Pavithra Gowda: ನಟ ದರ್ಶನ್ ಮೇಲೆ ಪವಿತ್ರಾ ಗೌಡ ಏನೆಲ್ಲಾ ಆರೋಪ ಮಾಡಿದ್ರು ಗೊತ್ತಾ?

Pavithra Gouwda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾಗೌಡ ಜೈಲು ಸೇರಿದ್ದಾಳೆ. ಇನ್ನೂ ಪವಿತ್ರಾ ಗೌಡನನ್ನು ನೋಡಲು ಅವರ ತಾಯಿ ತನ್ನ ತಂಗಿ ಮಗನ ಜೊತೆ ಜೈಲಿಗೆ ಬಂದಿದ್ದು, ತಾಯಿಯನ್ನು ನೋಡುತ್ತಿದ್ದಂತೆ ಪವಿತ್ರಾ ಗೌಡ ಬಿಕ್ಕಿ ಬಿಕ್ಕಿ ಅಳುತ್ತಾ ನಟ ದರ್ಶನ್‌ ಮೇಲೆ ಆರೋಪಗಳ ಸುರಿಮಳೆಯನ್ನೇ ಗೈದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿಯ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತನಿಖೆಯನ್ನು ಚುರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಈ ನಡುವೆಯೇ ತೆರೆಮರೆಯಲ್ಲಿ ಜೈಲು ಸೇರಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಪವಿತ್ರಾ ಗೌಡನನ್ನು ನೋಡಲು ಅವರ ತಾಯಿಯೂ ಕೂಡ ಜೈಲಿಗೆ ಭೇಟಿ ನೀಡುತ್ತಲೇ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Do you know Pavithra Gowda s allegations against actor Darshan

ಪವಿತ್ರಾ ಗೌಡ ಜೈಲು ಪಾಲಾಗಿ ಕೆಲವು ದಿನಗಳ ಬಳಿಕ ಅವರ ತಮ್ಮ ಜೈಲಿನ ಮುಂದೆ ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡ ಎನ್ನುವ ರೀತಿಯಲ್ಲಿ ಮಾಧ್ಯಮದವರಿಗೆ ನಿಮಗೆ ಮಾಡೋದಿಕ್ಕೆ ಏನು ಕೆಲ್ಸ ಇಲ್ವಾ ಎಂದು ಪ್ರಶ್ನಿಸಿದ್ದ. ಇದಕ್ಕೆ ನಿರೂಪಕರೊಬ್ಬರು ಬಾ.. ನಮ್ಗೆ ಮಾಡೋಕೆ ಏನು ಕೆಲ್ಸ ಇಲ್ಲ.. ಬಾ.. ಶೆಡ್‌ಗೆ ಹೋಗಿ ಕುಂಟೆಬಿಲ್ಲೆ ಆಡೋಣ ಬಾ.. ಎಂದು ಹೇಳುವ ಮೂಲಕ ಮುಟ್ಟಿನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದರು. ಅಲ್ಲಿಂದ ಇದೇ ವಿಡಿಯೋವನ್ನು ಇಟ್ಟುಕೊಂಡು ರೀಲ್ಸ್‌ಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ.

ಇನ್ನು ಜೈಲಿನಲ್ಲಿ ತಾಯಿ ಬಳಿ ಪವಿತ್ರಾ ಗೌಡ ಕೆಲ ಗಂಟೆಗಳ ಕಾಲ ಮಾತಾಡಿದ್ದು, ಇದೇ ವೇಳೆ ತಾಯಿ ಬಳಿ ಕಷ್ಟ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ನಟ ದರ್ಶನ್ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆಯೂ ತಾಯಿ ಬಳಿ ಹೇಳಿಕೊಂಡು ಪವಿತ್ರಾ ಗೌಡ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

"ನಾನು ಏನು ಮಾಡಿದ್ದೇನು? ಯಾವ ತಪ್ಪು ಮಾಡಿದೆ ಎಂದು ನನಗೆ ಈ ಶಿಕ್ಷೆ. ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಮಾಡಿದ್ದನ್ನು ನಾನು ತಿಳಿಸಿದ್ದೇ ತಪ್ಪಯ್ತಾ?," ಎಂದು ಪವಿತ್ರಾ ಗೌಡ ತನ್ನ ತಾಯಿ ಮುಂದೆ ಕಣ್ಣೀರಿಟ್ಟಿದ್ದಾರೆ ಎನ್ನಲಾಗುತ್ತಿದೆ.

"ಇನ್ನು ನನ್ನಿಂದಲೇ ತಪ್ಪಾಗಿದೆ ಎಂಬಂತೆ ದರ್ಶನ್ ವರ್ತಿಸುತ್ತಿದ್ದಾರೆ. ನನ್ನ ಬಾಳಿನ ಜೊತೆ ಆಟ ಆಡುತ್ತಿದ್ದಾರೆ ಎಂದು ಹೇಳುತ್ತಾ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರಂತೆ. ಮತ್ತೊಂದೆಡೆ ಜೈಲು ಊಟದಿಂದ ಬೇಸತ್ತ ಪವಿತ್ರಾ ಗೌಡ, ಅಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರಂತೆ. ಅಷ್ಟೇ ಅಲ್ಲದೇ ಮನೆಯ ಊಟ, ಮನೆಯ ವಸ್ತುಗಳ ಬಳಕೆಗೆ ಕೋರ್ಟ್ ಅನುಮತಿ ಕೇಳುವಂತೆ ರಿಟ್ ಅರ್ಜಿ ಸಲ್ಲಿಕೆ ಮಾಡಲು ತಾಯಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+