ಕುಮಾರಸ್ವಾಮಿ ಪ್ರಮಾಣ ವಚನದಿಂದ ದೂರ ಉಳಿದ ಸ್ಟಾಲಿನ್

ಚೆನ್ನೈ, ಮೇ 22: ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ನಂತರ ಇದೀಗ ಮತ್ತೋರ್ವ ನಾಯಕರು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್ ಬುಧವಾರ ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿರು ಕುಮಾರಸ್ವಾಮಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ.

ಇಂದು ತೂತುಕುಡಿಯಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ನಲ್ಲಿ 9 ರೈತರು ಸಾವನ್ನಪ್ಪಿದ್ದಾರೆ. ಈ ಸುದ್ದಿ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದು, ಮೃತ ಕುಟುಂಬಸ್ಥರ ಮನೆಗೆ ಸ್ಟಾಲಿನ್ ಭೇಟಿ ನೀಡಲಿದ್ದಾರೆ. ಹೀಗಾಗಿ ಬುಧವಾರದ ಪ್ರಮಾಣ ವಚನಕ್ಕೆ ಅವರು ಆಗಮಿಸುತ್ತಿಲ್ಲ.

DMKs MK Stalin to skip HD Kumaraswamys swearing in ceremony

"ನಾನು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನಕ್ಕೆ ನಾನು ಹೋಗುತ್ತಿಲ್ಲ. ತೂತುಕುಡಿಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ನಾನು ಕರ್ನಾಟಕಕ್ಕೆ ತೆರಳುವುದನ್ನು ರದ್ದುಗೊಳಿಸಿದ್ದೇನೆ," ಎಂದು ಸ್ಟಾಲಿನ್ ಪ್ರತಿಕ್ರಿಯೆ ನೀಡಿದರು.

"ಸ್ಟೆರ್ಲೈಟ್ ಪ್ಲಾಂಟ್ ವಿರುದ್ಧ ಹೋರಾಡುತ್ತಿರುವ ಮತ್ತು ಇದರಿಂದ ತೊಂದರೆಗೊಳಗಾದ ಜನರನ್ನು ಭೇಟಿಯಾಗಲು ನಾನು ನಾಳೆ ತೂತುಕುಡಿಗೆ ಹೋಗುತ್ತಿದ್ದೇನೆ," ಎಂದು ಸ್ಟಾಲಿನ್ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+