟು ಬೇಗ ಬಿಡುಗಡೆ ಆಗಬೇಕು.‌ ಡಿಕೆಶಿ ವಿರುದ್ದದ ಸಿಬಿಐ ಕೇಸ್ ಹಿಂಪಡೆದ ವಿಚಾರ. ಡಿಕೆಶಿ ಅವರ ಮೇಲಿನ‌ ಕೇಸನ್ನು ಹಿಂಪಡೆಯಬೇಕು ಅಂತಾ ಸಚಿವ ಸಂಪುಟ ನಿರ್ಧರಿಸಿತ್ತು. ಸಚಿವ ನಾಗೇಂದ್ರ ಅವರ ಮೇಲಿನ ಕೇಸನ್ನು ತೆಗೆಯಬೇಕು ಅಂತಾ ಬಂದ್ರು ತೆಗೆಯುವ ಬಗ್ಗೆ ‌ಯೋಚನೆ ಮಾಡುತ್ತೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+