ತೆಲಂಗಾಣ: ಹೈಕಮಾಂಡ್ ಟಾಸ್ಕ್ ಗೆದ್ದ ಡಿಕೆಶಿ- ಸುನಿಲ್ ಕನುಗೋಲು ಸ್ಟ್ಯಾಟರ್ಜಿ ವರ್ಕ್ ಆಗಿದ್ದು ಹೇಗೆ?
ನವದೆಹಲಿ, ಡಿಸೆಂಬರ್ 03: ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅವರ ಪ್ರಬಲ ಕೋಟೆಯನ್ನು ಕಾಂಗ್ರೆಸ್ ಭೇದಿಸಿ, ಗೆಲುವು ಸಾಧಿಸಿದೆ. 118 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 65 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ಹೌದು, ತೆಲಂಗಾಣ ರಚನೆ ಆದಾಗಿನಿಂದ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ಉಮೇದಿನಲ್ಲಿದೆ. ಈಗಾಗಲೇ ಕರ್ನಾಟಕದಲ್ಲಿ ಬರೋಬ್ಬರಿ 224 ಕ್ಷೇತ್ರಗಳ ಪೈಕಿ 135 ಸ್ಥಾನಗಳನ್ನ ಗೆದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಗದ್ದುಗೆಯಲ್ಲಿ ಕೂರಿಸಿದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ಅವರ ಚಾಣಕ್ಷತನ ಹಾಗೂ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಟಾಸ್ಕ್ ಗೆದ್ದು, ಮತ್ತೊಮ್ಮೆ ತಮ್ಮ ಚಾಣಕ್ಷತನವನ್ನ ಸಾಭೀತು ಪಡಿಸಿಕೊಂಡಿದ್ದಾರೆ.

ಕರ್ನಾಟಕ ಮಾದರಿಯಲ್ಲೆ ಮತದಾರರಿಗೆ ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರೆಂಟಿ ಹೇಗೆ ಕೆಲಸ ಮಾಡಿವೇಯೋ ಅದೇ ರೀತಿ ತೆಲಂಗಾಣದಲ್ಲೂ ಆರು ಗ್ಯಾರಂಟಿಗಳ ಆಸರೆ ವರ್ಕೌಟ್ ಆಗಿದೆ ಎನ್ನಲಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಮಹಾಲಕ್ಷ್ಮೀ ಯೋಜನೆ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ರೈತು ಭರೋಸಾ, ಬಡವರಿಗೆ ವಸತಿ ಕಲ್ಪಿಸುವ ಇಂದಿರಮ್ಮ ಯೋಜನೆ, ವಿದ್ಯುತ್ ಬಿಲ್ಗೆ ಸಬ್ಸಿಡಿ ಕೊಡುವ ಗೃಹಜ್ಯೋತಿ, ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದವರ ಮಕ್ಕಳಿಗೆ ನೆರವು ನೀಡುವ ಯುವ ವಿಕಾಸಂ, ಆರೋಗ್ಯ ಇನ್ಷೂರೆನ್ಸ್, ಪಿಂಚಣಿ ಒದಗಿಸುವ ಚೇಯುತ ಯೋಜನೆ, ಈ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದು, ಈ ಆರು ಗ್ಯಾರಂಟಿಗಳು ಆಸರೆಯಾಗಿದೆ.
ಇನ್ನೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಇದ್ದ ಕಾರಣಗಳಲ್ಲಿ ಒಂದು ಅಲ್ಪಸಂಖ್ಯಾತರ ವೋಟು. ಬಹುಸಂಖ್ಯೆಯ ಮುಸ್ಲಿಮ್ ಮತಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದು, ಅದೇ ರೀತಿ ತೆಲಂಗಾಣದಲ್ಲೂ ಹೆಚ್ಚಿನ ಮುಸ್ಲಿಮ್ ಮತಗಳು ಕಾಂಗ್ರೆಸ್ಗೆ ಬಂದಿದೆ ಎನ್ನಲಾಗಿದೆ. ಎಐಎಂಐಎಂ ಪಕ್ಷಕ್ಕೆ ಬಹಳ ಕಡಿಮೆ ಸ್ಥಾನಗಳು ಸಿಕ್ಕಿರುವುದು ಇದಕ್ಕೆ ಸಾಕ್ಷಿ. ಮುಸ್ಲಿಮ್ ಮತಗಳು ಕಾಂಗ್ರೆಸ್ ಪರವಾಗಿ ಧ್ರುವೀಕರಣ ಆಗಿರುವುದು ಸ್ಪಷ್ಟವಾಗಿದೆ.
ಇನ್ನೂ ಕಾಂಗ್ರೆಸ್ ಸಿದ್ಧಾಂತ ಮತ್ತು ರಾಜಕೀಯ ತಂತ್ರಗಾರಿಕೆಯಲ್ಲಿ ಸುನಿಲ್ ಕನಗೋಲು ಅವರಿಗೆ ಇರುವ ಪರಿಣತಿಯನ್ನು ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದೆ. ಹೀಗಾಗಿ ಪಕ್ಷದ ಅತಿಮುಖ್ಯ ಸಭೆ ಮತ್ತು ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲೂ ಸುನಿಲ್ ಅವರ ಭಾಗಿಯಾಗಿ, ಅಭ್ಯರ್ಥಿಗಳ ಆಯ್ಕೆ ಹಾಗೂ ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಇನ್ನೂ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಜನ ತೆಲಂಗಾಣ ಕಾಂಗ್ರೆಸ್ ನಾಯಕರು ಕೆಲಸ ನಿರ್ವಹಿಸಿದ್ದು, ಅದರಂತೆ ತೆಲಂಗಾಣ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಜಮೀರ್ ಅಹಮದ್, ಬಿ ನಾಗೇಂದ್ರ ಸೇರಿದಂತೆ 100 ಕ್ಕೂ ಹೆಚ್ಚು ಜನ ಕಾಂಗ್ರೆಸ್ ನಾಯಕರು ಶ್ರಮವಹಿಸಿದ್ದಾರೆ.












Click it and Unblock the Notifications