ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ : ಡಿಕೆ ರವಿ ಕಚೇರಿ ಸಿಬ್ಬಂದಿಗೆ ಸಿಬಿಐ ನೋಟಿಸ್

|
Google Oneindia Kannada News

ಕೋಲಾರ, ಜೂ. 04 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಕೋಲಾರದಲ್ಲಿ ರವಿ ಅವರ ಜೊತೆ ಕೆಲಸ ಮಾಡಿದವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. 8 ಸಿಬ್ಬಂದಿಗಳು ಸಿಬಿಐ ವಿಚಾರಣೆ ಎದುರಿಸಬೇಕಾಗಿದೆ.

ಸಿಬಿಐ ಅಧಿಕಾರಿಗಳ ತಂಡ ಸೋಮವಾರ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಿತ್ತು. ಬೆಂಗಳೂರಿಗೆ ವಾಪಸ್ ಆದ ತಂಡ ವಿಚಾರಣೆಗೆ ಹಾಜರಾಗುವಂತೆ ಸಿಬ್ಬಂದಿಗಳಿಗೆ ಈ ಮೇಲ್ ಮೂಲಕ ನೋಟಿಸ್ ಕಳಿಸಿದೆ. [ಡಿಕೆ ರವಿ ವರ್ಗಾವಣೆ ಖಂಡಿಸಿ ಕೋಲಾರ ಬಂದ್]

dk ravi

ಡಿಕೆ ರವಿ ಅವರು 2013ರ ಆಗಸ್ಟ್ 10ರಿಂದ 2014ರ ಅಕ್ಟೋಬರ್ 29ರ ತನಕ ಕೋಲಾರದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ರವಿ ಅವರ ಜೊತೆ ಕೆಲಸ ಮಾಡಿದ ಸಿಬ್ಬಂದಿಗಳು ಜೂ 8ರಿಂದ 10ರವೊಳಗೆ ಬೆಂಗಳೂರಿಗೆ ಆಗಮಿಸಿ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದೆ.[ಡಿಕೆ ರವಿ ಲವ್ ಅಫೇರ್ ಎಲ್ಲಾ ಕಟ್ಟುಕಥೆ ಎಂದ ಸಿಬಿಐ]

ಯಾವ ಸಿಬ್ಬಂದಿ : ಎಂಟು ಮಂದಿಯಲ್ಲಿ ಇಬ್ಬರು ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು, ಇಬ್ಬರು ವಾಹನ ಚಾಲಕರು, ಒಬ್ಬರು ಡಾಟಾ ಎಂಟ್ರಿ ಆಪರೇಟರ್, ಒಬ್ಬರು ಅಟೆಂಡರ್ ಮತ್ತು ಒಬ್ಬರು ಗನ್‌ಮ್ಯಾನ್ ಸೇರಿದ್ದಾರೆ. [ಡಿಕೆ ರವಿ ಸಾವು: ಸಿಬಿಐ ತನಿಖೆಯ ಮೊದಲ ಪುಟ!]

ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ನಂತರ ಅವರು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2015ರ ಮಾರ್ಚ್ 16ರಂದು ಅವರ ಶವ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು.

ಮೊದಲು ಕರ್ನಾಟಕ ಸರ್ಕಾರ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

English summary
Central Bureau of Investigation (CBI) has summoned all members of the personal staff section in the DC office in Kolar for questioning in the case of mysterious death D.K. Ravi who served as Kolar DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X