ಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರು
ನವದೆಹಲಿ, ಸೆಪ್ಟೆಂಬರ್ 15: ಅಕ್ರಮ ಆಸ್ತಿ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಷರತ್ತು ಬದ್ಧ ಜಾಮೀನು ದೊರೆತಿದ್ದು, ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಡಿಕೆಶಿ ಪಾರಾಗಿದ್ದಾರೆ.
ಡಿಕೆಶಿ ಅವರ ದೆಹಲಿಯ ಮನೆಯಲ್ಲಿ ಪತ್ತೆಯಾದ ನಾಲ್ಕು ಕೋಟಿ ಹಣದ ಪ್ರಕರಣದ ಸಂಬಂಧ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಯಿಂದ ಬಂಧನ ಭೀತಿ ಇದ್ದ ಕಾರಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಇಂದು ಬೆಳಿಗ್ಗೆ ಆರ್ಥಿಕ ಅಪರಾಧ ನ್ಯಾಯಾಲಯ ವಿಚಾರಣೆ ನಡೆದು. ಆದೇಶವನ್ನು ಮಧ್ಯಾಹ್ನ ಮೂರು ಗಂಟೆಗೆ ಕಾಯ್ದಿರಿಸಿತ್ತು.

ಮಧ್ಯಾಹ್ನ ಪ್ರಕರಣ ಸಂಬಂಧ ಆದೇಶ ನೀಡಿದ ನ್ಯಾಯಾಲಯವು ಡಿ.ಕೆ.ಶಿವಕುಮಾರ್ ಅವರಿಗೆ ಷರತ್ತು ಬದ್ಧ ಜಾಮೀನು ದೊರೆತಿದೆ. ನ್ಯಾಯಾಧೀಶ ಎಂ.ಎಸ್.ಆಳ್ವ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಸಹ ನ್ಯಾಯಾಲಯದಲ್ಲಿ ಹಾಜರಿದ್ದರು.
ಎ1 ಡಿ ಕೆ ಶಿವಕುಮಾರ್, ಎ2 ಸುನೀಲ್ ಕುಮಾರ್ , ಎ3 ಆಂಜನೇಯ ಹಾಗೂ ಎ4 ರಾಜೇಂದ್ರಗೆ ಜಾಮೀನು ಮಂಜೂರಾಗಿದೆ. ಆರೋಪಿಗಳು ತಲಾ ರೂ.25 ಸಾವಿರ ನಗದು ಹಾಗೂ ಒಂದು ಲಕ್ಷ ಬಾಂಡ್ ಶ್ಯೂರಿಟಿ ನೀಡಬೇಕು. ಹಾಗೂ ಸಾಕ್ಷಿಗಳ ಮೇಲೆ ಪರಿಣಾಮ ಬೀರದಂತೆ ಆದೇಶಿಸಿ, ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.












Click it and Unblock the Notifications