• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಅಧಿಕಾರಿಗಳು ಯಾವ ತೊಂದರೆಯನ್ನೂ ಕೊಟ್ಟಿಲ್ಲ: ಡಿಕೆಶಿ ತಾಯಿ ಗೌರಮ್ಮ

|

ಬೆಂಗಳೂರು, ಅಕ್ಟೋಬರ್ 5: 'ಸಿಬಿಐ ಅಧಿಕಾರಿಗಳು ನನ್ನ ಬಳಿ ಯಾವ ದಾಖಲೆಯನ್ನೂ ನೀಡಲಿಲ್ಲ. ತೊಂದರೆಯನ್ನೂ ಕೊಡಲಿಲ್ಲ. ನನಗೇನೂ ಪ್ರಶ್ನೆ ಮಾಡಲಿಲ್ಲ' ಎಂದು ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ.

   ನನ್ ಮಗನ ಮೇಲೆ ತುಂಬಾ ಪ್ರೀತಿ ಕರ್ಕೊಂಡು ಹೋಗ್ಲಿ ಅವರ ಮನೆಗೆ | Oneindia Kannada

   ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿ ತೆರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಮ್ಮ, ತಮ್ಮಿಂದ ಅಧಿಕಾರಿಗಳು ಏನನ್ನೂ ಕೇಳಲಿಲ್ಲ ಎಂದರು.

   "ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ತುಂಬಾ ಪ್ರೀತಿ"

   'ಸಿಬಿಐ ಅಧಿಕಾರಿಗಳು ನನ್ನ ಬಳಿ ಒಂದೆರಡು ಮಾತನಾಡಿದರು. ನನಗೆ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಯಾವ ದೇವರ ಮೇಲಾದರೂ ಪ್ರಮಾಣ ಮಾಡಿ ಹೇಳುತ್ತೇನೆ, ಅವರು ನನಗೇನೂ ತೊಂದರೆ ಕೊಡಲಿಲ್ಲ. ಪಾಪ, ಯಾಕೆ ಅವರ ಮೇಲೆ ನಾವು ಆರೋಪ ಮಾಡಬೇಕು? ಬಂದರು, ನೋಡಿಕೊಂಡು ಹೋದರು' ಎಂದು ಗೌರಮ್ಮ ಹೇಳಿದರು.

   ಪರಿಶೀಲನೆ ಮಾಡಿ ಕೆಲವು ದಾಖಲೆ ಕೊಂಡೊಯ್ದಿದ್ದಾರೆ. ನನ್ನಿಂದ ಕೆಲವು ಸಹಿ ತೆಗೆದುಕೊಂಡರು. ಮಗನ ಮೇಲೆ ಕೆಲವರು ಪಿತೂರಿ ಮಾಡ್ತಾ ಇದ್ದಾರೆ. ನನ್ನ ಮಕ್ಕಳ ಜತೆ ಎಲ್ಲ ಜನರೂ ಇದ್ದಾರೆ ಎಂದರು.

   English summary
   DK Shivakumar's mother Gowramma said that, the CBI officers did not asked her any questions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X