ಡಿಕೆ ಸುರೇಶ್‌ ರಾಜಕೀಯ ನಿವೃತ್ತಿ ಹೇಳಿಕೆ: ನನ್ನಂತವನ ಗತಿ ಏನು ಎಂದ ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು, ಜೂನ್‌ 12: ರಾಜಕೀಯ ಬಿಡುವ ಬಗ್ಗೆ ಮಾತನಾಡಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್‌ ಅವರ ಮಾತಿಗೆ ಆಶ್ಚರ್ಯ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅವರೇ ಆಗೆಂದ ಮೇಲೆ ನನ್ನಂತವನ ಗತಿಯೇನು ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಂಸತ್‌ ಸದಸ್ಯ ಡಿಕೆ ಸುರೇಶ್‌ ಅವರು ನನಗೆ ರಾಜಕಾರಣ ಸಾಕು ಎನಿಸಿಬಿಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಇನ್ನು ತೀರ್ಮಾನ ಮಾಡಿಲ್ಲ. ಇನ್ನು ಗೊಂದಲದಲ್ಲಿ ಇದ್ದೇನೆ ಎಂದು ಕುಣಿಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.

DK Sureshs political retirement statement: HD Kumaraswamy said what is my pace

ಈ ಹಿನ್ನೆಲೆಯಲ್ಲಿ ಸೋಮವಾರ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಅವರು ನಾನು ಕಾರ್ಯಕರ್ತರಿಗೋಸ್ಕರ ಇದ್ದೇನೆ. ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟ ದಿನದಿಂದಲೇ ತೀಮಾರ್ನ ಮಾಡಬೇಕು ಎಂದುಕೊಂಡಿದ್ದೇ. ಈಗಿನ ರಾಜಕೀಯ ಪರಿಸ್ಥಿತಿಗಳು ನಂದು ಬಿಡಿ. ಈಗ ಎಂಪಿ ಇದಾರಲ್ಲ ಅವರೇ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಇನ್ನು ನನ್ನಂತವನ ಗತಿ ಏನು ಎಂದು ಹೇಳಿದರು.

ಬಹಳ ನಿರಾಸೆಯಾಗಿ ಭ್ರಷ್ಟಾಚಾರದ ಬಗ್ಗೆ ನಾವು ರಾಜಕೀಯದಲ್ಲಿ ಇರಬೇಕೋ ಬೇಡವೋ ಎಂದು ಅವರೇ ಯೋಚಿಸುವಂತಾಗಿದೆ. ಹೀಗಿದ್ದಲ್ಲಿ ನನ್ನಂತವನ ಪರಿಸ್ಥಿತಿ ಏನಾಗಬೇಡ. ಅಂತಹವರ ಬಗ್ಗೆ ಈ ಮಾತು ಬರಬೇಕಾದರೆ ಅವರು ಮಾಡಿರುವ ಸಾಕ್ಷಿ ಗುಡ್ಡೆಗಳು ಸಾಕಷ್ಟಿವೆ. ಅದನ್ನು ಪರಿಶೀಲಿಸಲಿ ಎಂದು ಎಚ್‌ಡಿಕೆ ಹೇಳಿದರು.

ಶಕ್ತಿ ಯೋಜನೆಗೆ ಕಾಂಗ್ರೆಸ್‌ ಚಾಲನೆ ಕೊಟ್ಟಿದೆ. ಆದರೆ, ಇದ್ಯಾವ ಯೋಜನೆಗಳಿಗೂ ನಾನು ತಲೆಕೆಡಿಸಿಕೊಳ್ಳಲ್ಲ. ಈ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡೋಕೆ ಇನ್ನೂ ಸಮಯ ಇದೆ. ನನಗೆ ಆತುರ ಇಲ್ಲ, ಮುಂದೆ ಚರ್ಚೆ ಮಾಡೋಣ. ಇನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ವಿದ್ಯುತ್ ದರ ಏರಿಕೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಮುಂದೆ ಆಗುವ ಅನಾಹುತಗಳ ಬಗ್ಗೆ ಹೇಳಿದ್ದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+