ಕೃಷಿ ಟ್ರ್ಯಾಕ್ಟರ್ ಗಳು ಸಾರಿಗೆ ವಾಹನ ವಿಭಾಗಕ್ಕೆ ಒಳಪಡಲಿದೆಯೇ?

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 21 : ಕೃಷಿಗೆ ಉಪಯೋಗಿಸುವಂತಹ ಟ್ರ್ಯಾಕ್ಟರ್ ಗಳನ್ನು ಸಾರಿಗೆ ವಾಹನ ವಿಭಾಗದಡಿ ತರಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸಿದೆ.

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

ಸದ್ಯದಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಾಗುವ ಸಾದ್ಯತೆಯಿದ್ದು ಈ ಸಂಬಂಧ ಕರಡು ರಚನೆ ಪೂರ್ಣಗೊಂಡಿದೆ. ಸದ್ಯ ರಾಜ್ಯದಲ್ಲಿ ಕೃಷಿಗಾಗಿ ಬಳಸುವ ಟ್ರ್ಯಾಕ್ಟರ್ ಗಳನ್ನು ಸಾರಿಗೆಯತರ ವಾಹನಗಳ (ವೈಟ್ ಬೋರ್ಡ್) ವಿಭಾಗದಲ್ಲಿ ನೋಂದಣಿ ಮಾಡಲಾಗುತ್ತಿದೆ.

DL compulsory for tractor drivers

ಆದರೆ ಟ್ರ್ಯಾಕ್ಟರ್ ಖರೀದಿಸುವ ಬಹಳಷ್ಟು ರೈತರಲ್ಲಿ ಪರವಾನಗಿಯೇ ಇಲ್ಲ. ಇಂತಹ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿರುವುದು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಕಾಯ್ದೆಯಿಂದ ಇದಕ್ಕೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ವಾಹನ ಚಾಲಕರಿಗೆ ಇಲ್ಲೊಂದು ಸಿಹಿ ಸುದ್ದಿ

ಈಗ ದ್ವಿಚಕ್ರ ವಾಹನಗಳು, ಓಮ್ನಿ, ಬಸ್, ಟ್ರ್ಯಾಕ್ಟರ್, ಟ್ರೇಲರ್, ಕಾರು, ಜೀಪು, ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನ ವಿಭಾಗದಲ್ಲಿದೆ. ಟ್ರ್ಯಾಕ್ಟರ್ ಗಳು ಸಾರಿಗೆ ವಾಹನ ವಿಭಾಗದಡಿ ಬಂದಲ್ಲಿ ಪ್ರತಿ ವರ್ಷಕ್ಕೊಮ್ಮೆ ಅರ್ಹತಾ ಪ್ರಮಾಣ ಪತ್ರ,ಪರ್ಮಿಟ್ ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ.

ಅರ್ಹತಾ ಪತ್ರ ಪಡೆಯಲು ಮಾಲೀಕನಿಗೆ ಡಿಎಲ್ ಕಡ್ಡಾಯವಾಗಿತ್ತು. ಡಿಎಲ್ ಇಲ್ಲದೆ ವಾಹನ ಚಲಾವಣೆಗೆ ಕಡಿವಾಣ ಬೀಳಲಿದೆ.
ಅಕ್ರಮಕ್ಕೆ ದಾರಿಯಾಗಿದ್ದ ನಿಯಮ: ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು, ಆರ್ ಟಿ ಒ ಅಲೆದಾಟ ತಪ್ಪಿಸಲು ಸಹಕಾರಿಯಾಗಲೆಂದು ಈ ಹಿಂದೆ ಕೇಂದ್ರವೇ ಸಾರಿಗೆ ವಾಹನ ವಿಭಾಗದಿಂದ ಸಾರಿಗೆಯೇತರ ವಿಭಾಗಕ್ಕೆ ಟ್ರ್ಯಾಕ್ಟರ್ ವಾಹನವನ್ನು ವರ್ಗಾವಣೆಗೊಳಿಸಿತ್ತು. ಇದನ್ನು ದುರುಪಯೋಗಪಟಿಸಿಕೊಂಡು ಹಲವು ಕೃಷಿಗಾಗಿ ಬಳಸಬೇಕಿದ್ದ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೇಕಾಬಿಟ್ಟಿ ಬಳಸತೊಡಗಿದ್ದರು.

ಇದೀಗ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾಗಿ ಟ್ರ್ಯಾಕ್ಟರ್ ಗಳು ಸಾರಿಗೆ ವಾಹನ ವಿಭಾಗದಡಿ ಬಂದಲ್ಲಿ ಸ್ವಯಂ ಆಗಿ ಚಾಲಕರು ಚಾಲನಾ ಪರವಾನಗಿ ಪಡೆಯಲಿದ್ದಾರೆ. ಜತೆಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ವಾಹನ ಬಳಸುವುದು ಕಾನೂನುಬದ್ಧವಾಗಿರಲಿದೆ ಎಂದು ಹಿರಿಯ ಆರ್ ಟಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central Government driving licence compulsory for tractor driver and agriculture purpose vehicles will fall under motor vehicle act.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ