RCB For Sale: ಆರ್‌ಸಿಬಿ ಖರೀದಿಯ ಬಗ್ಗೆ ಸ್ಫೋಟಕ ಅಪ್ಡೇಟ್ಸ್‌ ಕೊಟ್ಟ ಡಿ.ಕೆ ಶಿವಕುಮಾರ್‌!

ಬೆಂಗಳೂರು, ಜೂನ್‌ 11: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ 18 ವರ್ಷಗಳ ನಂತರ ಮೊದಲ ಬಾರಿ ಕಪ್ ಗೆದ್ದ ಕೆಲವೇ ದಿನಗಳಲ್ಲಿ ತಂಡ ಮಾರಾಟಕ್ಕೆ ತೆರೆದುಕೊಂಡಿದೆ ಎಂಬ ಸುದ್ದಿಗಳು ಕ್ರೀಡಾ ರಂಗದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಮಾಲೀಕರಾದ ಬ್ರಿಟಿಷ್ ದಿಗ್ಗಜ ಡಿಯಾಜಿಯೊ ತನ್ನ ಭಾಗವನ್ನು ಪೂರ್ಣವಾಗಿ ಅಥವಾ ಭಾಗಶಃ ಮಾರಾಟ ಮಾಡಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆರ್‌ಸಿಬಿ ತಂಡದ ಮೊತ್ತ ಸುಮಾರು 2 ಬಿಲಿಯನ್ ಡಾಲರ್ ಅಂದರೆ ಸುಮಾರು 16,834 ಕೋಟಿ ರೂಪಾಯಿ ವರೆಗೂ ಇರಬಹುದು ಎಂದು ಅಂದಾಜು ಮಾಡಲಾಗಿದೆ. 17 ವರ್ಷಗಳ ಬಳಿಕ ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಾಗಿನಿಂದಲೂ ಒಂದಲ್ಲ ಒಂದು ವದಂತಿಗಳು ಕೇಳಿ ಬರುತ್ತಲೆ ಇದೆ. ಇದರ ಭಾಗವಾಗಿ ರಾಯಲ್ ಚಾಲೆಂಜರ್ಸ್ ತಂಡ ಮಾರಾಟವಾಗುತ್ತೆ ಎಂಬ ಸುದ್ದಿ ಕೂಡ ಸದ್ದು ಮಾಡುತ್ತಿದ್ದು, ಇತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ RCB ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳು ಹಬ್ಬಿದೆ. ಅಲ್ಲದೇ ಆರ್‌ಸಿಬಿ ಖರೀದಿಗೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸುಳಿವು ಬಿಚ್ಚಿಟ್ಟಿದ್ರು. ಇದೀಗ ಇದಕ್ಕೆ ಡಿ.ಕೆ ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

DK Shivakumar Reaction on people s demand for him to buy RCB franchise

ಈ ಕುರಿತು ANI ಜೊತೆಗೆ ಮಾತನಾಡಿರುವ ಡಿಸಿಎಂ ಡಿ ಕೆ ಶಿವಕುಮಾರ್‌ ಅವರು, ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ನಾನು ಹುಚ್ಚನಲ್ಲ. ನಾನು ಚಿಕ್ಕಂದಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯನಾಗಿದ್ದೇನೆ ಅಷ್ಟೇ. ನನಗೆ ಇದ್ಯಾವುದಕ್ಕೂ ಸಮಯವಿಲ್ಲ, ನಾನು ರಾಜಕಾರಣಿ. ನನಗೆ ರಾಯಲ್​ ಚಾಲೆಂಜರ್ಸ್​​ ತಂಡದ ನಿರ್ವಹಣೆಯ ಭಾಗವಾಗಲು ಆಫರ್‌ಗಳು ಬಂದವು. ಆದರೆ ನಾನು ಒಪ್ಪಿಲ್ಲ ಎಂದು ಡಿ.ಕೆ ಶಿವಕುಮಾರ್​ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ನನ್ನ ಇನ್ಸಿಟಿಟ್ಯೂಷನ್​​ಗಳನ್ನೇ ನಿರ್ವಹಣೆ ಮಾಡಲು ಸಮಯವಿಲ್ಲದೇ ಕುಟುಂಬ ಸದಸ್ಯರಿಗೆ ಬಿಟ್ಟುಕೊಟ್ಟಿದ್ದೇನೆ. ಇನ್ನೂ ಆರ್​ಸಿಬಿ ಫ್ರಾಂಚೈಸಿ ನಿರ್ವಹಣೆ ಮಾಡುವಷ್ಟು ನನ್ನ ಹತ್ತಿರ ಸಮಯ ಇಲ್ಲ. ನನಗೆ RCB ಏಕೆ ಬೇಕು? ನಾನು ರಾಯಲ್ ಚಾಲೆಂಜ್ ಕುಡಿಯುವುದೇ ಇಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾ ಡಿಕೆ ಶಿವಕುಮಾರ್ ಅವರು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು (RCB) ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ನಿರಾಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+