DK Suresh Assets: ಕೋಟಿ ಕೋಟಿ ಒಡೆಯ ಡಿಕೆ ಸುರೇಶ್! ಇಲ್ಲೆಲ್ಲಾ ಇದೆ ಜಮೀನು, ಮನೆ, ಸಾಲ!
ಬೆಂಗಳೂರು ಮಾರ್ಚ್ 29: ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹೋದರ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ದಿನ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಮೇಲಿರುವ ಸಾಲದ ವಿವರಗಳನ್ನು ಆಫಡವಿಟ್‌ನಲ್ಲಿ ಸಲ್ಲಿಕೆ ಮಾಡಿದ್ದಾರೆ. ಹಾಗಾದರೆ ದೇಶದಲ್ಲಿಯೇ ಅತಿ ಶ್ರೀಮಂತ ಡಿಕೆ ಸುರೇಶ್ ಬಳಿ ಆಸ್ತಿ ಎಷ್ಟಿದೆ ತಿಳಿಯೋಣ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ, ಹಾಲಿ ಸಂಸದ ಡಿ.ಕೆ.ಸುರೇಶ್ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇ.75ರಷ್ಟು ಏರಿಕೆಯಾಗಿದೆ. ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಗುರುವಾರ ನಾಮಪತ್ರ ಸಲ್ಲಿಸಿದರು.

ಚುನಾವಣಾ ಆಯೋಗದ ಮುಂದೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಸುರೇಶ್ ಅವರು 593 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ, ಇದು 2019 ರಲ್ಲಿ 338 ಕೋಟಿ ರೂಪಾಯಿ ಇತ್ತು. ರಾಮನಗರ ಮತ್ತು ಬೆಂಗಳೂರಿನಲ್ಲಿರುವ ಅವರ ಸ್ಥಿರ ಆಸ್ತಿಗಳಾದ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಮತ್ತು ಕೃಷಿ ಭೂಮಿಯ (ಪಿತ್ರಾರ್ಜಿತ) ಮೌಲ್ಯದಿಂದಾಗಿ ಸಂಸದರ ಆಸ್ತಿ ಮೌಲ್ಯವು ಹೆಚ್ಚಾಗಿದೆ.
ಸ್ಥಿರಾಸ್ತಿಗಳು ಬರೋಬ್ಬರಿ 486 ಕೋಟಿ ರೂಪಾಯಿ ಇದೆ. 2019 ರಲ್ಲಿ 33 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದ ಸುರೇಶ್ ಈಗ 106 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಐದು ವರ್ಷಗಳಲ್ಲಿ 220% ಹೆಚ್ಚಳವಾಗಿದೆ.

ಎಲ್ಲೆಲ್ಲಿ ಬೇಡಿಕೆ:
ವಿವಿಧ ಕಂಪನಿಗಳಲ್ಲಿ ಹೂಡಿಕೆ 2,14,87,182
ಎನ್‌ಎಸ್‌ಎಸ್, ಪೋಸ್ಟಲ್ ಸೇವಿಂಗ್ಸ್, ವಿಮೆ ಹೂಡಿಕೆ: 15,17,394
ಮನೆಯ ವಸ್ತುಗಳು ಮತ್ತು ಪೀಠೋಪಕರಣಗಳ ಮೌಲ್ಯ: 73,58,771
ಪ್ರಮುಖರಿಗೆ ನೀಡಿದ ಸಾಲದ ವಿವರ ಹೀಗೆ:
ಡಿಕೆ ಶಿವಕುಮಾರ್: 30,08,29,025
ಸುಮಾ ರಂಗನಾಥ್: 30,00,000
ಶ್ರೀಮತಿ ಗೌರಮ್ಮ: 4,75,00,000
ಐಶ್ವರ್ಯ ಶಿವಕುಮಾರ್: 7,94,42,717
ಆಕಾಶ್ ಕೆಂಪೇಗೌಡ: 1,06,03,060
ಒಟ್ಟು ಸಾಲ: 86,79,02,710
ಅಫಿಡವಿಟ್ನಲ್ಲಿ 21 ಕೃಷಿ ಭೂಮಿ, 27 ಕೃಷಿಯೇತರ ಜಮೀನು ಹೊಂದಿದ್ದಾರೆ. ಸದ್ಯದ ಕೃಷಿ ಭೂಮಿ ಮೌಲ್ಯ 32.75 ಕೋಟಿ ರೂ., ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ. ಆಗಿದೆ. 9 ವಾಣಿಕ್ಯ ಸಂಕೀರ್ಣಗಳ ಮೌಲ್ಯ 211.91 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಡಿಕೆ ಸುರೇಶ್ ರಾಮನಗರದ ಪೊಲೀಸ್ ಭವನ ಸರ್ಕಲ್ ನಿಂದ 1ಕಿಮೀ ನಡೆಸಿದರು. ಈ ವೇಳೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎನ್ನಲಾಗಿದೆ. ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಮನೆ ದೇವರು ಕಬ್ಬಾಳಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕನಕಪುರದ ಕೋಡಿಹಳ್ಳಿ ನಿವಾಸಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದುಕೊಂಡರು. ಬಳಿಕ ಮನೆದೇವರುಗಳಾದ ಕೆಂಕೇರಮ್ಮ, ಕಬ್ಬಾಳಮ್ಮ, ಮರಳೆಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸುರೇಶ್ ವಿರುದ್ಧ ಕೋವಿಡ್ -19 ಪ್ರೋಟೋಕಾಲ್ ಉಲ್ಲಂಘನೆಗಾಗಿ ಮೂರು ಪ್ರಕರಣಗಳಿವೆ. ಎರಡು ವರ್ಷಗಳ ಹಿಂದೆ ಮೇಕೆದಾಟು ಜಲಾಶಯ ಯೋಜನೆ ಅನುಷ್ಠಾನಕ್ಕೆ ಕೋರಿ ಸಂಸದ ಹಾಗೂ ಅವರ ಸಹೋದರ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಖ್ಯಾತ ಹೃದ್ರೋಗ ತಜ್ಞ ಹಾಗೂ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಟಿಕೆಟ್‌ನಲ್ಲಿ ಸುರೇಶ್ ವಿರುದ್ಧ ಸ್ಪರ್ಧಿಸಿದ್ದಾರೆ.












Click it and Unblock the Notifications