ಎದೆನೋವು ಎಂದು ಬಂದ ಮಹಿಳೆಯ ಎದೆಗೆ ಮುತ್ತಿಡಲು ಹೋದ ವೈದ್ಯ: ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು, ಜೂನ್. 14: ವೈದ್ಯರಾದವರಿಗೆ ರೋಗಿಗಳ ದೇಹ ಪರಿಶೀಲಿಸಲು ಇರುವ ಅಧಿಕಾರ ಅತ್ಯಂತ ಶ್ರೇಷ್ಠದ್ದಾಗಿದ್ದು, ಅದನ್ನು ರೋಗ ಗುಣಪಡಿಸಲು ಮಾತ್ರ ಬಳಸಬೇಕು ಎಂದು ಹೈಕೋರ್ಟ್ ಸೂಚ್ಯವಾಗಿ ಹೇಳಿದೆ. ಅಲ್ಲದೆ, ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಆರೋಪದಲ್ಲಿ ವೈದ್ಯರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.
ತಮ್ಮ ವಿರುದ್ಧದ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮೂಲದ ಬೆಂಗಳೂರಿನ ಡಾ. ಎಸ್.ಚೇತನ್‌ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಲೈಂಗಿಕ ಶೋಷಣೆಯಾಗಬಾರದು
ಅಲ್ಲದೆ, ವೈದ್ಯ ವೃತ್ತಿಯಲ್ಲಿರುವವರಿಗೆ ರೋಗಿಯ ದೇಹವನ್ನು ಪರಿಶೀಲನೆ ನಡೆಸುವುದಕ್ಕೆ ಅವಕಾಶವಿದೆ. ಅದೊಂದು ಅತ್ಯಂತ ಶ್ರೇಷ್ಟ ಕಾರ್ಯವಾಗಿರಲಿದೆ. ಅದನ್ನು ರೋಗವನ್ನು ಗುಣಪಡಿಸುವ ಉದ್ದೇಶಕ್ಕೆ ಮಾತ್ರ ಬಳಸುವಂತಿರಬೇಕು. ದುರುದ್ದೇಶ ಪೂರ್ವಕವಾಗಿ ಬಳಕೆ ಮಾಡಿದಲ್ಲಿ ಅದು ಐಪಿಸಿ 354ಎ ಅಡಿ ಲೈಂಗಿಕ ಕಿರುಕುಳ ನೀಡಿದಂತಾಗಲಿದೆ ಎಂದು ಪೀಠ ತಿಳಿಸಿದೆ.
ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ಸಂದರ್ಭಗಳಲ್ಲಿ ಮಾತ್ರ ವೈದ್ಯರಲ್ಲಿಗೆ ಬರುತ್ತಾರೆ ಎಂಬ ಅಂಶವನ್ನು ವೈದ್ಯರಾದವರು ಗಮನದಲ್ಲಿಟ್ಟುಕೊಳ್ಳಬೇಕು. ರೋಗಿಯನ್ನು ಪರೀಕ್ಷೆಗೆ ಗುರಿಪಡಿಸುವ ವೈದ್ಯರಿಗಿರುವ ಅಧಿಕಾರವು ಲೈಂಗಿಕ ಶೋಷಣೆಗೆ ಅವಕಾಶಕ್ಕೆ ಕಾರಣವಾಗಬಹುದು ಎಂದು ನ್ಯಾಯಪೀಠ ಹೇಳಿದೆ.

ರೋಗಿಗಳ ರೌರ್ಬಲ್ಯವನ್ನು ವೈದ್ಯರು ಅಸ್ತ್ರವನ್ನಾಗಿ ಬಳಸಬಾರದು, ರೋಗಿಯು ವೈದ್ಯರ ಮೇಲಿನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ರೋಗಿಯ ದೇಹದ ಪರಿಶೀಲಿಸುವುದಕ್ಕೆ ಇರುವ ಅಧಿಕಾರವನ್ನು ಲೈಂಗಿಕ ಕಿರುಕುಳ ನೀಡುವುದಕ್ಕೆ ಬಳಸವುದನ್ನು ಒಪ್ಪುಲು ಸಾಧ್ಯವಿಲ್ಲ. ಅಂತಹ ಕೃತ್ಯ ನಡೆದಲ್ಲಿ ಅದು ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಲಿದೆ.
ಈ ರೀತಿಯ ಕೃತ್ಯ ಬೆಳಕಿಗೆ ಬಂದಲ್ಲಿ ವೈದ್ಯರು ಮತ್ತು ರೋಗಿಯ ನಡುವೆ ವಿಶ್ವಾಸದ ಸಂಬಂಧಗಳು ನಾಶವಾಗಲಿದೆ ಎಂದು ಪೀಠ ಹೇಳಿದೆ. ವೈದ್ಯರು ರೋಗಿಗಳನ್ನು ಪರಿಶೀಲಿಸುವ ವೇಳೆ ಲೈಂಗಿಕ ಮಿತಿಗಳ ಕುರಿತಂತೆ ಭಾರತೀಯ ವೈದ್ಯಕೀಯ ಮಂಡಳಿ ತನ್ನ ಜಾಲಾತಾಣದಲ್ಲಿ ವಿವರಿಸಲಾಗಿದೆ.
ವೈದ್ಯರು- ರೋಗಿಯ ಸಂಬಂಧವನ್ನು ವೈಯಕ್ತಿಕ, ಸಾಮಾಜಿಕ ವ್ಯವಹಾರ ಅಥಾವ ಲೈಂಗಿಕ ಲಾಭಕ್ಕೆ ಬಳಕೆ ಮಾಡುಕೊಳ್ಳುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ. ಆದರೆ, ಅರ್ಜಿದಾರ ವೈದ್ಯರು ಮೇಲ್ನೋಟಕ್ಕೆ ಈ ಮಾರ್ಗಸೂಚಿಗಳನ್ನು ಉಲ್ಲಂಗಿಸಿದ್ದಾರೆ. ಹೀಗಾಗಿ ಪ್ರಕರಣದ ಕುರಿತು ಕನಿಷ್ಟ ತನಿಖೆ ನಡೆಯಬೇಕಾಗಿದೆ. ಅಲ್ಲದೆ, ಪ್ರಕರಣ ರದ್ದುಗೊಳಿಸುವಂತೆ ಕೋರಿರುವ ವೈದ್ಯರು ಕೇವಲ ವೈದ್ಯರಾಗಿರದೆ ಆರೋಪಿ ಸ್ಥಾನದಲ್ಲಿದ್ದಾರೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರ ವೈದ್ಯರಾರಾಗಿರುವ ಜೆಪಿ ನಗರದ ಏಳನೇ ಹಂತದಲ್ಲಿ ಆರ್ಬ್‌ಸ್ಕೈ ಆಸ್ಪತ್ರೆಗೆ ಎದೆ ನೋವು ಇರುವ ಮಹಿಳೆಯೊಬ್ಬರು ಬಂದು ಪರೀಕ್ಷೆಗಾಗಿ ಬರುತ್ತಾರೆ. ಅವರನ್ನು ಪರಿಶೀಲಿಸಿದ ಅರ್ಜಿದಾರ ಚೇತನ್ ಅವರು ಇಸಿಜಿ ಮತ್ತು ಎಕ್ಸ್‌ರೇ ಪರೀಕ್ಷೆ ನಡೆಸುವಂತೆ ಸೂಚಿಸಿ ಆಕೆ ಮೊಬೈಲ್ ಸಂಖ್ಯೆಯನ್ನು ಪಡೆದು ವಾಟ್ಸ್‌ಪ್ ಮಾಡುವುದಾಗಿ ತಿಳಿಸಿರುತ್ತಾರೆ. ಬಳಿಕ ಎಲ್ಲ ದಾಖಲೆಗಳನ್ನು ವಾಟ್ಸ್‌ಪ್ ಮೂಲಕ ಕಳುಹಿಸಿ ತನ್ನ ಖಾಸಗಿ ಪ್ರಸಿದ್ಧಿ ಕ್ಲಿನಲ್‌ಗೆ ಬಂದು ಭೇಟಿಯಾಗುವಂತೆ ಸಲಹೆ ನೀಡಿದ್ದರು.
2024ರ ಮಾರ್ಚ್ 21ರಂದು ಕ್ಲಿನಿಕ್‌ಗೆ ಒಬ್ಬರೇ ಬಂದಿದ್ದ ಮಹಿಳಾ ರೋಗಿಯನ್ನು ಕೊಠಡಿಗೆ ಕರೆದೊಯ್ದು ಮಲಗಲು ಸೂಚಿಸಿ ಎದೆಯ ಮೇಲೆ ಸ್ಟೆಥಾಸ್ಕೋಪ್ ಇಟ್ಟು ಪರಿಶೀಲಿಸಿದರು. ಬಳಿಕ ಆಕೆಯ ಉಡುಪುಗಳನ್ನು ಮೇಲಕ್ಕೆ ಸರಿಸಿ ತನ್ನ ಕೈಯಿಂದ ಎದೆಯನ್ನು ಸ್ಪರ್ಶಿಸಿ, ಎಡ ಎದೆ ಭಾಗವನ್ನು ಮುತ್ತಿಡಲು ಪ್ರಯತ್ನಿಸಿದರು.
ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ಕ್ಲಿನಿಕ್‌ನಿಂದ ಹೊರ ಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿ ಮರುದಿನ ದಿನ ಅಂದರೆ 2024ರ ಮಾರ್ಚ್ 22 ರಂದು ಲೈಂಗಿಕ ಕಿರುಕುಳದ ಆರೋಪದಲ್ಲಿ ದೂರು ದಾಖಲಿಸಿದ್ದರು. ದೂರಿನ ಸಂಬಂಧ ಪೊಲೀಸರು ಎಫ್‌ಐಆರ್‌ದಾಖಲಿಸಿ ತನಿಖೆ ಮುಂದುವರೆಸಿದ್ದರು. ಅದನ್ನು ಪ್ರಶ್ನಿಸಿ ಚೇತನ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications