"ಡಿಕೆಶಿಗೆ ಬೇಲ್, ನಮ್ಮ ಹುಲಿ ಅಂತು ಹೊರಗಡೆ ಬಂತು ಎಂದ ಫ್ಯಾನ್ಸ್"

ಬೆಂಗಳೂರು, ಅಕ್ಟೋಬರ್ 23: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಬುಧವಾರ (ಅಕ್ಟೋಬರ್ 23) ದಂದು ದೆಹಲಿ ಹೈಕೋರ್ಟಿನ ನ್ಯಾ. ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಸರಿ ಸುಮಾರು 50 ದಿನಗಳ ಬಳಿಕ ಡಿಕೆಶಿ ಜೈಲುವಾಸ ಅಂತ್ಯಗೊಳ್ಳುತ್ತಿದೆ. ದೆಹಲಿ ಹೈಕೋರ್ಟಿನಲ್ಲಿ ತನ್ನ ಸೋದರನಿಗೆ ಜಾಮೀನು ಸಿಗುತ್ತಿರುವ ಸುದ್ದಿ ಕೇಳಿದ ತಕ್ಷಣ ಕಾಂಗ್ರೆಸ್ಸಿನ ಏಕೈಕ ಸಂಸದ ಡಿಕೆ ಸುರೇಶ್ ಅವರು ಭಾವುಕರಾಗಿ ಆನಂದದಿಂದ ಕಣ್ಣೀರಿಟ್ಟಿದ್ದಾರೆ. ಡಿಕೆಶಿ ವಿಚಾರಣೆ, ತಿಹಾರ್ ಜೈಲಿನಲ್ಲಿ ಕಾಲ ಕಳೆಯುವ ಹೊತ್ತಿಗೆ ಡಿಕೆಶಿ ತಾಯಿ ಗೌರಮ್ಮ, ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯಾ ಸೇರಿದಂತೆ ಡಿಕೆಶಿ ಆಪ್ತರಿಗೆ ಸಮನ್ಸ್ ನೀಡಿದ್ದ ಜಾರಿ ನಿರ್ದೇಶನಾಲಯವು ಅನೇಕರ ವಿಚಾರಣೆ ಮುಂದುವರೆಸಿದೆ.

ಡಿಕೆಶಿ ಹೊಂದಿದ್ದಾರೆ ಎನ್ನಲಾದ 317 ಬ್ಯಾಂಕ್ ಖಾತೆ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಕೆಎಂ ನಟರಾಜ್ ವಾದಿಸಿ, ಹೆಚ್ಚಿನ ವಿಚಾರಣೆಗಾಗಿ ಸಮಯ ಕೋರಿದ್ದರು. ಆದರೆ, ಡಿಕೆಶಿ ಅವರು ಈಗಾಗಲೇ ಹೆಚ್ಚಿನ ಅವಧಿ ವಿಚಾರಣೆಯಲ್ಲಿ ಕಳೆದಿದ್ದಾರೆ.ಸಾಕ್ಷ್ಯ ನಾಶ ಪಡಿಸುವುದಿಲ್ಲ ಹಾಗೂ ತನಿಖಾ ಸಂಸ್ಥೆ ಮುಂದೆ ವಿಚಾರಣೆಗೆ ಕರೆದಾಗ ಹಾಜರಾಗಲು ಒಪ್ಪಿದ್ದಾರೆ ಅಲ್ಲದೆ ವಿದೇಶ ಪ್ರಯಾಣವನ್ನು ಮಾಡದೆ ಪಾಸ್ ಪೋರ್ಟ್ ಕೋರ್ಟಿಗೆ ಒಪ್ಪಿಸಲು ತಯಾರಿದ್ದಾರೆ. ಡಿಕೆಶಿ ಆರೋಗ್ಯದ ಪರಿಸ್ಥಿತಿ ಪರಿಗಣಿಸಿ ಜಾಮೀನು ನೀಡಿ ಎಂದು ಡಿಕೆಶಿ ಪರ ವಕೀಲ ಅಭಿಶೇಕ್ ಮನು ಸಿಂಘ್ವಿ ಮಾಡಿದ ವಾದವನ್ನು ಕೋರ್ಟ್ ಪುರಸ್ಕರಿಸಿ ಜಾಮೀನು ನೀಡಿದೆ. ಟ್ವಿಟ್ಟರಲ್ಲಿ ಅಭಿಮಾನಿಗಳ ಟ್ವೀಟ್ ಗಳು ಮುಂದಿವೆ...

ನಮ್ಮ ಹುಲಿ ಅಂತು ಹೊರಗಡೆ ಬಂತು ಎಂದ ಫ್ಯಾನ್ಸ್

ಡಿಕೆ ಶಿವಕುಮಾರ್ ಗೆ ಜಾಮೀನು ಸಿಕ್ಕ ಕೂಡಲೇ ಅಭಿಮಾನಿಗಳು ಖುಷಿಯಿಂದ ಟ್ವೀಟ್ ಮಾಡಿದ್ದಾರೆ. ನಮ್ಮ ಹುಲಿ ಅಂತು ಹೊರಗಡೆ ಬಂತು, ಬಿಜೆಪಿ ಬ್ಲೂ ಬಾಯ್ಸ್ ಗೆ ಇನ್ಮುಂದೆ ಇದೆ ಮಾರಿ ಹಬ್ಬ ಎಂದು ಟ್ವೀಟ್ ಮಾಡಿದ್ದಾರೆ.

Array

ಡಿಕೆಶಿ ಸುನಾಮಿ ರೀತಿ ರೀ ಎಂಟ್ರಿ

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ, ಜೋರಾಗಿ ಮಳೆ ಸುರಿಯುತ್ತಿದೆ. ಈಗ ನೋಡಿದರೆ ಸುನಾಮಿ (ಡಿಕೆಶಿ) ಎಂಟ್ರಿಯಾಗುತ್ತಿದೆ ಎಂದ ಮತ್ತೊಬ್ಬ ಡಿಕೆ ಶಿವಕುಮಾರ್ ಅಭಿಮಾನಿ.

ಉಪ ಚುನಾವಣೆಗೆ ಡಿಕೆಶಿ ಬಲ

ಡಿಸೆಂಬರ್ ನಲ್ಲಿ ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯಲಿದ್ದು, ಡಿಕೆ ಶಿವಕುಮಾರ್ ಬಿಡುಗಡೆಯಾಗಿರುವುದು ಕಾಂಗ್ರೆಸ್ಸಿಗೆ ಭಾರಿ ಬಲ ಸಿಕ್ಕಿದ್ದಂತಾಗಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿಯಲು ಬಹುಮತ ಸಾಬೀತು ಮಾಡಲು ಬಿಜೆಪಿ ಕನಿಷ್ಠ 8 ಸ್ಥಾನವನ್ನು ಗೆಲ್ಲಬೇಕಿದೆ ಎಂದು ಚುನಾವಣೆ ಲೆಕ್ಕಾಚಾರ ಹೇಳಿದ ಟ್ವೀಟ್.

Array

ಡಿಕೆಶಿಗೆ ಸಿಕ್ಕಿರೋದು ಜಾಮೀನಷ್ಟೇ

ಡಿಕೆಶಿಗೆ ಸಿಕ್ಕಿರೋದು ಜಾಮೀನಷ್ಟೇ, ಪ್ರಕರಣದಿಂದ ಖುಲಾಸೆಗೊಂಡಿಲ್ಲ. ನ್ಯಾ ಕೈಟ್ ನೀಡಿರುವ ಷರತ್ತುಬದ್ಧ ಜಾಮೀನು ಆದೇಶದ ಪ್ರತಿಯನ್ನು ಒಮ್ಮೆ ಓದಿ. ಸಾಕ್ಷ್ಯ ನಾಶ ಪಡಿಸಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ವಿದೇಶಕ್ಕೆ ಹಾರಿ ಹೋಗಬಾರದು ಎಂಬ ಷರತ್ತುಗಳನ್ನು ಓದಿ ಎಂದು ವಿವರಿಸಿದ ಟ್ವೀಟ್.

ಇನ್ನೂ ವಿಚಾರಣೆ ಬಾಕಿ ಇದೆ. ಯೋಚ್ನೆ ಮಾಡಿ

ಡಿಕೆ ಶಿವಕುಮಾರ್ ಗೆ ಕೊಟ್ಟಿರೋದು ಷರತ್ತು ಬದ್ದ ಜಾಮೀನು ಕಣ್ರಪ್ಪ. ಇನ್ನೂ ವಿಚಾರಣೆ ಬಾಕಿ ಇದೆ. ಯೋಚ್ನೆ ಮಾಡಿ ಸೆಲೆಬ್ರೆಟ್ ಮಾಡಿ..ಎಂದು ಡಿಕೆ ಶಿವಕುಮಾರ್ ಬಿಡುಗಡೆ ಸಂಭ್ರಮಾಚರಣೆಯಲ್ಲಿ ತೊಡಗಿರುವ ಅಭಿಮಾನಿಗಳಿಗೆ ಟಾಂಗ್ ಕೊಟ್ಟ ಟ್ವೀಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+